ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಬ್ಯಾಂಕ್ ಆಫ್ ಬರೋಡದ ಸಂಪೂರ್ಣ ಒಡೆತನದಲ್ಲಿರುವ ಅಂಗ ಸಂಸ್ಥೆಯಾದ ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಉದ್ಯೋಗಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
BGSSL Recruitment in Kannada
ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ (BGSSL) 2026 ರ ನೇಮಕಾತಿಯಲ್ಲಿ ಒಟ್ಟು 170 ಟೆಲಿ- ಕಲೆಕ್ಷನ್ ಏಜೆಂಟ್, ಸೆಲ್ಫ್ ಆಫೀಸರ್ (ಹೋಂ ಲೋನ್), ಸೆಲ್ಫ್ ಆಫೀಸರ್ (ಆಟೋ ಲೋನ್), ಹಾಗೂ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದೆ.
ಅಭ್ಯರ್ಥಿಗಳನ್ನು ವಾಕ್ – ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಾಕ್ – ಇನ್ ಸಂದರ್ಶನ ಪ್ರಸ್ತುತ ಚಾಲ್ತಿಯಲ್ಲಿದ್ದು, ಏಪ್ರಿಲ್ 30, 2026 ವರೆಗೂ ಅಭ್ಯರ್ಥಿಗಳು ವಾಕ್ – ಇನ್ ಸಂದರ್ಶನಕ್ಕೆ ಭಾಗಿ ಆಗಲು ಅವಕಾಶವಿದೆ. ಈ ಒಂದು ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿರುವವರು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ.

ಹುದ್ದೆಯ ಕಿರು ವಿಮರ್ಶೆ:
| ನೇಮಕಾತಿ ಸಂಸ್ಥೆ | ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ (BGSSL) |
| ಹುದ್ದೆಯ ಹೆಸರು | ಟೆಲಿ- ಕಲೆಕ್ಷನ್ ಏಜೆಂಟ್, ಸೆಲ್ಫ್ ಆಫೀಸರ್ (ಹೋಂ ಲೋನ್), ಸೆಲ್ಫ್ ಆಫೀಸರ್ (ಆಟೋ ಲೋನ್), ಹಾಗೂ ಅಪ್ರೆಂಟಿಸ್ ಹುದ್ದೆಗಳು |
| ಹುದ್ದೆಯ ಸಂಖ್ಯೆ | ಒಟ್ಟು 170 ಹುದ್ದೆಗಳು |
| ಉದ್ಯೋಗ ಸ್ಥಳ | ಬೆಂಗಳೂರು ಹಾಗೂ ಮೈಸೂರು |
| ವಾಕ್ – ಇನ್ ಸಂದರ್ಶನದ ಕೊನೆಯ ದಿನಾಂಕ | 30-04-2026 |
ಹುದ್ದೆಯ ಕಿರು ಪರಿಚಯ:
ಬ್ಯಾಂಕ್ ಆಫ್ ಬರೋಡದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ಒಟ್ಟು 170 ಟೆಲಿ – ಕಲೆಕ್ಷನ್ ಏಜೆಂಟ್, ಸೆಲ್ಫ್ ಆಫೀಸರ್ ಹಾಗೂ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಇಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಸಂಕ್ಷಿಪ್ತ ವಿವರ:
ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಬರೋಡ ಗ್ಲೋಬಲ್ ಶೇರ್ಡ್ ಸೇರ್ವಿಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಟೆಲಿ – ಕಲೆಕ್ಷನ್ ಏಜೆಂಟ್ | 60 ಹುದ್ದೆಗಳು |
| ಸೆಲ್ಫ್ ಆಫೀಸರ್ (ಹೋಂ ಲೋನ್) | 50 ಹುದ್ದೆಗಳು |
| ಅಪ್ರೆಂಟಿಸ್ | 40 ಹುದ್ದೆಗಳು |
| ಸೆಲ್ಫ್ ಆಫೀಸರ್ (ಆಟೋ ಲೋನ್) | 20 ಹುದ್ದೆಗಳು |
| ಇಲ್ಲಿ ಗಮನಿಸಿ: “ಸೆಲ್ಫ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಮೈಸೂರಿನಲ್ಲಿ ಭಾಗಗಳಲ್ಲಿ ವರ್ಕ್ ಮಾಡಬೇಕಾಗುತ್ತದೆ. ಆದರೆ, ಟೆಲಿ – ಕಲೆಕ್ಷನ್ ಏಜೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಇಂದಿರಾನಗರದಲ್ಲಿ ವರ್ಕ್ ಮಾಡಬೇಕಾಗುತ್ತದೆ.” |
ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ:
- ಸೆಲ್ಫ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಟೆಲಿ – ಕಲೆಕ್ಷನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಸಾಲ ವಸೂಲಿ ಹಾಗೂ ಮಾರಾಟ ವಿಭಾಗದಲ್ಲಿ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
- ಜೊತೆಗೆ ಅಭ್ಯರ್ಥಿಗಳು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
ವಯೋಮಿತಿ ವಿವರ:
ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ನ ಕೆಲವು ನಿಯಮಗಳ ಪ್ರಕಾರ, ಸೆಲ್ಫ್ ಆಫೀಸರ್, ಟೆಲಿ – ಕಲೆಕ್ಷನ್ ಏಜೆಂಟ್ ಹಾಗೂ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಗರಿಷ್ಟ ವಯೋಮಿತಿಯನ್ನು ಹುದ್ದೆಯ ಜವಾಬ್ದಾರಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.
ವಯೋಮಿತಿ ಸಡಿಲಿಕೆ ವಿವರ:
ಸರ್ಕಾರದ ಕೆಲವು ನಿಯಮಗಳ ಪ್ರಕಾರ ಹಾಗೂ ಬ್ಯಾಂಕಿಂಗ್ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಸೆಲ್ಫ್ ಆಫೀಸರ್, ಅಪ್ರೆಂಟಿಸ್ ಹಾಗೂ ಟೆಲಿ – ಕಲೆಕ್ಷನ್ ಏಜೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ, ಹಾಗಾಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸದೇ ಇಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ನೇರವಾಗಿ ವಾಕ್ – ಇನ್ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.
ವೇತನ ಶ್ರೇಣಿ:
- ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.
- ಸೆಲ್ಫ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನದ ಜೊತೆಗೆ ಪ್ರಮಾಣ ಭತ್ಯೆ ಹಾಗೂ ಇನ್ನಿತರ ಭತ್ಯೆಗಳನ್ನು ನೀಡಲಾಗುತ್ತದೆ.
- ಟೆಲಿ ಕಲೆಕ್ಷನ್ ಏಜೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನದ ಜೊತೆಗೆ ಉತ್ತಮ ಇನ್ಸೆಂಟಿವ್ಸ್ ಸೌಲಭ್ಯಗಳಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಸೆಲ್ಫ್ ಆಫೀಸರ್ ಹಾಗೂ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಮೇಲ್ ಮೂಲಕ ಅಥವಾ ನೇಮಕಾತಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ರೆಸೂಮ್ ಅನ್ನು [email protected] ಇಮೇಲ್ ವಿಳಾಸಕ್ಕೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆರಿಯರ್ ಪೇಜ್ (www.bgss.in/careers) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಟೆಲಿ ಕಲೆಕ್ಷನ್ ಏಜೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇರವಾಗಿ ವಾಕ್ ಇನ್ ಸಂದರ್ಶನಕ್ಕೆ ಭಾಗವಹಿಸಬೇಕಾಗುತ್ತದೆ. ವಾಕ್ – ಇನ್ ಸಂದರ್ಶನಕ್ಕೆ ಭಾಗವಹಿಸುವ ಸಂದರ್ಭದಲ್ಲಿ ನವೀಕರಿಸಿದ ಬಯೋಡೇಟಾ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ 12 ನೇ ತರಗತಿ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಹೋಗಬೇಕು.
ವಾಕ್ – ಇನ್ ಸಂದರ್ಶನ ನಡೆಯುವ ಸ್ಥಳ ಮತ್ತು ಸಮಯ:
ಟೆಲಿ ಕಲೆಕ್ಷನ್ ಏಜೆಂಟ್ ಹುದ್ದೆಗೆ ಅಭ್ಯರ್ಥಿಗಳು ವಾಕ್ – ಇನ್ ಸಂದರ್ಶನಕ್ಕೆ ಭಾಗವಹಿಸಬೇಕಾಗುತ್ತದೆ. ವಾಕ್ – ಇನ್ ಸಂದರ್ಶನವು ಈ ಕೆಳಗೆ ನೀಡಿರುವ ಸ್ಥಳದಲ್ಲಿ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 6:30 ವರೆಗೆ ನಡೆಯುತ್ತದೆ.
| “ಬ್ಯಾಂಕ್ ಆಫ್ ಬರೋಡ, VR ಮ್ಯಾನರ್ 274, 100 ಫೀಟ್ ರೋಡ್. ಬಿನ್ನಮಂಗಲ, ಎರಡನೇ ಹಂತ, ಇಂದಿರಾನಗರ ಬೆಂಗಳೂರು – 560038″ |
ಆಯ್ಕೆ ಪ್ರಕ್ರಿಯೆ:
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
- ಗುಂಪು ಚರ್ಚೆ
- ಅಂತಿಮ ಆಯ್ಕೆ
ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
| ಪ್ರಮುಖ ವಿವರಗಳು | ಪ್ರಮುಖ ಲಿಂಕುಗಳು |
| ಅಧಿಕೃತ ಅಧಿಸೂಚನೆ ಪ್ರಕಟಗೊಂಡ ದಿನಾಂಕ | 23-03-2026 |
| ವಾಕ್ ಇನ್ ಸಂದರ್ಶನದ ಪ್ರಾರಂಭಿಕ ದಿನಾಂಕ | ಪ್ರಸ್ತುತ ಚಾಲ್ತಿಯಲ್ಲಿದೆ |
| ವಾಕ್ ಇನ್ ಸಂದರ್ಶನದ ಕೊನೆಯ ದಿನಾಂಕ | 30-04-2026 |
ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು:
| ಪ್ರಮುಖ ವಿವರಗಳು | ಪ್ರಮುಖ ಲಿಂಕುಗಳು |
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು:
ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಟೆಲಿ ಕಲೆಕ್ಷನ್ ಏಜೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿದ್ದರೆ ಬೆಂಗಳೂರಿನ ಇಂದಿರಾನಗರದಲ್ಲಿ ಪ್ರತಿ ದಿನ ನಡೆಯುವ ವಾಕ್ – ಇನ್ ಸಂದರ್ಶನಕ್ಕೆ ಭಾಗವಹಿಸಿ ಹಾಗೂ ಸೆಲ್ಫ್ ಆಫೀಸರ್ ಹಾಗೂ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವೇನಾದರೂ ಆಸಕ್ತಿಯನ್ನು ಹೊಂದಿದ್ದರೆ, ಇಮೇಲ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಿ.
ಇತರೆ ಹುದ್ದೆಗಳ ಪ್ರಮುಖ ಲಿಂಕುಗಳು:
- Karnataka Court Job: ರೂ. 61,300/- ವೇತನ, SSLC ಪಾಸ್ ಆದ್ರೆ ಸಾಕು ಯಾದಗಿರಿ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗಾವಕಾಶ!
- SSMCT: ಕೊಪ್ಪಳ PU ಕಾಲೇಜಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಉಚಿತ ಅರ್ಜಿ – 10 ಏಪ್ರಿಲ್ ಒಳಗೆ ಅಪ್ಲೈ ಮಾಡಿ
- RDPR: ರೂ. 45,000 ವೇತನ!ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೊಸ ನೇಮಕಾತಿ, 12 ಜಿಲ್ಲೆಗಳಲ್ಲಿ ಉದ್ಯೋಗಾವಕಾಶ!
- Revenue Department: ರೂ. 55,000/- ವೇತನ! ಕಂದಾಯ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭ
- SBI SCO ನೇಮಕಾತಿ 2026 : ₹93,960 ವೇತನ! । ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ!
Please sir give me the one home and place
5 lakh share with my home
Job in bank of baroda
Job
Mysore
I need to job
For job