App 10th Result 2026: SSLC ಫಲಿತಾಂಶ ಬಿಡುಗಡೆ ದಿನಾಂಕ ಫಿಕ್ಸ್! ಚೆಕ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಿದ್ಯಾರ್ಥಿಗಳೇ ನೀವೇನಾದರೂ SSLC ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿ. ಕರ್ನಾಟಕ ಶಾಲಾ ಮತ್ತು ಮೌಲ್ಯಮಾಪನ ಮಂಡಳಿಯು ನಡೆಸಿದ SSLC ಪರೀಕ್ಷಾ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆಗೆ ಶೀಘ್ರದಲ್ಲಿ ತೆರೆ ಬೀಳಲಿದೆ.

SSLC Result 2026

SSLC ಪರೀಕ್ಷೆಯು ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಸುಸೂತ್ರವಾಗಿ ನಡೆದಿದ್ದು, ಈಗ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ SSLC ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಮೊದಲ ಬಾರಿಗೆ ಬೋರ್ಡ್ ಎಕ್ಸಾಮ್ ಎದುರಿಸಿರುವುದರಿಂದ ವಿದ್ಯಾರ್ಥಿಗಳಿಗೆ ಕುತೂಹಲ ಹಾಗೂ ಆತಂಕಗಳು ಇರುವುದು ಸಹಜವಾಗಿದೆ.

ಯಾವುದೇ ಆತಂಕವಿಲ್ಲದೆ ಸುಲಭವಾಗಿ SSLC ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ? ಫಲಿತಾಂಶಗಳಲ್ಲಿ ಎನ್ನೆಲ್ಲ ಬದಲಾವಣೆಗಳು ಆಗಬಹುದು? ಫಲಿತಾಂಶ ನೋಡುವಾಗ ಸರ್ವರ್ ಬ್ಯುಸಿ ಬಂದರೆ ಅನುಸರಿಸಬೇಕಾದ ಪರ್ಯಾಯ ಮಾರ್ಗಗಳ ಯಾವುದು? ಎನ್ನುವುದನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

SSLC Result 2026

ಪ್ರಮುಖ ಹೈಲೈಟ್ಸ್:

*ದ್ವಿತೀಯ PUC ಫಲಿತಾಂಶ ಪ್ರಕಟವಾದ ಬೆನ್ನಲ್ಲೇ SSLC ಪರೀಕ್ಷಾ ಫಲಿತಾಂಶ ಪ್ರಕಟಿಸುವ ಡೇಟ್ ಫಿಕ್ಸ್.
*SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಗಳಿಸಿದ ಅಂಕಗಳು ಫಲಿತಾಂಶದಲ್ಲಿ ಪರಿಗಣಿಸಲಾಗುವುದಿಲ್ಲ.
*SSLC ಪರೀಕ್ಷಾ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ.

SSLC ಪರೀಕ್ಷಾ ವಿವರ:

2025-26 ನೇ ಸಾಲಿನ SSLC ಪರೀಕ್ಷೆಯು ಮಾರ್ಚ್ 18, 2026 ರಿಂದ ಏಪ್ರಿಲ್ 2, 2026 ರ ವರೆಗೂ ಯಶಸ್ವಿಯಾಗಿ ನಡೆದಿದ್ದು, ಒಟ್ಟು 9,02,889 ವಿದ್ಯಾರ್ಥಿಗಳು SSLC ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದು, ಈ ಪೈಕಿ ಸುಮಾರು 8,96,273 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ನಡುವೆ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಹಿಂದಿ ವಿಷಯವನ್ನು SSLC ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಒಂದು ಪದ್ದತಿಯು ಪ್ರಸ್ತುತ ಸಾಲಿನಲ್ಲಿ ಜಾರಿಗೆ ಬರಬಹುದೇ ಎನ್ನುವುದನ್ನು ಇನ್ನೇನು ಕಾದುನೋಡಬೇಕಿದೆ.

SSLC ಫಲಿತಾಂಶ ಯಾವಾಗ ಪ್ರಕಟವಾಗಲಿದೆ?

SSLC ಪರೀಕ್ಷೆಯು ಈಗಾಗಲೇ ಯಶಸ್ವಿಯಾಗಿ ನಡೆದಿದ್ದು, ಇಂದಿನಿಂದಲೇ ಅಂದರೆ ಏಪ್ರಿಲ್ 08, 2026 ರಿಂದಲೇ ಉತ್ತರ ಪತ್ರಿಕೆಯ ಮೌಲ್ಯಮಾಪನವು ಆರಂಭಗೊಂಡಿದೆ. SSLC ಉತ್ತರ ಪತ್ರಿಕೆಯ ಮೌಲ್ಯಮಾಪನವು ಇನ್ನು 20-25 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು. ಮೇ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ SSLC ಫಲಿತಾಂಶವನ್ನು ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ತಿಳಿಸಿದೆ.

SSLC ಫಲಿತಾಂಶವನ್ನು ವೀಕ್ಷಿಸುವುದು ಹೇಗೆ:

ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ SSLC ಫಲಿತಾಂಶವನ್ನು ವೀಕ್ಷಿಸಬಹುದಾಗಿದ್ದು, ಈ ಕೆಳಗೆ ನೀಡಿರುವ ಹಂತವನ್ನು ಅನುಸರಿಸಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ.

  • ನೀವು ಫಲಿತಾಂಶವನ್ನು ವೀಕ್ಷಿಸಲು ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ https://kseab.karnataka.gov.in/ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ SSLC ಎಕ್ಸಾಮಿನೇಷನ್ ರಿಸಲ್ಟ್ -2026 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ SSLC ಎಕ್ಸಾಮ್ ಹಾಲ್ ಟಿಕೆಟ್ ನಲ್ಲಿರುವ ರಿಜಿಸ್ಟರ್ ನಂಬರ್ ಹಾಗೂ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
  • ನೀವು ನಮೂದಿಸಿರುವ ದಿನಾಂಕ ಹಾಗೂ ರಿಜಿಸ್ಟರ್ ನಂಬರ್ ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ.
  • ತಕ್ಷಣವೇ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ, ಅದನ್ನು ಪ್ರಿಂಟ್ ತೆಗೆದುಕೊಳ್ಳಿ.

ಸರ್ವರ್ ಬ್ಯುಸಿ ಬಂದರೆ ಏನು ಮಾಡಬೇಕು?

ವಿದ್ಯಾರ್ಥಿಗಳೇ ಸರ್ವರ್ ಬ್ಯುಸಿ ಬಂದರೆ ಗಾಬರಿ ಪಡುವ ಅಗತ್ಯವಿಲ್ಲ. ಏಕೆಂದರೆ ಇನ್ನೆರಡು ಪರ್ಯಾಯ ಮಾರ್ಗಗಳ ಮೂಲಕ ನಿಮ್ಮ SSLC ರಿಸಲ್ಟ್ ಅನ್ನು ವೀಕ್ಷಿಸಬಹುದಾಗಿದೆ. ಅವುಗಳೆಂದರೆ,

ಡಿಜಿಲಾಕರ್ ಮೂಲಕ ಫಲಿತಾಂಶವನ್ನು ವೀಕ್ಷಣೆ

  • ಮೊದಲು ಗೂಗಲ್ ಪ್ಲೇಸ್ಟೋರ್ ಗೆ ಭೇಟಿ ನೀಡಿ ಅಲ್ಲಿ ಡಿಜಿಲಾಕರ್ ಎಂದು ಟೈಪ್ ಮಾಡಿ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ.
  • ನಂತರ ಡಿಜಿಲಾಕರ್ ಆಪ್ ಗೆ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿ.
  • ನಂತರ ಎಜುಕೇಶನ್ ವಿಭಾಗದಲ್ಲಿ ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಅಂಡ್ ಅಸೆಸ್ಮೆಂಟ್ ಬೋರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಿ.
  • ಕ್ಲಾಸ್ X ಮಾರ್ಕ್ಸ್ ಶೀಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ಡೇಟ್ ಆಫ್ ಬರ್ತ್ ಅನ್ನು ನಮೂದಿಸಿದರೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಲಭ್ಯವಾಗುತ್ತದೆ.

