ನಮಸ್ಕಾರ ರೈತಭಾಂದವರೇ, ನೀವೇನಾದರೂ ನಿಮ್ಮ ಕೃಷಿ ಭೂಮಿಗೆ ನೀರುಣಿಸುವ ಕುರಿತು ಚಿಂತೆ ಮಾಡುತ್ತಿದ್ದೀರಾ? ನಿಮ್ಮ ಕೃಷಿ ಭೂಮಿಗೆ ನೀರುಣಿಸುವ ಸಂದರ್ಭದಲ್ಲಿ ಕರೆಂಟ್ ಕೈ ಕೊಡುತ್ತಿದೀಯಾ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ.
Pumpset Subsidy Scheme in Kannada
ಕೃಷಿ ಭೂಮಿಗೆ ನೀರನ್ನು ಹಾಯಿಸಲು ರೈತರು ಪಡುತ್ತಿರುವ ಸಂಕಷ್ಟವನ್ನು ನೀಗಿಸಲು ಕೃಷಿ ಇಲಾಖೆಯು ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಯೋಜನೆ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಒಂದು ಯೋಜನೆಯಡಿಯಲ್ಲಿ ಅರ್ಹ ರೈತರು ಡಿಸೇಲ್ ಪಂಪ್ಸೆಟ್ ಖರೀದಿಸಲು ಸರ್ಕಾರದ ಕಡೆಯಿಂದ 90% ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಯಾರು ಅರ್ಹರು? ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಈ ಎಲ್ಲಾ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯ ರೈತರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

ಯೋಜನೆಯ ಅವಲೋಕನ:
| ಇಲಾಖೆ | ಕೃಷಿ ಇಲಾಖೆ |
| ಯೋಜನೆಯ ಹೆಸರು | ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಯೋಜನೆ |
| ಅರ್ಹ ಫಲಾನುಭವಿಗಳು | ರೈತರು |
| ಸಿಗುವ ಸಹಾಯಧನ | ಪಂಪ್ಸೆಟ್ ನ ಒಟ್ಟು ಮೊತ್ತದಲ್ಲಿ 90% ಸಬ್ಸಿಡಿ ಸಹಾಯಧನ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
ಯೋಜನೆಯ ಕಿರು ಪರಿಚಯ:
ಕರ್ನಾಟಕ ಸರ್ಕಾರವು ಕೃಷಿ ಭೂಮಿಯಲ್ಲಿ ಕೃಷಿ ಹೊಂಡವನ್ನು ಹೊಂದಿರದ ಹಾಗೂ ವಿದ್ಯುತ್ ಸಂಪರ್ಕವಿಲ್ಲದ ರೈತರಿಗೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಯೋಜನೆ. ಅರ್ಹ ರೈತರು ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ವಿದ್ಯುತ್ ಸಂಪರ್ಕದ ಅಗತ್ಯವಿಲ್ಲದೆ ತಮ್ಮ ಕೃಷಿ ಭೂಮಿಗೆ ನಿಷ್ಚಿಂತೆಯಿಂದ ನೀರುಣಿಸಬಹುದಾಗಿದೆ.
ಯೋಜನೆಯ ಉದ್ದೇಶ:
- ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ದುಬಾರಿ ಪಂಪ್ಸೆಟ್ ಖರೀದಿಸಲು ಸಾಧ್ಯವಿಲ್ಲದ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ರೈತರಿಗೆ ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಯೋಜನೆಯಡಿಯಲ್ಲಿ ಪಂಪ್ಸೆಟ್ ನ ಒಟ್ಟು ಮೊತ್ತದ 90% ವರೆಗಿನ ಹಣವನ್ನು ಸರ್ಕಾರವೇ ಭರಿಸುವ ಮೂಲಕ ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.
