SSLC ಫಲಿತಾಂಶ 2026 । ಯಾವಾಗ ರಿಸಲ್ಟ್? ಹೊಸ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಶೀಘ್ರದಲ್ಲೇ SSLC ಫಲಿತಾಂಶವನ್ನು ಬಿಡುಗಡೆ ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದು, ಪ್ರಸ್ತುತ ಸಾಲಿನಲ್ಲಿ SSLC ಪರೀಕ್ಷಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಈ ಒಂದು ಬದಲಾವಣೆ ಕೇವಲ SSLC ಪರೀಕ್ಷಾ ಫಲಿತಾಂಶಗಳಲ್ಲಿ ಮಾತ್ರವಲ್ಲದೆ, ಪರೀಕ್ಷೆಯ ಸ್ವರೂಪ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಕೂಡ ಬದಲಾವಣೆ ತರಲಾಗಿದೆ. ಹಾಗಾಗಿ ಸಾಕಷ್ಟು ವಿದ್ಯಾರ್ಥಿಗಳು ಬಹಳಷ್ಟು ಗೊಂದಲಗಳಿಂದ ಹಾಗೂ ಫಲಿತಾಂಶದಲ್ಲಿ ಏನೆಲ್ಲಾ ಬದಲಾಣೆಗಳಾಗಬಹುದು ಎನ್ನುವ ಕುತೂಹಲದಿಂದ SSLC ಫಲಿತಾಂಶ ಬಿಡುಗಡೆಗೆ ಎದುರುನೋಡುತ್ತಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಎನ್ನುವುದು ಕೇವಲ ಪರೀಕ್ಷೆಯಲ್ಲ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ಣಾಯಕ ಹಂತವಾಗಿದೆ. ಈ ಹಂತವು ವಿದ್ಯಾರ್ಥಿಗಳ ಶಾಲಾ ಶಿಕ್ಷಣದ ಅಂತ್ಯ ಮತ್ತು ವೃತ್ತಿಜೀವನದತ್ತ ಇಡುವ ಮೊದಲ ಹೆಜ್ಜೆಯಾಗಿದೆ.

ಪ್ರಸ್ತುತ ಈ ಒಂದು ಲೇಖನದಲ್ಲಿ SSLC ಪರೀಕ್ಷಾ ಫಲಿತಾಂಶದ ಮಹತ್ವ, ಫಲಿತಾಂಶವನ್ನು ವೀಕ್ಷಿಸುವ ವಿಧಾನ, ಪರೀಕ್ಷಾ ಫಲಿತಾಂಶ ಪ್ರಕಟ ನಂತರ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ ಹೇಗಿರಬೇಕು? SSLC ನಂತರ ಲಭ್ಯವಿರುವ ಶೈಕ್ಷಣಿಕ ಅವಕಾಶಗಳು ಹಾಗೂ ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

SSLC

ಪ್ರಮುಖ ಹೈಲೈಟ್ಸ್:

* ಪ್ರಸ್ತುತ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 8.30 ಲಕ್ಷ ವಿದ್ಯಾರ್ಥಿಗಳು SSLC ಫಲಿತಾಂಶಕ್ಕೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 4.25 ಲಕ್ಷ ವಿದ್ಯಾರ್ಥಿಗಳು ಹಾಗೂ 4.05 ಲಕ್ಷ ವಿದ್ಯಾರ್ಥಿಗಳಾಗಿದ್ದಾರೆ.
* 2025-26 ನೇ ಸಾಲಿನ SSLC ಫಲಿತಾಂಶ ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕಟ.
* SSLC ಫಲಿತಾಂಶಗಳಲ್ಲಿ ತೃತೀಯ ಭಾಷೆ ಅಂಕಗಳು ಕೌಂಟ್ ಆಗತ್ತಾ? ಅಥವಾ ಇಲ್ವಾ? ಎನ್ನುವ ವಿಚಾರ ಕೋರ್ಟ್ ಮೆಟ್ಟಿಲೇರಿ ನಿನ್ನೆ ವಿಚಾರಣೆ ಪೂರ್ಣಗೊಂಡಿದೆ.
* ವಿಚಾರಣೆ ನಂತರ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ತೃತೀಯ ಭಾಷೆ ಅಂಕಗಳನ್ನು SSLC ಫಲಿತಾಂಶದಲ್ಲಿ ಪರಿಗಣಿಸುವಂತೆ ತೀರ್ಪು ನೀಡಲಾಗಿದೆ.

SSLC ಫಲಿತಾಂಶ ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯ?

SSLC ಫಲಿತಾಂಶವು ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಕಂಡುಕೊಳ್ಳಲು ಇಡುವ ಮೊದಲ ಹೆಜ್ಜೆಯಾಗಿದ್ದು, ಒಬ್ಬ ವಿದ್ಯಾರ್ಥಿಯ ಜೀವನಕ್ಕೆ SSLC ಫಲಿತಾಂಶವು ಎಷ್ಟು ಮಹತ್ವದ್ದಾಗಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

  • ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ:

ಯಾವುದೇ ವಿದ್ಯಾರ್ಥಿಯು ಪಿಯುಸಿ, ಡಿಪ್ಲೊಮಾ, ಐಟಿಐ ಹಾಗೂ ಇನ್ನಿತರ ಕೋರ್ಸ್ ಗಳಿಗೆ ದಾಖಲಾಗಬೇಕಾರದೆ SSLC ಅಲ್ಲಿ ಉತ್ತೀರ್ಣರಾಗಿರುವುದು ಹಾಗೂ SSLC ಫಲಿತಾಂಶ ಬಹಳಷ್ಟು ಮುಖ್ಯವಾಗಿದೆ.

  • ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ:

ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವೃತ್ತಿಜೀವನಕ್ಕೆ ಸಂಬಂಧಿಸಿದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡಬೇಕಾದರೆ SSLC ತೇರ್ಗಡೆ ಹೊಂದುವುದು ಬಹಳಷ್ಟು ಮುಖ್ಯವಾಗಿದೆ. ಈ ಒಂದು ಹಂತದಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

  • ಸರ್ಕಾರಿ ಉದ್ಯೋಗವನ್ನು ಪಡೆಯಲು ಅವಕಾಶ:

ನನಗೆ ಇನ್ನು ವಿದ್ಯಾಭ್ಯಾಸವನ್ನು ಮುಂದುವರೆಸಲು ಇಷ್ಟ ಇಲ್ಲ, ನಾನು ಯಾವುದಾದರು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದರೆ SSLC ಉತ್ತಮ ಅಂಕ ಗಳಿಸುವುದು ಅತ್ಯಂತ ಮುಖ್ಯವಾಗಿದೆ. ನೀವೇನಾದರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರೆ ನೀವು ಗ್ರೇಡ್ -3 ಹಾಗೂ ಗ್ರೇಡ್ – 4 ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.

SSLC ಫಲಿತಾಂಶವು ಯಾವಾಗ ಪ್ರಕಟ ಗೊಳ್ಳಲಿದೆ?

ಪ್ರಸ್ತುತ 2025-26 ನೇ ಸಾಲಿನ SSLC ಪರೀಕ್ಷೆಯುಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಯಶಸ್ವಿಯಾಗಿ ನಡೆದಿದ್ದು, ಏಪ್ರಿಲ್ 8 ರಿಂದ SSLC ಪರೀಕ್ಷೆ -1 ದರ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿದ್ದು, ಮೌಲ್ಯಮಾಪನ ಪ್ರಕ್ರಿಯೆ ಇನ್ನು ಚಾಲ್ತಿಯಲ್ಲಿದೆ. ಹಾಗಾಗಿ SSLC ಫಲಿತಾಂಶವು ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಗಳಿದ್ದು, ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ಮೇ 9 ರಂದು ಫಲಿತಾಂಶ ಫಲಿತಾಂಶ ಪ್ರಕಟವಾದ ಹಿನ್ನಲೆ ಈ ವರ್ಷವು ಕೂಡ ಇದೆ ದಿನದಂದು ಫಲಿತಾಂಶ ಪ್ರಕಟಿಸಬಹುದು ಎನ್ನುವ ನಿರೀಕ್ಷೆ ಇದೆ.

SSLC ಫಲಿತಾಂಶ ವೀಕ್ಷಿಸಲು ಇರುವ ಎರಡು ಪ್ರಮುಖ ವೆಬ್ಸೈಟ್ ಗಳು ಯಾವುದು?

ವಿದ್ಯಾರ್ಥಿಗಳು ತಮ್ಮ KSEAB SSLC ಫಲಿತಾಂಶವನ್ನು ಈ ಕೆಳಗೆ ನೀಡಿರುವ ವೆಬ್ಸೈಟ್ ಮೂಲಕ ವೀಕ್ಷಿಸಬಹುದಾಗಿದೆ.

