SSY: ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ₹250 ಹೂಡಿಕೆ ಮಾಡಿ ₹70 ಲಕ್ಷ ಪಡೆಯಿರಿ! ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ, ನೀವೇನಾದರೂ ನಿಮ್ಮ ಮನೆಯ ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರತೆಯನ್ನು ಒದಗಿಸಲು ಹಾಗೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಕನಸಿಗೆ ಆರ್ಥಿಕ ಭದ್ರತೆಯನ್ನು ಒದಗಿಸಬೇಕೆಂದಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ!

SSY Scheme in Kannada

ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವ ಒಂದೊಳ್ಳೆಯ ಉಳಿತಾಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಒಂದು ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಪ್ರತಿ ಹಣಕಾಸಿನ ವರ್ಷಕ್ಕೆ ರೂ. 250/- ರಿಂದ ರೂ. 1.5 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು? ಯಾರು ಅರ್ಜಿ ಸಲ್ಲಿಸಲು ಅರ್ಹರು? ಈ ಒಂದು ಯೋಜನೆಯಡಿಯಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿದೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ.

SSY

ಪ್ರಮುಖ ಹೈಲೈಟ್ಸ್:

ಯೋಜನೆಯ ಹೆಸರುಸುಕನ್ಯಾ ಸಮೃದ್ಧಿ ಯೋಜನೆ
ಅರ್ಹ ಫಲಾನುಭವಿಗಳುಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು
ಕನಿಷ್ಠ ಹೂಡಿಕೆ ರೂ. 250/-
ಬಡ್ಡಿ ದರ 8.20%
ಗರಿಷ್ಟ ಹೂಡಿಕೆ1.5 ಲಕ್ಷ

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರವು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದಡಿಯಲ್ಲಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ರೂಪಿಸಿರುವ ಒಂದೊಳ್ಳೆಯ ಉಳಿತಾಯ ಯೋಜನೆಯಾಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆ ಸಮಯದಲ್ಲಿ ಎದುರಿಸುವ ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡಲು ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಒಂದು ಯೋಜನೆಯಡಿಯಲ್ಲಿ ತಮ್ಮ ಹೆಣ್ಣು ಮಗುವಿಗೆ 15 ವರ್ಷ ತುಂಬುವ ವರೆಗೂ ನಿಗದಿತ ಬ್ಯಾಂಕ್ ಖಾತೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

ಯೋಜನೆಯ ಉದ್ದೇಶ:

  • ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು:

ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವುದು ಅವರ ಬಹುಮುಖ್ಯ ಜವಾಬ್ದಾರಿ ಆಗಿದೆ. ಹಾಗಾಗಿ ಪೋಷಕರಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದಿಷ್ಟು ಹಣವನ್ನು ಹೂಡಿಕೆ ಮಾಡಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಲು ಪ್ರೋತ್ಸಾಹಿಸುವುದು.

  • ಬಾಲ್ಯ ವಿವಾಹವನ್ನು ತಡೆಗಟ್ಟುವುದು:

ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿಯಲ್ಲಿ ಹೂಡಿಕೆ ಮಾಡಿರುವ ಹಣವನ್ನು 18 ವರ್ಷದ ಒಳಗೆ ಹಿಂಪಡೆಯಲು ಅವಕಾಶ ಇರುವುದಿಲ್ಲ. ಈ ಒಂದು ನಿರ್ಬಂಧದಿಂದಾಗಿ ಪೋಷಕರು ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹವನ್ನು ಮಾಡುವುದನ್ನು ತಡೆಗಟ್ಟಬಹುದಾಗಿದೆ.

  • ಪೋಷಕರ ಹೊರೆಯನ್ನು ಕಡಿಮೆ ಮಾಡುವುದು:

ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳಿಗೆ ಒಂದೇ ಬಾರಿಗೆ ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣವನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಅಂತಹ ಪೋಷಕರಿಗೆ ಸುಕನ್ಯಾ ಸಮೃದ್ಧಿ ಸಮೃದ್ಧಿ ಯೋಜನೆಯಡಿಯಲ್ಲಿ ತಮ್ಮ ಮಕ್ಕಳ ಹೆಸರಿನಲ್ಲಿ ಮಕ್ಕಳು ಸಣ್ಣ ವಯಸ್ಸಿನಲ್ಲಿರುವಾಗಲೇ ಒಂದಿಷ್ಟು ಹಣವನ್ನು ಹೂಡಿಕೆ ಮಾಡಲು ಪ್ರೇರೇಪಿಸುವ ಮೂಲಕ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.

  • ಉಳಿತಾಯದ ಮನೋಭಾವವನ್ನು ಹೆಚ್ಚಿಸುವುದು:

ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಪೋಷಕರು ಸಂಪಾದಿಸಿದ ಒಂದಿಷ್ಟು ಹಣವನ್ನು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಸಣ್ಣ ಮೊತ್ತದ ಹೂಡಿಕೆಯ ಮೂಲಕ ದೀರ್ಘ ಕಾಲದ ವರೆಗೆ ದೊಡ್ಡ ಮಟ್ಟದ ಹಣವನ್ನು ಉಳಿತಾಯ ಮಾಡಲು ಸಹಾಯವಾಗುವುದು.

ಯೋಜನೆಯ ಲಾಭಗಳು:

  • ಕನಿಷ್ಠ ಠೇವಣಿ:

ಪೋಷಕರು ಸುಕನ್ಯ ಸಮೃದ್ಧಿ ಯೋಜನೆಯಡಿಯಲ್ಲಿ ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ ರೂ. 250/- ರಿಂದ ತಮ್ಮಗೆ ಅನುಕೂಲವಾಗುವಷ್ಟು ಅಂದರೆ ರೂ. 1.5 ಲಕ್ಷದ ವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಪೋಷಕರಿಗೆ ಒಂದು ವರ್ಷದಲ್ಲಿ ಹಣವನ್ನು ಹೊದಿಕೆ ಮಾಡಲು ಮರೆತರೆ, ಅಥವಾ ಆರ್ಥಿಕ ಸಮಸ್ಯೆ ಉಂಟಾದರೆ ಕೇವಲ ರೂ. 50 ದಂಡಗಳನ್ನು ಪಾವತಿಸಬೇಕಾಗುತ್ತದೆ.

  • ಅತ್ಯಾಕರ್ಷಕ ಬಡ್ಡಿ ದರ:

ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷ ಶೇಕಡಾ 8.20% ವರೆಗೆ ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ಮಾಡಿದ ಉಳಿತಾಯಕ್ಕೆ ಬಾರಿ ಮೊತ್ತದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

  • ಶೈಕ್ಷಣಿಕ ವೆಚ್ಚಕ್ಕೆ ಬಳಕೆ:

ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣವನ್ನು SSLC ಪರೀಕ್ಷೆ ಮುಗಿದ ನಂತರ ಅಂದರೆ 18 ವರ್ಷದ ನಂತರ ಶೈಕ್ಷಣಿಕ ವೆಚ್ಚವನ್ನು ಪೂರೈಸಲು 50% ಹಣವನ್ನು ಹಿಂಪಡೆಯಬಹುದಾಗಿದೆ.

ನೀವು ಹೂಡಿಕೆ ಮಾಡುವ ಮೊತ್ತಕ್ಕೆ ಸಿಗುವ ಲಾಭ ಎಷ್ಟು ಗೊತ್ತ?

ನೀವೇನಾದರೂ ನಿಮ್ಮ ಮಗಳ ಹೆಸರಿನಲ್ಲಿ ಒಂದಿಷ್ಟು ಹಣವನ್ನು ಹೂಡಿಕೆ ಮಾಡಿದರೆ ಮಗಳಿಗೆ 21 ವರ್ಷ ಪೂರ್ಣಗೊಂಡಾಗ ನಿಮಗೆ ಸಿಗುವ ಉಳಿತಾಯ ಹಣದ ಅಂದಾಜು ವಿವರ ಈ ಕೆಳಕಂಡಂತಿದೆ.

ಮಾಸಿಕ ಉಳಿತಾಯ ವಾರ್ಷಿಕ ಹೂಡಿಕೆ 15 ವರ್ಷಗಳ ಒಟ್ಟು ಹೂಡಿಕೆ ಮೊತ್ತ 21 ವರ್ಷದ ನಂತರ ಸಿಗುವ ಒಟ್ಟು ಮೊತ್ತ
₹1,000₹12,000₹1,80,000₹5,74,570/-
₹2,000₹24,000₹3,60,000₹11,49,139/-
₹5,000₹60,000₹9,00,000₹28,72,847/-
₹10,000₹1,20,000₹18,00,000₹57,45,695/-
₹12,500₹1,50,000₹22,50,000₹71,82,119/-

ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ಸುಕನ್ಯಾ ಸಮೃದ್ಧಿ ಖಾತೆಯನ್ನ ಹೆಣ್ಣು ಮಗುವಿನ ಪೋಷಕರು ಅಥವಾ ಕಾನೂನು ಬದ್ದ ಪೋಷಕರು ಮಾತ್ರ ತೆರೆಯಬಹುದಾಗಿದೆ.
  • ಹೆಣ್ಣು ಮಗು 10 ವರ್ಷಕ್ಕಿಂತ ಕಡಿಮೆ ವಯೋಮಿತಿಯನ್ನು ಹೊಂದಿರಬೇಕು.
  • ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರ ತೆರೆಯಲು ಅವಕಾಶ.
  • ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು?

  • ಹೆಣ್ಣು ಮಗುವಿನ ಜನನ ಪ್ರಮಾಣಪತ್ರ
  • ಅರ್ಜಿದಾರ ಪೋಷಕರ ಅಥವಾ ಕಾನೂನು ಬದ್ದ ಪೋಷಕರ ಐಡಿ ಪ್ರೂಫ್
  • ಅರ್ಜಿದಾರ ಪೋಷಕರ ಅಥವಾ ಕಾನೂನು ಬದ್ದ ಪೋಷಕರ ಫೋಟೋ
  • ಅರ್ಜಿದಾರ ಪೋಷಕರ ಅಥವಾ ಕಾನೂನು ಬದ್ದ ಪೋಷಕರ ವಿಳಾಸ ಪುರಾವೆ
  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಎಲ್ಲಿ?

ಪೋಷಕರು ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ತಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್ ಮೂಲಕ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದಾಗಿದೆ.

ಖಾತೆಯನ್ನು ಹೇಗೆ ತೆರೆಯುವುದು:

  • ಪೋಷಕರು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್ ಗೆ ಭೇಟಿ ನೀಡಿ.
  • ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆದುಕೊಳ್ಳಿ.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
  • ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅವುಗಳನ್ನು ಕಚೇರಿಯ ಸಿಬ್ಬಂದಿಗೆ ನೀಡಿ.
  • ಇವುಗಳ ಜೊತೆಗೆ ಮೊದಲ ಠೇವಣಿಯನ್ನು ಪಾವತಿಸಿ.
  • ಅರ್ಜಿ ಹಾಗೂ ಠೇವಣಿಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯು ಪ್ರಕ್ರಿಯೆ ಗೊಳಿಸುತ್ತದೆ.
  • ಈ ಒಂದು ಪ್ರಕಿಯೆ ಪೂರ್ಣಗೊಂಡಾಗ ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯು ಸಕ್ರಿಯಗೊಳ್ಳುತ್ತದೆ .

ಅಂತಿಮ ತೀರ್ಮಾನ:

ನೀವೇನಾದರೂ ನಿಮ್ಮ ಹೆಣ್ಣು ಮಗುವಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಬಯಸಿದರೆ ಇದೊಂದು ಸುವರ್ಣಾವಕಾಶವಾಗಿದ್ದು, ಸಣ್ಣ ಮೊತ್ತದ ಉಳಿತಾಯದೊಂದಿಗೆ ದೀರ್ಘ ಕಾಲದ ವರೆಗೆ ಬಂಡವಾಳವನ್ನು ಹೂಡಿಕೆ ಮಾಡಲು ಇದೊಂದು ಸುರಕ್ಷಿತವಾದ ಯೋಜನೆಯಾಗಿದೆ. ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಇದ್ದು, ನೀವು ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರದಿಂದ ಭಾರೀ ಬಡ್ಡಿ ದರವು ದೊರಕಲಿದ್ದು, ನಿಮ್ಮ ಮಗಳ ಉನ್ನತ ಶಿಕ್ಷಣ ಹಾಗೂ ಮದುವೆಯ ಸಮಯಕ್ಕೆ ಈ ಯೋಜನೆಯು ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಹಾಗಿದ್ದರೆ ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಹೆಣ್ಣು ಮಗುವಿದ್ದರೆ, ಆಕೆಯ ಹೆಸರಿನಲ್ಲಿ ಇಂದೇ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಿರಿ.


ಇದನ್ನು ಗಮನಿಸಿ: ಪ್ರತಿಯೊಬ್ಬ ಆಟೋ ಡ್ರೈವರ್‌ಗೆ ₹15,000 ಸಹಾಯಧನ : ಏನಿದು ಮಾಹಿತಿ? ಇಲ್ಲಿ ನೋಡಿ!

Leave a Comment