ನಮಸ್ಕಾರ ಸ್ನೇಹಿತರೆ, ನೀವು ಅಸಂಘಟಿತ ವಲಯದ ಕಾರ್ಮಿಕರೇ? ನಿಮ್ಮ ಬಳಿ ಇ-ಶ್ರಮ್ ಕಾರ್ಡ್ ಇದೆಯೇ? ನಿಮಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.
PM-SYM Scheme in Kannada
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ವೃದ್ದಾಪ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿ ಹಣವನ್ನು ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರಿಕ್ಷಾ ಚಾಲಕರು ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ನೀವು ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಯಾವುದು? ಅರ್ಹತಾ ಮಾನದಂಡಗಳೇನು? ಎಂಬೆಲ್ಲಾ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ |
| ಅರ್ಹ ಫಲಾನುಭವಿಗಳು | ಅಸಂಘಟಿತ ವಲಯದ ಕಾರ್ಮಿಕರು |
| ಒಟ್ಟು ಪಿಂಚಣಿ ಮೊತ್ತ | ಮಾಸಿಕ ರೂ. 3000 |
| ಆದಾಯದ ಮಿತಿ | ಮಾಸಿಕ 15,000/- ಅಥವಾ ಅದಕ್ಕಿಂತ ಕಡಿಮೆ |
| ನೋಂದಣಿ ವಿಧಾನ | ಆನ್ಲೈನ್ ಪೋರ್ಟಲ್ ಮೂಲಕ ಅಥವಾ CSC ಕೇಂದ್ರದ ಮೂಲಕ |
ಯೋಜನೆಯ ಬಗ್ಗೆ:
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯು ಕೇಂದ್ರ ಸರ್ಕಾರವು ವೃದ್ದಾಪ್ಯದಲ್ಲಿ ಕಾರ್ಮಿಕರ ಭದ್ರತೆಗಾಗಿ ಜಾರಿ ಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, 60 ವರ್ಷ ಮೇಲ್ಪಟ್ಟ ಅಸಂಘಟಿತ ವಲಯದ ಕಾರ್ಮಿಕರು ಮಾಸಿಕ ರೂ. 3000 ಪಿಂಚಣಿ ಹಣವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಅರ್ಹ ಫಲಾನುಭವಿಗಳು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಇ – ಶ್ರಮ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಈ- ಶ್ರಮ್ ಕಾರ್ಡ್ ಅಗತ್ಯವೇ?
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಕಾರ್ಮಿಕರು ಇ – ಶ್ರಮ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇ-ಶ್ರಮ್ ಕಾರ್ಡ್ ಎನ್ನುವುದು ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ಆಗಿದ್ದು, ಈ ಒಂದು ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಇ-ಶ್ರಮ್ ಕಾರ್ಡ್ ನ 12 ಅಂಕಿಗಳ ಯುಎನ್ ನಂಬರ್ ಅತ್ಯಗತ್ಯವಾಗಿದೆ.
ಯೋಜನೆಯ ಉದ್ದೇಶ:
- ವೃದ್ದಾಪ್ಯದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವುದು:
ವಯಸ್ಸಿನಲ್ಲಿ ನಿರ್ಮಾಣ ಕಾರ್ಯ, ಕೃಷಿ ಚಟುವಟಿಕೆಯಲ್ಲಿ ಹಾಗೂ ವ್ಯಾಪಾರ ಮಾಡಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಿದ ಅಸಂಘಟಿತ ಕಾರ್ಮಿಕರು ವೃದ್ದಾಪ್ಯದಲ್ಲೂ ಕೂಡ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಯಲು ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸಲು ಪಿಂಚಣಿ ಹಣವನ್ನು ನೀಡುವ ಉದ್ದೇಶವನ್ನು ಹೊಂದಿದೆ.
- ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು:
ಅಸಂಘಟಿತ ಕಾರ್ಮಿಕರು ವೃದ್ದಾಪ್ಯದಲ್ಲಿ ತಮ್ಮ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ಕುಟುಂಬದ ಇತರೆ ಸದಸ್ಯರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಿ ಪಿಂಚಣಿ ಹಣದಿಂದಾಗಿ ತಮ್ಮ ಸ್ವಂತ ಖರ್ಚುಗಳನ್ನು ತಾವು ನಿಭಾಯಿಸಿಕೊಳ್ಳಲು ನೆರವಾಗುವುದು.
- ಕುಟುಂಬಕ್ಕೆ ಆರ್ಥಿಕ ರಕ್ಷಣೆ ಒದಗಿಸುವುದು:
ಒಂದು ವೇಳೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಿರುವ ಅರ್ಹ ಫಲಾನುಭವಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ಸಂಗಾತಿಗೆ ಪಿಂಚಣಿಯ 50% ಹಣವನ್ನು ನೀಡುವ ಮೂಲಕ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಪ್ರಯೋಜನ:
- 60 ವರ್ಷ ಮೇಲ್ಪಟ್ಟ ಅಸಂಘಟಿತ ಕಾರ್ಮಿಕರಿಗೆ ತಮ್ಮ ವೃದ್ದಾಪ್ಯ ಸಮಯದಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 3000/- ರೂ. ಪಿಂಚಣಿ ಹಣವನ್ನು ಪಡೆಯುವ ಮೂಲಕ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.
- ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಸಿಗುವ ಪಿಂಚಣಿ ಹಣವು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅಸಂಘಟಿತ ಕಾರ್ಮಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- 18 ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ಆರಂಭಿಸಲು ದಿನಕ್ಕೆ 2 ರೂಪಾಯಿ ಉಳಿತಾಯ ಮಾಡಿದರೆ, ನಿಮಗೆ 60 ನೇ ವಯಸ್ಸಿನಲ್ಲಿ ವಾರ್ಷಕ ರೂ. 36,000/- ಪಿಂಚಣಿ ಹಣ ಸಿಗಲಿದೆ.
- ಪಿಂಚಣಿ ಪಡೆದುಕೊಳ್ಳುತ್ತಿರುವಾಗಲೇ ಫಲಾನುಭವಿಗಳು ಆಕಸ್ಮಿಕ ಮರಣ ಹೊಂದಿದರೆ, ಪಿಂಚಣಿಯ ಅರ್ಧದಷ್ಟು ಹಣ ಅವರ ಸಂಗಾತಿಗೆ ಪ್ರತಿ ತಿಂಗಳು ಸಿಗಲಿದೆ.
ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
- ಫಲಾನುಭವಿಗಳು ಕಡ್ಡಾಯವಾಗಿ ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು. ಅಂದರೆ, ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು , ಸಣ್ಣ ರೈತರು ಹಾಗೂ ಆಟೋ ಚಾಲಕರಾಗಿರಬೇಕು.
- ಅರ್ಜಿದಾರರು ಕನಿಷ್ಠ 18 ವರ್ಷದಿಂದ ಗರಿಷ್ಟ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಫಲಾನುಭವಿಗಳ ಕುಟುಂಬದ ಮಾಸಿಕ ಆದಾಯವು ರೂ. 15,000/- ಮೀರಿರಬಾರದು.
- ಫಲಾನುಭವಿಗಳು ಯಾವುದೇ ಆಸ್ತಿ ತೆರಿಗೆಯನ್ನು ಪಾವತಿಸುತ್ತಿರಬಾರದು.
- ಅರ್ಜಿದಾರರು ಕಡ್ಡಾಯವಾಗಿ ಇ- ಶ್ರಮ್ ಕಾರ್ಡ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ಇ -ಶ್ರಮ್ ಕಾರ್ಡ್
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ?
ಅಭ್ಯರ್ಥಿಗಳು ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಆನ್ಲೈನ್ ಮೂಲಕ ನೋಂದಣಿ:
- ಆನ್ಲೈನ್ ಮೂಲಕ PM – SYM ಯೋಜನೆಗೆ ನೋಂದಾಯಿಸಿಕೊಳ್ಳುವ ಫಲಾನುಭವಿಗಳು ಮಾನ್-ಧನ್ ಯೋಜನೆಯ ಅಧಿಕೃತ ವೆಬ್ಸೈಟ್ https://maandhan.in/ ಗೆ ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಕಾಣುವ ಸೆಲ್ಫ್ ಎನ್ರೋಲ್ಮೆನ್ಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಸಕ್ರಿಯ ಮೊಬೈಲ್ ನಂಬರ್ ಹಾಗೂ ಒಟಿಪಿ ಅನ್ನು ನಮೂದಿಸಿ ಲಾಗಿನ್ ಆಗಿ.
- ನಂತರ ಅಲ್ಲಿ ನಿಮ್ಮ ಹೆಸರು, ವಿಳಾಸ, ವಯೋಮಿತಿ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ಇ – ಶ್ರಮ್ ಕಾರ್ಡ್ ನ ಯುಎನ್ ನಂಬರ್ ಅನ್ನು ಭರ್ತಿ ಮಾಡಿ.
- ನಂತರ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ನೋಂದಣಿ ಪೂರ್ಣಗೊಳಿಸಿ.
ಸೇವಾ ಕೇಂದ್ರದ ಮೂಲಕ ನೋಂದಣಿ:
ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಾಯಿಸಿಕೊಳ್ಳಬೇಕೆಂದಿರುವ ಫಲಾನುಭವಿಗಳು ಆಧಾರ್ ಕಾರ್ಡ್, ಇ -ಶ್ರಮ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ SSC ಕೇಂದ್ರಕ್ಕೆ ಭೇಟಿ ನೀಡಿ, ನಂತರ ಅಲ್ಲಿನವರು ನಿಮ್ಮ ವಯಸ್ಸಿಗೆ ಅನುಗುಣವಾಗಿ ಎಷ್ಟು ವಂತಿಕೆಯನ್ನು ಪಾವತಿಸಬೇಕು ಎನ್ನುವುದನ್ನು ತಿಳಿಸುತ್ತಾರೆ. ನಂತರ ಅಲ್ಲಿ ನೀವು ಮೊದಲ ಕಂತಿನ ಹಣವನ್ನು ನಗದು ರೂಪದಲ್ಲೇ ಪಾವತಿಸಬೇಕಾಗುತ್ತದೆ. ನೋಂದಣಿ ಪೂರ್ಣಗೊಂಡ ನಂತರ ಅಲ್ಲಿನವರು ಪಿಂಚಣಿ ಕಾರ್ಡ್ ಅನ್ನು ನೀಡುತ್ತಾರೆ.
ಅಂತಿಮ ತೀರ್ಮಾನ:
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯು ಲಕ್ಷಾಂತರ ಅಸಂಘಟಿತ ಕಾರ್ಮಿಕರ ಪಾಲಿಗೆ ದೊಡ್ಡ ಆಸರೆ ಆಗಿದೆ. ಕಾರ್ಮಿಕರು ಇಂದು ಮಾಡಿದ ಉಳಿತಾಯವೂ ಅವರ ವೃದ್ದಾಪ್ಯ ಸಮಯದಲ್ಲಿ ಅವರ ನೆಮ್ಮದಿಯ ಬದುಕಿಗೆ ಭದ್ರ ಬುನಾದಿ ಆಗಿದೆ. ತಮ್ಮ ವೃದ್ದಾಪ್ಯದ ಸಮಯದಲ್ಲಿ ಸ್ವಾವಲಂಬಿಯಾಗಿ, ಗೌರವಯುತವಾಗಿ ಬದುಕಬೇಕೆಂದಿರುವ ಅಸಂಘಟಿತ ಕಾರ್ಮಿಕರಿಗೆ ಈ ಒಂದು ಯೋಜನೆಯು ಭರವಸೆಯ ಬೆಳಕಾಗಿದೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದು, ಲಾಭವನ್ನು ಪಡೆದುಕೊಳ್ಳಲು ಬಯಸಿದರೆ ಇಂದೇ ಆನ್ಲೈನ್ ಮೂಲಕ ನೊಂದಾಯಿಸಿಕೊಳ್ಳಿ
Mujhe 30000 ka loan chahie