Prize Money Reward : SSLC ವಿದ್ಯಾರ್ಥಿಗಳಿಗೆ ₹12,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆರಂಭ!

ನೀವೇನಾದರೂ ಪ್ರಸ್ತುತ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದೀರಾ? ಹಾಗಿದ್ದರೆ ನಿಮಗೆ ಸರ್ಕಾರದ ಕಡೆಯಿಂದ ಬಂಪರ್ ಕೊಡುಗೆ ಸಿಗಲಿದೆ. ಅದೇನೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

Prize Money for SSLC Students

ಕರ್ನಾಟಕ ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, SSLC ನಂತರ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎನ್ನುವ ಉದ್ದೇಶದಿಂದ SSLC ಅಲ್ಲಿ ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಅದ ವಿದ್ಯಾರ್ಥಿಗಳಿಂದ ಹಿಡಿದು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗೂ ಸಹ ಪ್ರೋತ್ಸಾಹಧನವನ್ನು ನೀಡಲು ಮುಂದಾಗಿದೆ.

ನೀವು SSLC ಅಲ್ಲಿ ನಿಗದಿಪಡಿಸಿದ ಅಂಕಗಳನ್ನು ಗಳಿಸಿದ್ದು, ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸಿದರೆ SSLC ರಿಸಲ್ಟ್ ಬಿಡುಗಡೆಯಾದ ಮರು ದಿನದಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಒಂದು ಪ್ರೋತ್ಸಾಹಧನ ನಿಮ್ಮ ಮುಂದಿನ ಶೈಕ್ಷಣಿಕ ವೆಚ್ಚವನ್ನು ಭರಿಸಲು ನೆರವಾಗುತ್ತದೆ.

Prize Money

ಯೋಜನೆಯ ಅವಲೋಕನ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆ ಹೆಸರು SSLC ವಿದ್ಯಾರ್ಥಿಗಳಿಗೆ ಪ್ರೈಜ್ ಮನಿ
ಅರ್ಹ ಫಲಾನುಭವಿಗಳು SSLC ವಿದ್ಯಾರ್ಥಿಗಳು
ವಿದ್ಯಾರ್ಥಿಗಳಿಗೆ ಸಿಗುವ ಪ್ರೋತ್ಸಾಹಧನದ ಮೊತ್ತ ರೂ. 6000 ದಿನದಿಂದ ರೂ. 12,000
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಯೋಜನೆಯ ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರವು ಮೊದಲ ಪ್ರಯತ್ನದಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ, ಅವರು SSLC ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಪ್ರೈಜ್ ಮನಿ ನೀಡಲು ಮುಂದಾಗಿದ್ದು, ಬಡ ಮತ್ತು ಮಾಧ್ಯಮ ವರ್ಗಗಳ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿಯಲ್ಲಿ ಯಾವುದೇ ರೀತಿಯ ಆರ್ಥಿಕ ಅಡೆತಡೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ಈ ಒಂದು ಪ್ರೈಜ್ ಮನಿ ನೀಡಲು ಮುಂದಾಗಿದೆ.

ಏನಿದು ಪ್ರೋತ್ಸಾಹಧನ ಯೋಜನೆ?

SSLC ಪ್ರೋತ್ಸಾಹಧನ ಯೋಜನೆಯು SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ನೀಡಲಾದ ಭಾರಿ ಆರ್ಥಿಕ ನೆರವಾಗಿದ್ದು, ಇದು ಕೇವಲ ಹಣಕಾಸಿನ ನೆರವು ಮಾತ್ರವಾಗಿರದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವ ಹಾಗೂ ಉನ್ನತ ಶಿಕ್ಷಣವನ್ನು ಪ್ರರೇಪಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಯೋಜನೆಯಾಗಿದೆ.

SSLC ವಿದ್ಯಾರ್ಥಿಗಳಿಗೆ ಸಿಗುವ ಪ್ರೈಜ್ ಮನಿಯ ವಿವರ:

ಸರ್ಕಾರವು ವಿದ್ಯಾರ್ಥಿಗಳು SSLC ಫಲಿತಾಂಶದಲ್ಲಿ ಸ್ಕೋರ್ ಮಾಡಿದ ಅಂಕಗಳ ಆಧಾರದ ಮೇಲೆ ನೀಡುವ ಪ್ರೈಜ್ ಮನಿಯ ವಿವರ ಈ ಕೆಳಕಂಡಂತಿದೆ.

  • SSLC ಅಲ್ಲಿ ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗೆ ರೂ. 6000
  • SSLC ಅಲ್ಲಿ ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ರೂ. 8000
  • SSLC ಅಲ್ಲಿ ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ರೂ. 12000

ಪ್ರೈಜ್ ಮನಿ ನೀಡುವುದರ ಹಿಂದಿನ ಉದ್ದೇಶ:

  • ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವುದು:

SSLC ಅಂಕಗಳ ಆಧಾರದ ಮೇಲೆ ಪ್ರೈಜ್ ಮನಿ ಮೊತ್ತವನ್ನು ನಿಗದಿಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾನು ಇನ್ನು ಹೆಚ್ಚು ಅಂಕಗಳನ್ನು ಗಳಿಸಬೇಕು ಎನ್ನುವ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸಿಕೊಳ್ಳುತ್ತಾರೆ.