SMS ಮೂಲಕ ಫಲಿತಾಂಶ ವೀಕ್ಷಣೆ:

  • ಇಂಟರ್ನೆಟ್ ಸಮಸ್ಯೆಗಳಿದ್ದರೆ ಅಥವಾ ಸರ್ವರ್ ಬ್ಯುಸಿ ಇದ್ದರೆ ನೀವು ಸರಳವಾಗಿ ಈ ಒಂದು ಹಂತವನ್ನು ಅನುಸರಿಸಿ.
  • ಮೊದಲು ನಿಮ್ಮ ಮೊಬೈಲ್ ನ ಮೆಸೇಜ್ ಬಾಕ್ಸ್ ತೆರೆಯಿರಿ.
  • 56263 ಸಂಖ್ಯೆಗೆ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ಟೈಪ್ ಮಾಡಿ ಕಳುಹಿಸಿ.
  • ಕೆಲವೇ ಕ್ಷಣಗಳಲ್ಲಿ ನೀವು ನಿಮ್ಮ SSLC ಅಂಕ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಫಲಿತಾಂಶಗಳಲ್ಲಿ ಗೊಂದಲಗಳಿದ್ದರೆ ಏನು ಮಾಡಬೇಕು?

ನೀವು SSLC ಫಲಿತಾಂಶದಲ್ಲಿ ಹೆಚ್ಚಿನ ಅಂಕವನ್ನು ನಿರೀಕ್ಷಿಸುತ್ತಿದ್ದು, ಅಂಕಗಳು ಕಡಿಮೆ ಬಂದಿದ್ದರೆ ನೀವು ನಿಮ್ಮ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡಬಹುದಾಗಿದೆ.

  • ಮೊದಲು ನಿಮ್ಮ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ.
  • ನಂತರ ನಿಮ್ಮ ಉತ್ತರ ಪತ್ರಿಕೆಯಲ್ಲಿ ಯಾವುದೇ ಉತ್ತರಕ್ಕೆ ಅಂಕಗಳನ್ನು ನೀಡಬೇಕಿದ್ದರೆ ನಂತರ ನಿಗದಿತ ಶುಲ್ಕವನ್ನು ಪಾವತಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ.

ಒಂದು ವೇಳೆ ನೀವು ಅನುತ್ತೀರ್ಣರಾದರೆ ಆತಂಕ ಪಡುವ ಅಗತ್ಯವಿಲ್ಲ, ಏಕೆಂದರೆ ಫಲಿತಾಂಶ ಪ್ರಕಟವಾದ ಎರಡು ಮೂರು ವಾರಗಳ ನಂತರ SSLC ಪೂರಕ ಪರೀಕ್ಷೆ ನಡೆಯುತ್ತದೆ ಅದಕ್ಕೆ ಸಿದ್ದತೆಯನ್ನು ಮಾಡಿಕೊಳ್ಳಿ.

SSLC ಫಲಿತಾಂಶವು ಕೇವಲ 525 ಅಂಕಗಳಿಗೆ ಮಾತ್ರ ಸೀಮಿತ!

  • ಈ ಹಿಂದೆ SSLC ಫಲಿತಾಂಶವು ಒಟ್ಟು 625 ಅಂಕಗಳಿಗೆ ಪ್ರಕಟಿಸಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದು, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಹಾಗೂ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಹೆಚ್ಚಿನ ಅಂಕವನ್ನು ಗಳಿಸಿ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರೆ ಆ ವಿದ್ಯಾರ್ಥಿಯನ್ನು ಉತ್ತೀರ್ಣರೆಂದೇ ಪರಿಗಣಿಸಲಾಗುತ್ತದೆ. ಈ ಒಂದು ಕಾರಣದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವೂ ವ್ಯರ್ಥವಾಗುವುದಿಲ್ಲ.

ಕೊನೆಯ ಮಾತು:

SSLC ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು ಉನ್ನತ ಶಿಕ್ಷಣಕ್ಕಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಕಾಯುವಿಕೆಗೆ ಶೀಘ್ರದಲ್ಲೇ ತೆರೆ ಬೀಳಲಿದ್ದು, ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗುವ ದಿನಾಂಕದನ್ನು ಈ ಮೇಲೆ ನೀಡಿರುವ ಹಂತವನ್ನು ಅನುಸರಿಸುವ ಮೂಲಕ ನಿಮ್ಮ ರಿಸಲ್ಟ್ ಅನ್ನು ವೀಕ್ಷಿಸಿ.


ಇಲ್ಲಿ ಕ್ಲಿಕ್ ಮಾಡಿ: 2nd Puc Result 2026 Out Now Direct Link | ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026

Leave a Comment