  • https://karresults.nic.in/
  • http://karresults.nic.kseab.karnataka.gov.in/

ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?

  • SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ SSLC ಫಲಿತಾಂಶವನ್ನು ಈ ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • SSLC ರಿಸಲ್ಟ್ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ.
  • ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ನಿಮ್ಮ ಅಂಕವು ಪರದೆಯ ಮೇಲೆ ಕಾಣುತ್ತದೆ.
  • ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.

ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ ಹೇಗಿರಬೇಕು?

  • ನೀವು ನೀರಿಕ್ಷಿಸಿದ ಫಲಿತಾಂಶ ಬಂದಿರಲಿ ಅಥವಾ ಬರದೇ ಇರಲಿ ನೀವು ಇವುಗಳನ್ನು ಸಹಜವಾಗಿ ಸ್ವೀಕರಿಸಿ ಮುಂದಿನ ಶೈಕ್ಷಣಿಕ ಅವಕಾಶಗಳ ಕುರಿತು ಗಮನಹರಿಸಿ.
  • ಪ್ರತಿಯೊಬ್ಬರ ಕಲಿಕಾ ಸಾಮರ್ಥ್ಯವು ಬೇರೆ ಬೇರೆ ಆಗಿರುವುದರಿಂದ ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಸಂಬಂಧಿಗಳ ಫಲಿತಾಂಶಕ್ಕೆ ನಿಮ್ಮ ಫಲಿತಾಂಶವನ್ನು ಹೋಲಿಸಿಕೊಳ್ಳಬೇಡಿ.
  • ಫಲಿತಾಂಶವು ನಿಮ್ಮ ಶೈಕ್ಷಣಿಕ ದಾಖಲೆಗಳ ಒಂದು ಭಾಗವಷ್ಟೇ ಆಗಿರುವುದರಿಂದ ಫಲಿತಾಂಶದ ಕುರಿತು ಚಿಂತಿಸದೆ ನಿಮ್ಮ ಮುಂದಿನ ಗುರಿಯತ್ತ ಗಮನಹರಿಸಿ.
  • SSLC ಅಲ್ಲಿ ಪಾಸ್ ಆದ ನಂತರ ನಿಮಗೆ ಬಹಳಷ್ಟು ಶೈಕ್ಷಣಿಕ ಆಯ್ಕೆಗಳಿರುತ್ತದೆ. ನಿಮ್ಮ ಸಾಮರ್ಥ್ಯ ಹಾಗೂ ಅಂಕಗಳ ಆಧಾರದ ಮೇಲೆ ಸೂಕ್ತ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

ಮರು ಮೌಲ್ಯಮಾಪನ ಹಾಗೂ ಪೂರಕ ಪರೀಕ್ಷೆ:

  • ಮರುಮೌಲ್ಯಮಾಪನ ಪ್ರಕ್ರಿಯೆ:
    • SSLC ಅಂಕಗಳು ನಿರೀಕ್ಷೆಗಿಂತ ಕಡಿಮೆ ಬಂದರೆ ಈ ಒಂದು ಹಂತವನ್ನು ಅನುಸರಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
      • ವಿದ್ಯಾರ್ಥಿಗಳು ಮೊದಲು ತಮ್ಮ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು.
      • ಉತ್ತರ ಪತ್ರಿಕೆಯ ಪ್ರತಿ ನಿಮ್ಮ ಕೈಗೆ ಸಿಕ್ಕರೆ, ಅವುಗಳನ್ನು ಪರಿಶೀಲಿಸಿ ಅಂಕಗಳನ್ನು ದಾಖಲಿಸಿರುವುದು ತಪ್ಪಾಗಿದ್ದರೆ ನಂತರ ಪುನಃ ಉತ್ತರ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲು ಅರ್ಜಿ ಸಲ್ಲಿಸಿ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸುವುದು.
  • ಪೂರಕ ಪರೀಕ್ಷೆ:
    • ನೀವೇನಾದರೂ SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರೆ, ನಿಮಗೆ ಪ್ರಸ್ತುತ ಸಾಲಿನಲ್ಲಿ ಪೂರಕ ಪರೀಕ್ಷೆ 1 ಹಾಗೂ ಪೂರಕ ಪರೀಕ್ಷೆ 2 ನ್ನು ಬರೆಯಲು ಅವಕಾಶ ಕಲ್ಪಿಸಲಿಯಾಗಿದೆ. ಮೊದಲ ಪೂರಕ ಪರೀಕ್ಷೆಯು ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಗಳಿದ್ದು, ಎರಡನೇ ಪೂರಕ ಪರೀಕ್ಷೆಯು ಜೂನ್ ತಿಂಗಳಲ್ಲಿ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಫಲಿತಾಂಶಗಳ ನಂತರ ವಿದ್ಯಾರ್ಥಿಗಳಿಗಿರುವ ಶೈಕ್ಷಣಿಕ ಆಯ್ಕೆಗಳು:

  • ಪಿಯುಸಿ ಅಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ಇರುತ್ತದೆ.
  • ಇಂಜಿನಿಯರಿಂಗ್ ಕ್ಷೇತ್ರಗಳಿಗೆ ನೇರವಾಗಿ ಹೋಗಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಡಿಪ್ಲೊಮಾ ಅತ್ಯಂತ ಉತ್ತಮ ಆಯ್ಕೆಯಾಗಿದೆ.
  • ತಾಂತ್ರಿಕ ಕೌಶಲ್ಯವನ್ನು ಕಲಿತು ಬೇಗನೆ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದಿರುವ ಅಭ್ಯರ್ಥಿಗಳಿಗೆ ಐಟಿಐ ಸೂಕ್ತವಾದ ಒಪ್ಶನ್
  • SSLC ನಂತರ ಫ್ಯಾಷನ್ ಡಿಸೈನಿಂಗ್, ನರ್ಸಿಂಗ್, ಅನಿಮೇಷನ್ ಗಳಂತಹ ಅಲ್ಪಾವಧಿಯ ಕೋರ್ಸ್ ಗಳನ್ನು ಕಲಿತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ.

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:

ಪ್ರಸ್ತುತ ಸಾಲಿನಲ್ಲಿ SSLC ಫಲಿತಾಂಶ ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ SSLC ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಪ್ರಸ್ತುತ ಸಾಲಿನಲ್ಲೇ ಹಿಂದಿ ಸೇರಿದಂತೆ ತೃತೀಯ ಭಾಷಾ ಅಂಕಗಳನ್ನು ಪರೀಕ್ಷಾ ಫಲಿತಾಂಶಕ್ಕೆ ಪರಿಗಣಿಸಲಾಗುವುದಿಲ್ಲ. ಬದಲಾಗಿ ಗ್ರೇಡ್ ಗಳನ್ನು ನೀಡುವುದೆಂದು ತಿಳಿಸಿದ್ದರು.

ಈ ಕುರಿತು ಸಾಕಷ್ಟು ಶಿಕ್ಷಕರು ಆಕ್ರೋಶ ಹೊರಹಾಕಿದ್ದು, ಕೋರ್ಟ್ ಮೆಟ್ಟಿಲೇರಿದ್ದರು, ಈ ವಿಷಯದ ಕುರಿತು ನಿನ್ನೆ ಅಂದರೆ 21-04-2026 ರಂದು ವಿಚಾರಣೆ ನಡೆದಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಈ ಹಿಂದೆ ಇದ್ದ ಪರೀಕ್ಷಾ ಪದ್ದತಿಯನ್ನು ಮುಂದುವರಿಸಬೇಕೆಂದು ತೀರ್ಪು ನೀಡಲಾಗಿದೆ. ಹಾಗಾಗಿ ಪ್ರಸ್ತುತ ಶೈಕ್ಷಣಿಕ ಸಾಲಿನ SSLC ಪಲಿತಾಂಶಗಳಲ್ಲಿ ಯಾವುದೇ ಬದಲಾಣೆಗಳಾಗುವುದಿಲ್ಲ.

ಅಂತಿಮ ಮಾತು:

SSLC ಫಲಿತಾಂಶವು ಶೀಘ್ರದಲ್ಲೇ ಪ್ರಕಟಗೊಳ್ಳಲಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಆಯ್ಕೆಯ ಕುರಿತು ಈಗಿನಿಂದಲೇ ತಮ್ಮ ಪೋಷಕರು ಹಾಗೂ ಶಿಕ್ಷಕರೊಂದಿ ಸಲಹೆಯನ್ನು ಪಡೆದು ಫಲಿತಾಂಶ ಬಂದ ನಂತರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದೆ, ನಿಮ್ಮ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Comment