- ವಿದ್ಯುತ್ ಸಂಪರ್ಕವಿಲ್ಲದೆ ನೀರಾವರಿ ಸೌಲಭ್ಯವನ್ನು ಒದಗಿಸುವುದು:
ಎಷ್ಟೋ ರೈತರ ಕೃಷಿ ಭೂಮಿಗೆ ಸರಿಯಾದ ವಿದ್ಯುತ್ ಸಂಪರ್ಕ ಇರುವುದಿಲ್ಲ ಹಾಗೂ ಕೆಲವೊಂದು ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್ ಸಂಪರ್ಕವಿದ್ದರೂ ಕೂಡ ಸಕಾಲಕ್ಕೆ ಕರೆಂಟ್ ಇಲ್ಲದ ಕಾರಣ ಕೃಷಿ ಭೂಮಿಗೆ ನೀರುಣಿಸಲು ಸಾಧ್ಯವಾಗುವುದಿಲ್ಲ. ಅಂತಹ ರೈತರಿಗೆ ಯಾವುದೇ ವಿದ್ಯುತ್ ಸಂಪರ್ಕವಿಲ್ಲದೆ ಸುಲಭವಾಗಿ ಡಿಸೇಲ್ ಪಂಪ್ಸೆಟ್ ಮೂಲಕ ನೀರುಣಿಸಲು ಅವಕಾಶ ಕಲ್ಪಿಸುವುದು.
- ರೈತರ ಆದಾಯ ಹೆಚ್ಚಳಕ್ಕೆ ನೆರವು:
ಕೃಷಿ ಇಲಾಖೆಯು ಅರ್ಹ ರೈತರಿಗೆ ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಕೃಷಿ ಭೂಮಿಗೆ ಸರಿಯಾಗಿ ಸಂದರ್ಭಕ್ಕೆ ನೀರುಣಿಸಲು ಅವಕಾಶ ಕಲ್ಪಿಸಿ, ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳುವಂತೆ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಲು ಉತ್ತೇಜನ ನೀಡುವುದು.
ಯೋಜನೆಯ ಪ್ರಯೋಜನ:
- ಗ್ರಾಮೀಣ ಭಾಗದ ಜನರು ಪದೇ ಪದೇ ವಿದ್ಯುತ್ ಕಡಿತದಿಂದ ಅನುಭವಿಸುತ್ತಿರುವ ಸಂಕಷ್ಟದಿಂದ ಮುಕ್ತಿಯನ್ನು ಹೊಂದಿ ಯಾವುದೇ ಚಿಂತೆಯಿಲ್ಲದೆ ತಮ್ಮ ಕೃಷಿ ಭೂಮಿಗೆ ನೀರುಣಿಸಲು ಈ ಯೋಜನೆಯು ನೆರವಾಗುತ್ತದೆ.
- ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನ ಯೋಜನೆಯಡಿಯಲ್ಲಿ ಸರ್ಕಾರವೇ ಒಂದಿಷ್ಟ ಹಣವನ್ನು ಭರಿಸುವುದರಿಂದ ಬಡ ಮತ್ತು ಮಧ್ಯಮ ವರ್ಗದ ರೈತರು ಸ್ವಲ್ಪವೇ ಹಣವನ್ನು ಭರಿಸಿ ತಮ್ಮ ಕೃಷಿ ಭೂಮಿಗೆ ಡಿಸೇಲ್ ಪಂಪ್ಸೆಟ್ ಅಳವಡಿಸಿಕೊಳ್ಳಬಹುದು.
- ಸಮರ್ಪಕ ನೀರಾವರಿ ಸೌಲಭ್ಯಗಳನ್ನು ಹೊಂದಿರದ ರೈತರು ಮಳೆಯ ನೀರಿನ ಮೇಲೆ ಅವಲಂಬಿತರಾಗಿರುತ್ತಾರೆ. ಮಳೆ ನೀರು ಕೈಕೊಟ್ಟ ಸಂದರ್ಭದಲ್ಲಿ ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗದೆ ಬೆಳೆಗಳು ನಾಶವಾಗಿ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿರುತ್ತಾರೆ. ಅಂತಹ ರೈತರು ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ತಮ್ಮ ಕೃಷಿ ಭೂಮಿಗೆ ಸಕಾಲಕ್ಕೆ ನೀರುಣಿಸುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಹ ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಸಹಾಯಧನದ ವಿವರ:
ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನ ಯೋಜನೆಯಡಿಯಲ್ಲಿ ಕೆಲವು ವರ್ಗಗಳ ರೈತರಿಗೆ ವಿಭಿನ್ನ ರೀತಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ.
- ಸಾಮಾನ್ಯ ಮತ್ತು ಇತರೆ ವರ್ಗದ ರೈತರು:
ಸಾಮಾನ್ಯ ಮತ್ತು ಇತರೆ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತತರು ಪಂಪ್ಸೆಟ್ ನ ಒಟ್ಟು ವೆಚ್ಚದ ಮೇಲೆ ಶೇಕಡಾ 50% ಯಿಂದ 90% ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ರೈತರು:
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅರ್ಹ ಫಲಾನುಭವಿ ರೈತರು ಪಂಪ್ಸೆಟ್ ನ ಒಟ್ಟು ವೆಚ್ಚದ ಮೇಲೆ ಶೇಕಡಾ 75% ಇಂದ 90% ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾದ ರೈತರು:
- ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಅರ್ಜಿದಾರರು ಕಡ್ಡಾಯವಾಗಿ ರೈತರ ಗುರುತಿನ ಚೀಟಿ ಅಂದರೆ FRUITS ಐಡಿ ಹೊಂದಿರಬೇಕು.
- ರೈತರು ಹೊಂದಿರುವ ಕೃಷಿ ಭೂಮಿ ರೈತರ ಹೆಸರಿನಲ್ಲಿರಬೇಕು.
- ರೈತರು ತಮ್ಮ ಕೃಷಿ ಭೂಮಿಯಲ್ಲಿ ನೀರಾವರಿ ಮೂಲಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಜಮೀನಿನ ಪಹಣಿ ಅಥವಾ RTC
- ಬ್ಯಾಂಕ್ ಪಾಸ್ ಬುಕ್ ಪ್ರತಿ
- FRUITS ಐಡಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ನೀರಿನ ಮೂಲಗಳನ್ನು ಹೊಂದಿರುವ ಪ್ರಮಾಣಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋ
- ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಫಲಾನುಭವಿ ರೈತರು ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ರೈತರು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ https://kkisan.karnataka.gov.in/ ಗೆ ಭೇಟಿ ನೀಡಿ.
- ಅಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರಗಳು ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
- ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ರೈತರು, ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.
- ಅಲ್ಲಿ ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನ ಯೋಜನೆಗೆ ಸಂಬಂಧಿಸಿದ ಅರ್ಜಿ ಫಾರ್ಮ್ ಅನ್ನು ಕೇಳಿ ಪಡೆಯಿರಿ.
- ನಂತರ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಹಾಗೂ ಭರ್ತಿ ಮಾಡಿದ ಅರ್ಜಿ ಫಾರ್ಮ್ ನೊಂದಿಗೆ ಈ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಕೇಳಿ ಪಡೆಯಿರಿ.
ಕೊನೆಯ ಮಾತು:
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಜಾರಿ ಗೊಳಿಸಿದ ಡಿಸೇಲ್ ಪಂಪ್ಸೆಟ್ ಸಬ್ಸಿಡಿ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ ಇಂದೇ ಅರ್ಜಿ ಸಲ್ಲಿಸಿ. ಏಕೆಂದರೆ ಪ್ರತಿ ಜಿಲ್ಲೆಗೂ ಇಂತಿಷ್ಟು ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಸುಲಭವಾಗಿ ನಿಮ್ಮ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳಿ.
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
- RDPR Scholarship: ರೂ.10,000 ವಿದ್ಯಾರ್ಥಿವೇತನ! ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರದ ವಿಶೇಷ ಯೋಜನೆ, ಇಂದೇ ಅಪ್ಲೈ ಮಾಡಿ
- Swavalambi Sarathi Yojana : ರೂ 4.00 ಲಕ್ಷ.! ಸ್ವಂತ ಟ್ಯಾಕ್ಸಿ, ಸರಕು ವಾಹನ ಅಥವಾ ಆಟೋರಿಕ್ಷಾ ಖರೀದಿಸಲು ಸಹಾಯಧನ! Vehicle
- RGRHCL Home : ಸ್ವಂತ ಮನೆ ಕಟ್ಟಲು ಸಿಗಲಿದೆ ₹2 ಲಕ್ಷ! ಇಲ್ಲಿದೆ ಸಂಪೂರ್ಣ ಮಾಹಿತಿ!
- Udyogini yojana : 3 ಲಕ್ಷ: ಉದ್ಯೋಗಿನಿ ಯೋಜನೆ 2026 ! ಅರ್ಜಿ ಸಲ್ಲಿಸುವುದು ಹೇಗೆ? Loan Scheme
Katagi shahapur YADAGIRI roda katagi shahapur
Niranjangowda