  • ಕುಟುಂಬದ ಆರ್ಥಿಕ ಹೊರೆ ಕಡಿಮೆ ಮಾಡುವುದು:

ಪ್ರೈಜ್ ಮನಿ ಯನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವುದು. ಉನ್ನತ ಶಿಕ್ಷಣವನ್ನು ಪಡೆಯುವಾಗ ಆಗುವ ಆರ್ಥಿಕ ವೆಚ್ಚಗಳನ್ನು ಭರಿಸಲು ಅವಕಾಶ ಕಲ್ಪಿಸುವುದು.

  • ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು:

ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಕೂಡ ಕುಟುಂಬದಲ್ಲಿರುವ ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಅಂತಹ ವಿದ್ಯಾರ್ತಿಗಳನ್ನು ಗುರುತಿಸಿ ಅವರ ಸಾಧನೆಗೆ ಗೌರವವನ್ನು ಸಲ್ಲಿಸುವ ಮೂಲಕ ಉನ್ನತ ಶಿಕ್ಷಣವನ್ನು ಪಡೆಯಲು ಪ್ರೇರೇಪಿಸುವುದು.

ಪ್ರೈಜ್ ಮನಿ ಪಡೆಯಲು ಇರಬೇಕಾದ ಅರ್ಹತಾ ಮಾನದಂಡಗಳು:

  • ವಿದ್ಯಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದುಕೊಂಡಿರಬೇಕು.
  • ವಿದ್ಯಾರ್ಥಿಗಳು 2025-26 ನೇ ಶೈಕ್ಷಣಿಕ ವರ್ಷದ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಸರ್ಕಾರದ ನಿರ್ದಿಷ್ಟ ಮಿತಿಯನ್ನು ಮೀರಿರಬಾರದು.
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿರಬೇಕು.
  • ವಿದ್ಯಾರ್ಥಿಗಳು ಕಡ್ಡಾಯವಾಗಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರಬೇಕು.
  • ವಿದ್ಯಾರ್ಥಿಗಳು ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯ ಅಡಿಯಲ್ಲಿ SSLC ಪರೀಕ್ಷೆಯನ್ನು ಬರೆದಿರಬೇಕು.
  • ಜಸ್ಟ್ ಪಾಸ್ ಇಂದ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳು ಪ್ರೋತ್ಸಹ ಧನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
  • ವಿದ್ಯಾರ್ಥಿಗಳು ಕಡ್ಡಾಯವಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಲ್ಲಿ ವ್ಯಾಸಂಗ ಮಾಡಿರಬೇಕು.
  • ರಿಪೀಟರ್ಸ್ ವಿದ್ಯಾರ್ಥಿಗಳು ಈ ಒಂದು ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು ಅರ್ಹರಲ್ಲ.
  • ಒಬ್ಬ ವಿದ್ಯಾರ್ಥಿ ಒಂದು ಬಾರಿ ಮಾತ್ರ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • SSLC ಅಂಕಪಟ್ಟಿ
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ವ್ಯಾಸಂಗ ಪ್ರಮಾಣಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ರೇಷನ್ ಕಾರ್ಡ್
  • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ರಾಜ್ಯ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ ರಿಜಿಸ್ಟರ್ ನಂಬರ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
  • ಮುಖಪುಟದಲ್ಲಿ ಕಾಣುವ ಪ್ರೈಸ್ ಮನಿ ಫಾರ್ SSLC ಸ್ಟೂಡೆಂಟ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಶೈಕ್ಷಣಿಕ ವಿವರ ಹಾಗೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ವಿವರಗಳು ಹಾಗೂ ಅಪ್ಲೋಡ್ ಮಾಡಿರುವ ಎಲ್ಲಾ ಅಗತ್ಯ ದಾಖಲೆಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಸ್ವೀಕೃತಿ ಪತ್ರವನ್ನು ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ಸೂಚನೆ:

  • ವಿದ್ಯಾರ್ಥಿಗಳು ಪ್ರೈಜ್ ಮನಿಯನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಬ್ಯಾಂಕ್ ಪಾಸ್ ಬುಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  • ಪ್ರೈಜ್ ಮನಿ ಪಡೆಯಲು ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ SSLC ಅಲ್ಲಿ ಪಾಸ್ ಆಗಿರಬೇಕು.
  • ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ನೀಡಿರಬೇಕು.
  • ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರ ಚಾಲ್ತಿಯಲ್ಲಿರಬೇಕು.

ಅಂತಿಮ ಮಾತು:

ಆರ್ಥಿಕ ಸಂಕಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪ್ರೈಜ್ ಮನಿ ನೀಡಲು ಮುಂದಾಗಿದ್ದು, ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಈ ಒಂದು ಪ್ರೈಜ್ ಮನಿ ಭಾರಿ ನೆರವಾಗಲಿದೆ. ಅರ್ಹ ವಿದ್ಯಾರ್ಥಿಗಳು ತಪ್ಪದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಶೈಕ್ಷಣಿಕ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ.


ಇವುಗಳನ್ನು ಓದಿ:

Leave a Comment