RRB Application: ರೈಲ್ವೆ ಇಲಾಖೆಯಲ್ಲಿ 6557 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ 2026! ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಭಾರತೀಯ ರೇಲ್ವೆ ಇಲಾಖೆಯಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಬೇಕೆಂದು ಕಾಯುತ್ತಿರುವ ಯುವ ವೃತ್ತಿಪರ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಭಾರತೀಯ ರೇಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ನೇಮಕಾತಿ ಮಂಡಳಿಯು 2026 ನೇ ಸಾಲಿನಲ್ಲಿ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, 6557 ಟೆಕ್ನಿಷಿಯನ್ ಗ್ರೇಡ್ -I ಹಾಗೂ ಗ್ರೇಡ್ -III ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

RRB Technician Recruitment 2026


ಸ್ಥಿರ ವೃತ್ತಿಜೀವನ, ಅತ್ಯಾಕರ್ಷಕ ವೇತನ ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದಿರುವ ತಾಂತ್ರಿಕ ಹಿನ್ನಲೆಯನ್ನು ಹೊಂದಿರುವ ನಿರುದ್ಯೋಗಿ ಯುವಕ- ಯುವತಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 30, 2026 ರಿಂದಲೇ ಆರಂಭಗೊಂಡಿದ್ದು, 29, ಜುಲೈ 2026 ವರೆಗೆ ಕಾಲಾವಕಾಶ ನೀಡಲಾಗಿದೆ.

ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಪ್ರಸ್ತುತ ಲೇಖನದಲ್ಲಿ ನೀಡಲಾಗಿರುವ ಹುದ್ದೆಗಳ ವಿವರ, ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ಅರ್ಜಿ ಶುಲ್ಕ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು RRB ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

RRB

ಹುದ್ದೆಯ ಕಿರು ವಿಮರ್ಶೆ:

ನೇಮಕಾತಿ ಸಂಸ್ಥೆಯ ಹೆಸರು ರೈಲ್ವೆ ನೇಮಕಾತಿ ಮಂಡಳಿ
ಹುದ್ದೆಗಳ ಹೆಸರು ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹಾಗೂ ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳು
ಹುದ್ದೆಗಳ ಸಂಖ್ಯೆ ಒಟ್ಟು 6557 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-07-2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಭಾರತೀಯ ರೇಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಲ್ವೆ ನೇಮಕಾತಿ ಮಂಡಳಿಯು ಒಟ್ಟು 6557 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, PUC, ಬಿಎಸ್ಸಿ, ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ 18 ವರ್ಷದಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ವಿವರ:

ರೇಲ್ವೆ ನೇಮಕಾತಿ ಮಂಡಳಿಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಟೆಕ್ನಿಷಿಯನ್ ಹುದ್ದೆಗಳನ್ನು ವಿವಿಧ ವಿಭಾಗಗಳಿಗೆ ವರ್ಗೀಕರಣ ಮಾಡಲಾಗಿದೆ ಅವುಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಟೆಕ್ನಿಷಿಯನ್ ಗ್ರೇಡ್ -I (ಸಿಗ್ನಲ್)323 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III 6234 ಹುದ್ದೆಗಳು

ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳನ್ನು ವಿವಿಧ ವಿಭಾಗಳಾಗಿ ವಿಂಗಡಿಸಲಾಗಿದೆ ಅವುಗಳ ವಿವರ ಈ ಕೆಳಕಂಡಂತಿದೆ.

