ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ! ಕೇಂದ್ರ ಲೋಕಸೇವಾ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಡ್ರಗ್ ಇನ್ಸ್ಪೆಕ್ಟರ್, ಲೀಗಲ್ ಆಫೀಸರ್, ಏರೋನಾಟಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ಅಸಿಸ್ಟೆಂಟ್ ಇಂಜಿನಿಯರ್ ಸೇರಿದಂತೆ ಒಟ್ಟು 450 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
UPSC Recruitment 2026
ಫಾರ್ಮಸಿ, ಇಂಜಿನಿಯರಿಂಗ್, ಕಾನೂನು ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿಪರ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡ್ರಗ್ ಇನ್ಸ್ಪೆಕ್ಟರ್, ಲೀಗಲ್ ಆಫೀಸರ್, ಮೆಡಿಕಲ್ ಆಫೀಸರ್ ಸೇರಿದಂತೆ ಇನ್ನಿತರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7 ನೇ ವೇತನ ಆಯೋಗದ ಅನ್ವಯ ಅತ್ಯಾಕರ್ಷಕ ವೇತನವನ್ನು ನಿಗದಿಪಡಿಸಲಾಗಿದೆ.
ಕೇಂದ್ರ ಲೋಕಸೇವಾ ಆಯೋಗವು ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ದಿನಾಂಕ 25-06-2026 ದಿಂದ 17-07-2026 ವರೆಗೆ ಕಾಲಾವಕಾಶ ನೀಡಲಾಗಿದೆ. ಕೊನೆಯ ದಿನಗಳಲ್ಲಿ ಎದುರಾಗುವ ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದೇ UPSC ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಅವಲೋಕನ:
| ನೇಮಕಾತಿ ಸಂಸ್ಥೆಯ ಹೆಸರು | ಕೇಂದ್ರ ಲೋಕಸೇವಾ ಆಯೋಗ |
| ಹುದ್ದೆಗಳ ಹೆಸರು | ಡ್ರಗ್ ಇನ್ಸ್ಪೆಕ್ಟರ್, ಲೀಗಲ್ ಆಫೀಸರ್, ಏರೋನಾಟಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಇನ್ನಿತರ ಹುದ್ದೆಗಳು |
| ಹುದ್ದೆಗಳ ಸಂಖ್ಯೆ | 450 ಹುದ್ದೆಗಳು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 17-07-2026 |
ಹುದ್ದೆಯ ವಿವರ:
ಕೇಂದ್ರ ಲೋಕಸೇವಾ ಆಯೋಗವು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹುದ್ದೆಗಳ ವಿವರ ಈ ಕೆಳಕಂಡಂತಿದೆ.
| ಹುದ್ದೆಗಳ ವಿವರ | ಹುದ್ದೆಗಳ ಸಂಖ್ಯೆ |
| ಡ್ರಗ್ ನಿಸ್ಪೆಕ್ಟರ್ | 186 ಹುದ್ದೆಗಳು |
| ಸ್ಪೆಷಲಿಸ್ಟ್ ಗ್ರೇಡ್ III (ಅಸಿಸ್ಟೆಂಟ್ ಪ್ರೊಫೆಸರ್) | 91 ಹುದ್ದೆಗಳು |
| ಕಂಪನಿ ಪ್ರಾಸಿಕ್ಯೂಟರ್ | 18 ಹುದ್ದೆಗಳು |
| ಲೀಗಲ್ ಆಫೀಸರ್ | 12 ಹುದ್ದೆಗಳು |
| ಏರೊನಾಟಿಕಲ್ ಆಫೀಸರ್ | 11 ಹುದ್ದೆಗಳು |
| ಅಸಿಸ್ಟೆಂಟ್ ಇಂಜಿನಿಯರಿಂಗ್ (ಸಿವಿಲ್) | 11 ಹುದ್ದೆಗಳು |
| ಇತರೆ ವಿವಿಧ ತಾಂತ್ರಿಕ/ ಆಡಳಿತಾತ್ಮಕ ಹಾಗೂ ವೈದ್ಯಕೀಯ ಹುದ್ದೆಗಳು | 121 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
- ಡ್ರಗ್ ಇನ್ಸ್ಪೆಕ್ಟರ್:
ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಫಾರ್ಮ, ಅಥವಾ ಫಾರ್ಮಸಿಟಿಕಲ್ ಸೈನ್ಸ್ ಅಥವಾ ಕ್ಲಿನಿಕಲ್ ಫಾರ್ಮಕಾಲಜಿ/ ಮೈಕ್ರೋಬಯಾಲಜಿ ಯೊಂದಿಗೆ ಮೆಡಿಸಿನ್ ಪದವಿಯನ್ನು ಹೊಂದಿರಬೇಕು.
- ಸ್ಪೆಷಲಿಸ್ಟ್ ಗ್ರೇಡ್ III (ಅಸಿಸ್ಟೆಂಟ್ ಪ್ರೊಫೆಸರ್):
ಸ್ಪೆಷಲಿಸ್ಟ್ ಗ್ರೇಡ್ III (ಅಸಿಸ್ಟೆಂಟ್ ಪ್ರೊಫೆಸರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆದ MBBS ಪದವಿಯನ್ನು ಹೊಂದಿರಬೇಕು ಹಾಗೂ ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 3 ವರ್ಷಗಳ ಬೋಧನಾ ಅನುಭವವನ್ನು ಹೊಂದಿರಬೇಕು.
- ಕಂಪನಿ ಪ್ರಾಸಿಕ್ಯೂಟರ್ ಹಾಗೂ ಲೀಗಲ್ ಆಫೀಸರ್:
ಕಂಪನಿ ಪ್ರಾಸಿಕ್ಯೂಟರ್ ಹಾಗೂ ಲೀಗಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿಪರ ಅನುಭವವನ್ನು ಸಹ ಹೊಂದಿರಬೇಕು.
