Khate: ಕರ್ನಾಟಕ ಸರ್ಕಾರದಿಂದ ಖಾತೆ ಮಾಡಿಸಲು ಹೊಸ ಅವಕಾಶ! ಇಂದೇ ಅರ್ಜಿ ಹಾಕಿ

Khate: ನಮಸ್ಕಾರ ರೈತ ಭಾಂದವರೇ, ನೀವೇನಾದರೂ ಜಮೀನಿನನ್ನು ಹೊಂದಿದ್ದು, ಇನ್ನು ಕೂಡ ಖಾತೆ ಮಾಡಿಸಿಲ್ಲವಾ? ಹಾಗಿದ್ದರೆ ಈ ಒಂದು ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ. ಸರ್ಕಾರವು ತಮ್ಮ ಜಮೀನಿಗೆ ಖಾತೆ ಮಾಡಿಸದ ರೈತರಿಗೆ ಖಾತೆ ಮಾಡಿಸಲು ಸುವರ್ಣಾವಕಾಶ ಕಲ್ಪಿಸಿದ್ದು, ಇವುಗಳ ಮೂಲಕ ಭೂ ಮಾಲೀಕರು ತಮ್ಮ ಆಸ್ತಿಯನ್ನು ಕಾನೂನುಬದ್ದವಾಗಿ ತಮ್ಮ ಹೆಸರಿನಲ್ಲಿ ದಾಖಲಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಭೂ ದಾಖಲೆಗಳ ನಿರ್ವಹಣೆಯನ್ನು ಮತ್ತಷ್ಟು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರ ಫಲವಾಗಿ ಖಾತೆ ವರ್ಗಾವಣೆ ಹಾಗೂ ಹೊಸ ಖಾತೆ ಮಾಡಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.

ಪ್ರಸ್ತುತ ಲೇಖನದಲ್ಲಿ ನೀವು ನಿಮ್ಮ ಜಮೀನಿಗೆ ಖಾತೆ ಮಾಡಿಸಲು ಅಗತ್ಯವಾದ ದಾಖಲೆಗಳು ಯಾವುದು? ಜಮೀನಿಗೆ ಖಾತೆ ಮಾಡಿಸುವ ವಿಧಾನ, ಖಾತೆ ಮಾಡಿಸುವಾಗ ಗಮನಿಸಬೇಕಾದ ಅಂಶಗಳು ಹಾಗೂ ಇನ್ನಿತರ ಮಾಹಿತಿಯನ್ನು ನೀಡಲಾಗಿದ್ದು, ಈ ಎಲ್ಲ ಮಾಹಿತಿಯನ್ನು ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

Khate

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಜಾಮೀನು ಹೊಂದಿದ್ದು, ಇನ್ನು ಖಾತೆ ಮಾಡಿಸದ ರೈತರಿಗೆ ಸರ್ಕಾರದಿಂದ ಸುವರ್ಣವಕಾಶ.
* ಜಮೀನಿಗೆ ಖಾತೆ ಮಾಡಿಸುವ ಜೊತೆಗೆ ಖಾತೆ ವರ್ಗಾವಣೆಗೂ ಅವಕಾಶ.
* ಬೆಳೆ ಪರಿಹಾರ, ಕೃಷಿ ಸಾಲ ಹಾಗೂ ಸರ್ಕಾರದ ಅನೇಕ ಯೋಜನೆಯ ಲಾಭವನ್ನು ಪಡೆಯಲು ಖಾತೆ ಅಗತ್ಯ.

ಖಾತೆ ಎಂದರೇನು?

ಜಮೀನಿನ ಮಾಲೀಕನ ಹೆಸರನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಖಾತೆ ಎನ್ನಲಾಗುತ್ತದೆ. ಜಾಮೀನು ಖರೀದಿಸಿದ ನಂತರ, ಆಸ್ತಿ ಮಾಲೀಕರ ಹೆಸರಿಗೆ ವರ್ಗಾವಣೆ ಮಾಡಿಸುವ ಸಂದರ್ಭದಲ್ಲಿ ಹಾಗೂ ಹಕ್ಕು ಬದಲಾವಣೆಯಾದಾಗ ಖಾತೆಯನ್ನು ಮಾಡಿಸುವುದು ಕಡ್ಡಾಯವಾಗಿದೆ.

ಜಮೀನಿಗೆ ಖಾತೆ ಏಕೆ ಅಗತ್ಯ?

ಯಾವುದೇ ಒಬ್ಬರ ಜಮೀನು ಕಾನೂನು ಬದ್ದ ವಾಗಿ ತಮ್ಮ ಹೆಸರಿನಲ್ಲಾಗಬೇಕಾದರೆ ಖಾತೆ ಮಾಡಿಸುವುದು ಅಗತ್ಯವಾಗಿದೆ. ಖಾತೆ ಮಾಡಿಸುವುದು ಅಗತ್ಯವಾದ ಕಾನೂನು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಇದರಿಂದಾಗಿ ಸರ್ಕಾರದ ಎಲ್ಲ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಖಾತೆ ಮಾಡಿಸುವುದರಿಂದ ಆಗುವ ಪ್ರಯೋಜನಗಳು:

  • ಜಮೀನಿನ ಮೇಲೆ ಕಾನೂನುಬದ್ಧ ಹಕ್ಕು ದೊರೆಯುತ್ತದೆ:

ಯಾವುದೇ ಆಸ್ತಿ ಮಾಲೀಕರು ತಮ್ಮ ಜಮೀನಿಗೆ ಖಾತೆ ಮಾಡಿಸಿಕೊಂಡರೆ, ನಿಮ್ಮ ಆಸ್ತಿಯಲ್ಲಿ ಯಾವುದೇ ರೀತಿಯ ವಿವಾದ ಉಂಟಾದರೆ, ಅಥವಾ ನಿಮ್ಮ ಆಸ್ತಿಯ ಮೇಲೆ ಇತರರು ಹಕ್ಕು ಚಲಾಯಿಸಲು ಪ್ರಯತ್ನಿಸಿದರೆ, ಈ ಒಂದು ದಾಖಲೆ ನಿಮ್ಮ ಮಾಲೀಕತ್ವವನ್ನು ಸಾಬೀತುಪಡಿಸಲು ಮುಖ್ಯ ಪುರಾವೆಯಾಗುತ್ತದೆ. ಖಾತೆ ನಿಮ್ಮ ಹೆಸರಿನಲ್ಲಿ ಇದ್ದಾರೆ, ಕಂದಾಯ ಇಲಾಖೆಯಲ್ಲಿ ಜಮೀನಿನ ಮಾಲೀಕರಾಗಿ ನಿಮ್ಮ ಹೆಸರೇ ದಾಖಲಾಗಿರುತ್ತದೆ. ಇದರಿಂದಾಗಿ ಯಾವುದೇ ರೀತಿಯ ವಂಚನೆ ಆಗುವುದಿಲ್ಲ.

  • ಕೃಷಿ ಸಾಲವನ್ನು ಪಡೆಯಲು ನೆರವಾಗುತ್ತದೆ:

ಸಾಕಷ್ಟು ರೈತರು ತಾವು ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಸಾಲವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಕೃಷಿ ಚಟುವಟಿಕೆಗೆ ಅಗತ್ಯವಾಗುವ ಬಿತ್ತನೆ ಬೀಜಗಳನ್ನು, ರಸಗೊಬ್ಬರಗಳನ್ನು ಹಾಗೂ ಇತರೆ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಲವನ್ನು ಪಡೆಯುವುದು ಅಗತ್ಯವಾಗಿದೆ. ರೈತರು ಸಾಲವನ್ನು ಪಡೆದುಕೊಳ್ಳಬೇಕಾದರೆ, ತಮ್ಮ ಭೂ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಭೂ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಬ್ಯಾಂಕ್ ಸಾಲವನ್ನು ಮಂಜೂರು ಮಾಡುತ್ತದೆ ಹಾಗಾಗಿ ಖಾತೆಯು ರೈತರ ಹೆಸರಿನಲ್ಲಿ ಇರುವುದು ಕಡ್ಡಾಯವಾಗಿರುತ್ತದೆ.

  • ಸರ್ಕಾರದ ಅನೇಕ ಕೃಷಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ:

ರೈತರ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಈ ಎಲ್ಲ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಜಮೀನಿನ ಕಾನೂನುಬದ್ಧ ಮಾಲೀಕರಾಗಿರುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ತಮ್ಮ ಹೆಸರಿನಲ್ಲಿ ಖಾತೆ ಹೊಂದಿದ್ದಾರೆ ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

  • ಆಸ್ತಿಯನ್ನು ಸುಲಭವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ:

ಯಾವುದೇ ವ್ಯಕ್ತಿ ತಮ್ಮ ಜಮೀನಿನ ಕಾನೂನು ಬದ್ದ ಮಾಲೀಕರಾದರೆ, ತಮ್ಮ ನಂತರ ತಮ್ಮ ಮಕ್ಕಳಿಗೆ ತಮ್ಮ ನಂತರದ ವಾರಸುದಾರರಿಗೆ ಸುಲಭವಾಗಿ ಆಸ್ತಿಯನ್ನು ವರ್ಗಾಯಿಸಬಹುದಾಗಿದೆ. ಸರಿಯಾದ ಖಾತೆ ಹಿಂದಿದ್ದರೆ, ತಮ್ಮ ನಂತರದ ವಾರಸುದಾರರಿಗೆ ಆಸ್ತಿಯನ್ನು ವರ್ಗಯುಸುವಾಗ ಗೊಂದಲಗಲುಂಟಾಗಿ, ಸದಸ್ಯರ ನಡುವೆ ವಿವಾದ ಉಂಟಾಗುವ ಸಾಧ್ಯತೆಗಳಿರುತ್ತದೆ.

  • ಜಮೀನನ್ನು ಮಾರಾಟ ಮಾಡುವುದು ಹಾಗೂ ಖರೀದಿ ಮಾಡುವುದು ಸುಗಮವಾಗುತ್ತದೆ:

ಯಾವುದೇ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡುವಾಗ ಖಾತೆ ದಾಖಲೆಗಳು ಅಗತ್ಯವಾಗಿರುತ್ತದೆ. ಕಾನೂನುಬದ್ಧವಾಗಿ ಖಾತೆಯನ್ನು ಹೊಂದಿರುವ ಮಾಲೀಕರು ಜಮೀನನ್ನು ಮಾರಾಟ ಮಾಡುವ ಹಾಗೂ ಖರೀದಿಸುವ ಸಂದರ್ಭದಲ್ಲಿ ಯಾವುದೇ ತೊಂದರೆಗಳು ಆಗುವುದಿಲ್ಲ. ಮಾಲೀಕರು ಸುಲಭವಾಗಿ ವ್ಯವಹರಿಸಬಹುದಾಗಿದೆ.

ಖಾತೆಯನ್ನು ಮಾಡಿಸಲು ಅಗತ್ಯವಾದ ದಾಖಲೆಗಳು ಯಾವುದು:

ಯಾವುದೇ ವ್ಯಕ್ತಿ ತಮ್ಮ ಹೆಸರಿನಲ್ಲಿ ಖಾತೆ ಮಾಡಿಸಲು ಅಥವಾ ವರ್ಗಾಯಿಸಲು ಈ ಕೆಳಗೆ ನೀಡಲಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅವುಗಳಂದರೆ,

  • ಮಾರಾಟ ಪತ್ರ
  • ಪಹಣಿ
  • ಮ್ಯುಟೇಷನ್ ದಾಖಲೆ
  • ಆಧಾರ್ ಕಾರ್ಡ್
  • ತೆರಿಗೆ ಪಾವತಿ ರಶೀದಿ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ವಾರಸುದಾರರ ಪ್ರಮಾಣಪತ್ರ
  • ಪ್ಯಾನ್ ಕಾರ್ಡ್
  • ಮರಣ ಪ್ರಮಾಣಪತ್ರ
  • ಹಾಗೂ ಇತರೆ ದಾಖಲೆಗಳು

ಖಾತೆಯನ್ನು ಮಾಡಿಸುವುದು ಹೇಗೆ?

  • ತಮ್ಮ ಜಮೀನಿಗೆ ಖಾತೆ ಮಾಡಿಸಬೇಕೆಂದಿರುವ ಭೂ ಮಾಲೀಕರು ತಮ್ಮ ತಾಲ್ಲೂಕಿನ ನಾಡಕಛೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ.
  • ಖಾತೆ ಮಾಡಿಸಲು ಅರ್ಜಿ ಸಲ್ಲಿಸಿ ಮೇಲೆ ನೀಡಲಾದ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ.
  • ಅಲ್ಲಿನ ಅಧಿಕಾರಿಗಳು ನಿಮ್ಮ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಜಮೀನಿನ ಮಾಲೀಕತ್ವ ಹಾಗೂ ಹಕ್ಕು ಸರಿ ಇದೆಯೇ ಎಂದು ಪರಿಶೀಲಿಸುತ್ತಾರೆ.
  • ಎಲ್ಲ ದಾಖಲೆಗಳು ಸರಿ ಇದೆಯೇ ಎಂದು ಖಚಿತಪಡಿಸಿದ ನಂತರ ನೀವು ಸರ್ಕಾರ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ನೀಡಬೇಕಾಗುತ್ತದೆ. ನಂತರ ನಿಮ್ಮ ಹೆಸರಿಗೆ ಖಾತೆಯನ್ನು ಬದಲಾವಣೆ ಮಾಡಲಾಗುತ್ತದೆ.
  • ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಹೆಸರಿನಲ್ಲಿ ಅಧಿಕೃತ ಖಾತೆ ದಾಖಲೆಗಳನ್ನು ನೀಡಲಾಗುತ್ತದೆ.

ಕೊನೆಯ ಮಾತು:

ನೀವೇನಾದರೂ ನಿಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳಬೇಕೆಂದಿದ್ದರೆ, ಇದು ನಿಮಗೆ ಸುವರ್ಣಾವಕಾಶವಾಗಿದೆ. ಸರ್ಕಾರವು ಪ್ರತಿಯೊಬ್ಬರು ತಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಆನ್ಲೈನ್ ಅಪ್ಲಿಕೇಶನ್ ಅನ್ನು ಬಿಟ್ಟಿದ್ದು, ಶೀಘ್ರದಲ್ಲಿ ಈ ಒಂದು ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಹಾಗಾಗಿ ನಿಗದಿತ ದಿನಾಂಕದೊಳಗಾಗಿ ನಿಮ್ಮ ಜಮೀನಿಗೆ ಖಾತೆ ಮಾಡಿಸಿ ಕಾನೂನು ಬದ್ದವಾಗಿ ನಿಮ್ಮ ಜಮೀನಿನ ಮಾಲೀಕರಾಗಿ.


ಇತರೆ ಪ್ರಮುಖ ಲಿಂಕುಗಳು:

Leave a Comment