ವಿಭಾಗಗಳು ಹುದ್ದೆಗಳ ಸಂಖ್ಯೆ
ಟೆಕ್ನಿಷಿಯನ್ ಗ್ರೇಡ್ -III (ಕ್ರೈನ್ ಡ್ರೈವರ್)13 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಬ್ರಿಡ್ಜ್)34 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಟ್ರಿಮ್ಮರ್ ವರ್ಕ್ಶಾಪ್)46 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಪೇಂಟರ್ ವರ್ಕ್ಶಾಪ್)77 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಮಷಿನಿಸ್ಟ್ ವರ್ಕ್ಶಾಪ್)123 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಟ್ರಾಕ್ ಮಷೀನ್)172 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಎಲೆಕ್ಟ್ರಿಕಲ್ ಟಿ.ಆರ್.ಡಿ)152 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (EMU)147 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ರೆಫ್ರಿಜೆರೇಷನ್ ಮತ್ತು ಏರ್ ಕಂಡೀಷನಿಂಗ್)162 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ವೆಲ್ಡರ್ ಓಎಲ್)150 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಎಲೆಕ್ಟ್ರಿಕಲ್ PU ಮತ್ತು WS)128 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಮೆಕ್ಯಾನಿಕಲ್ ವರ್ಕ್ಶಾಪ್)193 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಮಿಲ್ರೈಟ್)170 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಡಿಸೇಲ್ ಎಲೆಕ್ಟ್ರಿಕಲ್)206 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಎಲೆಕ್ಟ್ರಿಕಲ್/ TRS)268 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಕಾರ್ಪೆನ್ಟರ್ ವರ್ಕ್ಶಾಪ್)229 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಬ್ಲಾಕ್ಸ್ಮಿತ್)306 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಡಿಸೇಲ್ ಮೆಕ್ಯಾನಿಕಲ್)346 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಎಲೆಕ್ಟ್ರಿಕಲ್ GS)329 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಎಸ್ ಅಂಡ್ ಟಿ)320 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಕ್ಯಾರೇಜ್ ಅಂಡ್ ವ್ಯಾಗನ್)501 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಫಿಟ್ಟರ್ OL)469 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ವೆಲ್ಡರ್ PU ಅಂಡ್ WS)584 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III (ಫಿಟ್ಟರ್ PU ಅಂಡ್ WS)1109 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಟೆಕ್ನಿಷಿಯನ್ ಗ್ರೇಡ್ -I (ಸಿಗ್ನಲ್):

ಟೆಕ್ನಿಷಿಯನ್ ಗ್ರೇಡ್ -I (ಸಿಗ್ನಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಇನ್ಫರ್ಮೇಷನ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಷನ್, ಭೌತಶಾಸ್ತ್ರ ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು ಅಥವಾ 3 ವರ್ಷಗಳ ಇಂಜಿನಿಯರಿಂಗ್, ಡಿಪ್ಲೊಮಾ, ಬಿಇ/ ಬಿಟೆಕ್ ಪದವಿಯನ್ನು ಹೊಂದಿರಬೇಕು.

  • ಟೆಕ್ನಿಷಿಯನ್ ಗ್ರೇಡ್ -III:

ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಇದರೊಂದಿಗೆ ಸಂಬಂಧಿತ ಟ್ರೇಡ್ ಗಳಲ್ಲಿ NCVT ಹಾಗೂ SCVT ಇಂದ ಮಾನ್ಯತೆ ಪಡೆದ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಅಥವಾ ಕೋರ್ಸ್ ಕಂಪ್ಲೀಟೆಡ್ ಆಕ್ಟ್ ಅಪ್ರೆಂಟಿಸ್ ಶಿಪ್ ಮುಗಿಸಿರಬೇಕು.

ವಯೋಮಿತಿ ವಿವರ:

  • ಟೆಕ್ನಿಷಿಯನ್ ಗ್ರೇಡ್ I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 33 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ಕನಿಷ್ಠ ವರ್ಷದಿಂದ ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

ಕೇಂದ್ರ ಸರ್ಕಾರದ ನಿಯಮಾವಳಿಗಳ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವಂತೆ ವಯೋಮಿತಿ ಸಡಿಲಿಕೆ ಇರುತ್ತದೆ.

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
  • PwBD ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ: 10 ವರ್ಷ
  • PwBD ಒಬಿಸಿ ಅಭ್ಯರ್ಥಿಗಳಿಗೆ: 13 ವರ್ಷ
  • PwBD ಎಸ್ಸಿ ಹಗೂ ಎಸ್ಟಿ ಅಭ್ಯರ್ಥಿಗಳಿಗೆ: 15 ವರ್ಷ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸೇವಾ ಅವಧಿಯ ನಂತರ 3 ರಿಂದ 8 ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ. 500/-ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. (ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಹಾಜರಾದ ನಂತರ ರೂ. 400/- ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ)
  • PwBD, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಮಾಜಿ ಸೈನಿಕ, ಮಹಿಳೆಯರು, ಆರ್ಥಿಕ ಹಿಂದುಳಿದ ವರ್ಗ, ಟ್ರ್ಯಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ರೂ. 250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. (ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಹಾಜರಾದ ನಂತರ ರೂ. 250/- ಅರ್ಜಿ ಶುಲ್ಕವನ್ನು ಸಹ ಮರುಪಾವತಿಸಲಾಗುತ್ತದೆ)

ವೇತನ ಶ್ರೇಣಿ:

ಟೆಕ್ನಿಷಿಯನ್ ಗ್ರೇಡ್ I ಹಾಗೂ ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7 ನೇ ವೇತನ ಆಯೋಗದ ಅನ್ವಯ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.

  • ಟೆಕ್ನಿಷಿಯನ್ ಗ್ರೇಡ್ I ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್ 5 ರ ಅಡಿಯಲ್ಲಿ ಮಾಸಿಕ ರೂ. 29,200/- ಪ್ರಾರಂಭಿಕ ಮೂಲ ವೇತನವನ್ನು ನೀಡಲಾಗುತ್ತದೆ ಹಾಗೂ ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಇತರೆ ಭತ್ಯೆಗಳನ್ನು ಸಹ ನೀಡಲಾಗುತ್ತದೆ.
  • ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್ 2 ರ ಅಡಿಯಲ್ಲಿ ಮಾಸಿಕ ರೂ. 19,900/- ಮೂಲ ವೇತನವನ್ನು ನೀಡಲಾಗುತ್ತದೆ ಹಾಗೂ ಇದರೊಂದಿಗೆ ಇತರೆ ಭತ್ಯೆಗಳನ್ನು ಸಹ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೇಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ಕ್ರಿಯೇಟ್ ಅಕೌಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಇಮೇಲ್ ಅಡಿ ಹಾಗೂ ಮೊಬೈಲ್ ನಂಬರ್ ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ ಲಾಗಿನ್ ಆಗಿ.
  • ಅಪ್ಲಿಕೇಶನ್ ಫಾರ್ಮ್ ನಲ್ಲಿ ಎಲ್ಲ ವೈಯಕ್ತಿಕ ವಿವರ, ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯವಿರುವ ಶೈಕ್ಷಣಿಕ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೋ, ಬಿಳಿ ಹಾಳೆಯ ಮೇಲೆ ಕಪ್ಪು ಶಾಹಿಯಲ್ಲಿ ಮಾಡಿರುವ ಸಹಿ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ವಿವರಗಳು ಸರಿ ಇದಿಯೇ ಎಂದು ಖಚಿತಪಡಿಸಿಕೊಂಡು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ:

ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ 100 ಅಂಕಗಳ ಬಹುಆಯ್ಕೆ ಪ್ರಶ್ನೆಗಳು ಇರುತ್ತದೆ. ಈ ಒಂದು ಪರೀಕ್ಷೆಯನ್ನು ಬರೆಯಲು 90 ನಿಮಿಷ ಕಾಲಾವಕಾಶವನ್ನು ನೀಡಲಾಗಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

  • ದಾಖಲಾತಿ ಪರಿಶೀಲನೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1:1 ಅನುಪಾತದಲ್ಲಿ ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ.

  • ವೈದ್ಯಕೀಯ ಪರೀಕ್ಷೆ:

ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ರೈಲ್ವೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ30-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ29-07-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 31-07-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಭಾರತೀಯ ರೈಲ್ವೆ ಇಲಾಖೆಯು ಪ್ರಸ್ತುತ ಸಾಲಿನಲ್ಲಿ 6557 ಟೆಕ್ನಿಷಿಯನ್ ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ತಾಂತ್ರಿಕ ಹಿನ್ನಲೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 29-07-2026 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment