KCC: ರೂ. 46,675 ವೇತನ! ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕ ಹುದ್ದೆಗಳ ನೇಮಕಾತಿ 2026 । ಯಾವುದೇ ಅರ್ಜಿ ಶುಲ್ಕ + ಲಿಖಿತ ಪರೀಕ್ಷೆ ಇಲ್ಲ

KCC: ಕಲಬುರಗಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಹಾಗೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಉದ್ಯೋಗಾವಕಾಶ! ಕಲಬುರಗಿ ಜಿಲ್ಲೆಯ ಮಹಾನಗರ ಪಾಲಿಕೆಯು ಪ್ರಸುತ ಸಾಲಿನಲ್ಲಿ ಒಟ್ಟು 427 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಉತ್ತಮ ವೇತನದೊಂದಿಗೆ ಸರ್ಕಾರಿ ವಲಯಗಳಲ್ಲಿ ಸೇವೆ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ.


ಇಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಯಾವುದೇ ಕಠಿಣ ಶೈಕ್ಷಣಿಕ ಅರ್ಹತೆಯ ಮಿತಿ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಮಾತನಾಡಲು ತಿಳಿದಿರಬೇಕು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 27,000/- 46,675/- ವರೆಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ 29-06-2026 ದಿಂದ 28-07-2026 ವರೆಗೆ ಅವಕಾಶ ಕಲ್ಪಿಸಲಾಗಿದೆ. 18 ವರ್ಷದಿಂದ 50 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಈ ನಿಗದಿತ ಮಹಾನಗರ ಪಾಲಿಕೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಿ.

KCC

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆ ಕಲಬುರಗಿ ಮಹಾನಗರ ಪಾಲಿಕೆ
ಹುದ್ದೆಗಳ ಹೆಸರು ಪೌರಕಾರ್ಮಿಕರು
ಹುದ್ದೆಗಳ ಸಂಖ್ಯೆ ಒಟ್ಟು 427 ಹುದ್ದೆಗಳು
ಉದ್ಯೋಗ ಸ್ಥಳ ಕಲಬುರಗಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-07-2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಕಲಬುರಗಿ ಮಹಾನಗರ ಪಾಲಿಕೆಯು ಖಾಲಿ ಇರುವ 427 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಕನ್ನಡವನ್ನು ಮಾತನಾಡಲು ತಿಳಿದಿರುವ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರುವ ಗರಿಷ್ಟ 55 ವರ್ಷದೊಳಗಿನ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆಯ ವಿವರ:

ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಎರಡು ಮೂಲ ವೃಂದಗಳ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅವುಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಸ್ಥಳೀಯ ಮೂಲ ವೃಂದ 365 ಹುದ್ದೆಗಳು
ಉಳಿಕೆ ಮೂಲ ವೃಂದ 64 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ನಿಗದಿತ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಗತ್ಯ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡವನ್ನು ಮಾತನಾಡಲು ತಿಳಿದಿರಬೇಕು.

ಜೊತೆಗೆ ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರ ಪಾವತಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಲೋಡರ್ಸ್, ಕ್ಲೀನರ್ಸ್ ಆಧಾರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

ವಯೋಮಿತಿ ವಿವರ:

ಕಲಬುರಗಿ ಮಹಾನಗರ ಪಾಲಿಕೆಯ ನಿಯಮಾವಳಿಗಳ ಪ್ರಕಾರ, ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 23-11-2022 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ. ಇದರನ್ವಯ ಅಭ್ಯರ್ಥಿಗಳು ಗರಿಷ್ಟ 55 ವರ್ಷದೊಳಗೆ ವಯೋಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಸಂಬಂಧಿತ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ:

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. ರೂ. 27,000/- 46,675/- ವರೆಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲಬುರಗಿ ಮಹಾನಗರ ಪಾಲಿಕೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ತಮ್ಮ ಶೈಕ್ಷಣಿಕ ದಾಖಲೆಗಳು, ವೈಯಕ್ತಿಕ ದಾಖಲೆಗಳು, ಅನುಭವ ಪ್ರಮಾಣಪತ್ರ, ಅರ್ಜಿದಾರರ ಸಹಿ, ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಇನ್ನಿತರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
  • ನಂತರ ಭರ್ತಿ ಮಡಿದ ಅರ್ಜಿ ನಮೂನೆಯೊಂದಿಗೆ ಈ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ. ನಿಗದಿತ ದಿನಾಂಕದೊಳಗಾಗಿ ಸಂಬಂಧಿತ ಮಹಾನಗರ ಪಾಲಿಕೆಯ ಕಚೇರಿಗೆ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಅರ್ಜಿ ಪರಿಶೀಲನೆ
  • ಅರ್ಹತಾ ಮಾನದಂಡಗಳ ಪರಿಶೀಲನೆ
  • ಸೇವಾ ಅನುಭವದ ಆಧಾರದ ಮೇಲೆ ಆಯ್ಕೆ
  • ದಾಖಲೆ ಪರಿಶೀಲನೆ

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕ 29-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28-07-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಕಲಬುರಗಿ ಮಹಾನಗರ ಪಾಲಿಕೆಯು 2026 ನೇ ಸಾಲಿನಲ್ಲಿ ಒಟ್ಟು 427 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಒಂದು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಅರ್ಹತೆಯನ್ನು ಖಚಿತಪಡಿಸಿಕೊಂಡು ನಿಗದಿತ ದಿನಾಂಕದೊಳಗಾಗಿ ಸಂಬಂಧಿತ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment