CNP: ರೂ. 1,03,000/- ವೇತನ! ಕರೆನ್ಸಿ ನೋಟ್ ಪ್ರೆಸ್‌ನಲ್ಲಿ ಬೃಹತ್ ನೇಮಕಾತಿ । ಮೇ 19 ಕೊನೆಯ ದಿನಾಂಕ

ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಅಡಿಯಲ್ಲಿ ಬರುವ ನಾಸಿಕ್ ಕರೆನ್ಸಿ ನೋಟ್ ಪ್ರೆಸ್ 2025-26 ನೇ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಸೂಪರ್ವೈಸರ್, ಜೂನಿಯರ್ ಟೆಕ್ನಿಷಿಯನ್, ಕಲ್ಯಾಣ ಅಧಿಕಾರಿ ಸೇರಿದಂತೆ ಒಟ್ಟು 534 ಹುದ್ದೆಗಳಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

CNP Recruitment in Kannada

ಸೂಪರ್ವೈಸರ್, ಜೂನಿಯರ್ ಟೆಕ್ನಿಷಿಯನ್, ಕಲ್ಯಾಣ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 19-05-2026 ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ನಾಸಿಕ್ ಕರೆನ್ಸಿ ನೋಟ್ ಪ್ರೆಸ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ. ಈ ಒಂದು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

CNP

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆ ಕರೆನ್ಸಿ ನೋಟ್ ಪ್ರೆಸ್, ನಾಸಿಕ್
ಹುದ್ದೆಯ ಹೆಸರು ಸೂಪರ್ವೈಸರ್, ಜೂನಿಯರ್ ಟೆಕ್ನಿಷಿಯನ್, ಕಲ್ಯಾಣ ಅಧಿಕಾರಿ ಹಾಗೂ ಇನ್ನಿತರ ಹುದ್ದೆಗಳು
ಹುದ್ದೆಯ ಸಂಖ್ಯೆ ಒಟ್ಟು 534 ಹುದ್ದೆಗಳು
ಉದ್ಯೋಗ ಸ್ಥಳ ದೇವಾಸ್, ನಾಸಿಕ್ ಹಾಗೂ ಹೈದರಾಬಾದ್
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಹುದ್ದೆಯ ಸಂಕ್ಷಿಪ್ತ ವಿವರ:

ಹೈದರಾಬಾದ್, ನಾಸಿಕ್ ಹಾಗೂ ದೇವಾಸ್ ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ
ಸೆಕ್ರೇಟರಿಯಲ್ ಅಸಿಸ್ಟೆಂಟ್ 1 ಹುದ್ದೆ
ಆರ್ಟಿಸ್ಟ್ (ಗ್ರಾಫಿಕ್ ಡಿಸೈನ್)1 ಹುದ್ದೆ
ಸೇಫ್ಟಿ ಆಫೀಸರ್ 1 ಹುದ್ದೆ
ವೆಲ್ಫೇರ್ ಆಫೀಸರ್ 2 ಹುದ್ದೆಗಳು
ಸೂಪರ್ವೈಸರ್ (ಸಿವಿಲ್)3 ಹುದ್ದೆಗಳು
ಸೂಪರ್ವೈಸರ್ (ಐಟಿ)6 ಹುದ್ದೆಗಳು
ಸೂಪರ್ವೈಸರ್ (ಮೆಕ್ಯಾನಿಕಲ್)7 ಹುದ್ದೆಗಳು
ಸೂಪರ್ವೈಸರ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್)10 ಹುದ್ದೆಗಳು
ಸೂಪರ್ವೈಸರ್ (ಇಂಕ್ ಫ್ಯಾಕ್ಟರಿ)10 ಹುದ್ದೆಗಳು
ಸೂಪರ್ವೈಸರ್ (ಪ್ರಿಂಟಿಂಗ್)25 ಹುದ್ದೆಗಳು
ಸೂಪರ್ವೈಸರ್ (ತಾಂತ್ರಿಕ ನಿಯಂತ್ರಣ)27 ಹುದ್ದೆಗಳು
ಜೂನಿಯರ್ ಆಫೀಸ್ ಅಸಿಸ್ಟೆಂಟ್ 18 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್ಸ್ / ಎಲೆಕ್ಟ್ರಾನಿಕ್ಸ್)27 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ (ಫಿಟ್ಟರ್/ ಮೆಕ್ಯಾನಿಕ್)28 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ (ಇತರೆ ವಿಭಾಗಗಳು)29 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ (ಪ್ರಿಂಟಿಂಗ್)112 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ (ನಿಯಂತ್ರಣ)227 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಹುದ್ದೆಯ ಹೆಸರು ಶೈಕ್ಷಣಿಕ ಅರ್ಹತೆ
ಸೆಕ್ರೇಟರಿಯಲ್ ಅಸಿಸ್ಟೆಂಟ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ
ಆರ್ಟಿಸ್ಟ್ (ಗ್ರಾಫಿಕ್ ಡಿಸೈನ್)ಲಲಿತ ಕಲೆ ಅಥವಾ ಗ್ರಾಫಿಕ್ ಕಲೆಯಲ್ಲಿ ಪದವಿ
ವೆಲ್ಫೇರ್ ಆಫೀಸರ್ ಸಮಾಜ ಕಾರ್ಯದಲ್ಲಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ
ಸೂಪರ್ವೈಸರ್ (ಸಿವಿಲ್)ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
ಸೂಪರ್ವೈಸರ್ (ಐಟಿ)ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ
ಸೂಪರ್ವೈಸರ್ (ಮೆಕ್ಯಾನಿಕಲ್)ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
ಸೂಪರ್ವೈಸರ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್)ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
ಸೂಪರ್ವೈಸರ್ (ಇಂಕ್ ಫ್ಯಾಕ್ಟರಿ)ಇಂಕ್ ಫ್ಯಾಕ್ಟರಿ ಅಟೆಂಡೆಂಟ್ ಆಪರೇಟರ್ ಟ್ರೇಡ್ ನಲ್ಲಿ ಐಟಿಐ
ಸೂಪರ್ವೈಸರ್ (ಪ್ರಿಂಟಿಂಗ್)ಮುದ್ರಣ ತಂತ್ರಜ್ಞಾನದಲ್ಲಿ ಡಿಪ್ಲೊಮಾ
ಸೂಪರ್ವೈಸರ್ (ತಾಂತ್ರಿಕ ನಿಯಂತ್ರಣ)ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ
ಜೂನಿಯರ್ ಆಫೀಸ್ ಅಸಿಸ್ಟೆಂಟ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್ಸ್ / ಎಲೆಕ್ಟ್ರಾನಿಕ್ಸ್)ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಟ್ರೇಡ್ ನಲ್ಲಿ ಐಟಿಐ
ಜೂನಿಯರ್ ಟೆಕ್ನಿಷಿಯನ್ (ಫಿಟ್ಟರ್/ ಮೆಕ್ಯಾನಿಕ್)ಫಿಟ್ಟರ್ ಟ್ರೇಡ್ ನಲ್ಲಿ ಐಟಿಐ
ಜೂನಿಯರ್ ಟೆಕ್ನಿಷಿಯನ್ (ಇತರೆ ವಿಭಾಗಗಳು)ಸಂಬಂಧಿತ ಟ್ರೇಡ್ ನಲ್ಲಿ ಐಟಿಐ
ಜೂನಿಯರ್ ಟೆಕ್ನಿಷಿಯನ್ (ಪ್ರಿಂಟಿಂಗ್)ಪ್ರಿಂಟಿಂಗ್ ಟ್ರೇಡ್ ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು
ಜೂನಿಯರ್ ಟೆಕ್ನಿಷಿಯನ್ (ನಿಯಂತ್ರಣ)ಕಂಟ್ರೋಲ್ ಅಥವಾ ಇನ್ಸ್ಟ್ರುಮೆಂಟೇಷನ್ ಟ್ರೇಡ್ ನಲ್ಲಿ ಐಟಿಐ

ವಯೋಮಿತಿ ವಿವರ:

  • ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಸೆಕ್ರೇಟರಿಯಲ್ ಅಸಿಸ್ಟೆಂಟ್ ಮತ್ತು ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ವೆಲ್ಫೇರ್ ಆಫೀಸರ್ ಹಾಗೂ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ ವಿವರ:

ಕೇಂದ್ರ ಸರ್ಕಾರಗಳ ಕೆಲವು ನಿಯಮಗಳ ಪ್ರಕಾರ, ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ
  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ
  • ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಕರೆನ್ಸಿ ನೋಟ್ ಪ್ರೆಸ್ ನ ನಿಯಮಗಳ ಪ್ರಕಾರ ಪರೀಕ್ಷಾ ಶುಲ್ಕ ಹಾಗೂ ನೋಂದಣಿ ಶುಲ್ಕ ಇರುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕಕ್ಕೆ ವಿನಾಯಿತಿ ನೀಡಲಾಗಿದ್ದು, ಅಭ್ಯರ್ಥಿಗಳು ಕೇವಲ ನೋಂದಣಿ ಶುಲ್ಕವನ್ನು ಪಾವತಿಸಿದರೆ ಸಾಕಾಗುತ್ತದೆ. ಇವುಗಳ ಕುರಿತು ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿಕೊಳ್ಳಿ.

ವೇತನ ಶ್ರೇಣಿ:

ಕರೆನ್ಸಿ ನೋಟ್ ಪ್ರೆಸ್ ನ ನೇಮಕಾತಿ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

  • ಜೂನಿಯರ್ ಟೆಕ್ನಿಷಿಯನ್ – ರೂ. 18,780/- ದಿಂದ ರೂ. 67,390/-
  • ಜೂನಿಯರ್ ಆಫೀಸ್ ಅಸಿಸ್ಟೆಂಟ್ – ರೂ. 21,540/- ದಿಂದ ರೂ. 77,160/-
  • ಆರ್ಟಿಸ್ಟ್ (ಗ್ರಾಫಿಕ್ ವಿನ್ಯಾಸ) ಹಾಗೂ ಸೆಕ್ರೇಟರಿಯಲ್ ಅಸಿಸ್ಟೆಂಟ್ – ರೂ. 23,910/- ದಿಂದ ರೂ. 85,570/-
  • ಸೂಪರ್ವೈಸರ್ ರೂ. 27,600/- ದಿಂದ ರೂ. 95,910/-
  • ವೆಲ್ಫೇರ್ ಆಫೀಸರ್ ಹಾಗೂ ಸೇಫ್ಟಿ ಆಫೀಸರ್ – ರೂ. 29,740/- ದಿಂದ ರೂ. 1,03,000/-

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ವಯಸ್ಸಿನ ಪುರಾವೆ
  • ಶೈಕ್ಷಣಿಕ ಪ್ರಮಾಣಪತ್ರ
  • ಶೈಕ್ಷಣಿಕ ಅಂಕಪಟ್ಟಿ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಅಭ್ಯರ್ಥಿಗಳ ಸಹಿ
  • ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೊದಲು ಕರೆನ್ಸಿ ನೋಟ್ ಪ್ರೆಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಕೆರಿಯರ್ ವಿಭಾಗದಲ್ಲಿರುವ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ರಿಜಿಸ್ಟರ್ ನಂಬರ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ
  • ಅಲ್ಲಿ ಕೇಳಲಾದ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 20-04-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-05-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19-05-2026

ಪ್ರಮುಖ ಲಿಂಕುಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ಮಾತು:

ಕರೆನ್ಸಿ ನೋಟ್ ಪ್ರೆಸ್ ಸಂಸ್ಥೆಯು ಒಟ್ಟು 534 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಒಂದು ಬೃಹತ್ ನೇಮಕಾತಿಯು ತಾಂತ್ರಿಕ ಜ್ಞಾನವನ್ನು ಹೊಂದಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಒಂದು ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Comment