- ಏರೋನಾಟಿಕಲ್ ಆಫೀಸರ್:
ಏರೋನಾಟಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಏರೋನಾಟಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಅಥವಾ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಸಂಬಂಧಿತ ವಿಭಾಗದಲ್ಲಿಕ್ಷೇತ್ರದಲ್ಲಿ 2 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
- ಅಸಿಸ್ಟೆಂಟ್ ಇಂಜಿನಿಯರಿಂಗ್:
ಅಸಿಸ್ಟೆಂಟ್ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
- ಇತರೆ ಆಡಳಿತಾತ್ಮಕ ಹುದ್ದೆಗಳು:
ಇತರೆ ಆಡಳಿತಾತ್ಮಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
- ಲೀಗಲ್ ಆಫೀಸರ್, ಅಸಿಸ್ಟೆಂಟ್ ಇಂಜಿನಿಯರ್, ಕಂಪನಿ ಪ್ರಾಸಿಕ್ಯೂಟರ್ ಹಾಗೂ ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಏರೊನಾಟಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಸ್ಪೆಷಲಿಸ್ಟ್ ಗ್ರೇಡ್ III (ಅಸಿಸ್ಟೆಂಟ್ ಪ್ರೊಫೆಸರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಸರ್ಕಾರದ ನಿಯಮಾವಳಿಗಳ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವಂತೆ ವಯೋಮಿತಿ ಸಡಿಲಿಕೆ ಇರುತ್ತದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
- PwBDಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
- ಸಾಮಾನ್ಯ ಹಾಗೂ ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ. 25/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- PwBD, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಪಾವತಿ ವಿಧಾನಗಳಾದ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ UPI ಮೂಲಕ ಪಾವತಿಸಬೇಕಾಗುತ್ತದೆ.
ವೇತನ ಶ್ರೇಣಿ:
ಕೇಂದ್ರ ಲೋಕಸೇವಾ ಆಯೋಗದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಡ್ರಗ್ ಇನ್ಸ್ಪೆಕ್ಟರ್, ಸ್ಪೆಷಲಿಸ್ಟ್ ಗ್ರೇಡ್ III (ಅಸಿಸ್ಟೆಂಟ್ ಪ್ರೊಫೆಸರ್), ಲೀಗಲ್ ಆಫೀಸರ್, ಅಸಿಸ್ಟೆಂಟ್ ಇಂಜಿನಿಯರ್, ಕಂಪನಿ ಪ್ರಾಸಿಕ್ಯೂಟರ್, ಏರೊನಾಟಿಕಲ್ ಆಫೀಸರ್ ಹಾಗೂ ಇನ್ನಿತರ ಆಡಳಿತಾತ್ಮಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7 ವೇತನ ಆಯೋಗದ ಅನ್ವಯ ವಿವಿಧ ಪೆ ಲೆವೆಲ್ ಗಳ ಅಡಿಯಲ್ಲಿ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಇಮೇಲ್ ಅಡಿ ಹಾಗೂ ಮೊಬೈಲ್ ನಂಬರ್ ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ ಲಾಗಿನ್ ಆಗಿ.
- ಅಪ್ಲಿಕೇಶನ್ ಫಾರ್ಮ್ ನಲ್ಲಿ ಎಲ್ಲ ವೈಯಕ್ತಿಕ ವಿವರ, ಶೈಕ್ಷಣಿಕ ವಿವರಗಳನ್ನು ಹಾಗೂ ಅನುಭವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿರುವ ಶೈಕ್ಷಣಿಕ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೋ, ಅಭ್ಯರ್ಥಿಗಳ ಸಹಿ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ವಿವರಗಳು ಸರಿ ಇದಿಯೇ ಎಂದು ಖಚಿತಪಡಿಸಿಕೊಂಡು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ:
UPSC ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದರೆ ಶಾರ್ಟ್ ಲಿಸ್ಟ್ ಅನ್ನು ಸಿದ್ದಪಡಿಸಿ, ಶಾರ್ಟ್ ಲಿಸ್ಟ್ ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ವಸ್ತು ನಿಷ್ಠ ಮಾದರಿಯಲ್ಲಿದ್ದು, ಅಭ್ಯರ್ಥಿಗಳು ಸಲ್ಲಿಸಿದ ಹುದ್ದೆಗಳಿಗೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಸಂದರ್ಶನ:
ಲಿಖಿತ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆದು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ.
- ಅಂತಿಮ ಮೆರಿಟ್ ಪಟ್ಟಿ:
ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 25-06-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 17-07-2026 |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ನೇಮಕಾತಿ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಕೇಂದ್ರ ಲೋಕಸೇವಾ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ಹಾಗೂ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂದಿಸಿದ ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- VMC: ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸರ್ಕಾರಿ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ । ಜುಲೈ 15 ಕೊನೆಯ ದಿನಾಂಕ
- Indian Navy: ₹1.20 ಲಕ್ಷ ವೇತನ! ಭಾರತೀಯ ನೌಕಾಪಡೆಯಲ್ಲಿ SSC ಆಫೀಸರ್ ಹುದ್ದೆಗಳ ನೇಮಕಾತಿ । ಜುಲೈ 27 ಕೊನೆಯ ದಿನಾಂಕ
- NFSU: ರೂ. 90,000 ವೇತನ! ಧಾರವಾಡದ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಭರ್ಜರಿ ನೇಮಕಾತಿ! ಜುಲೈ 9 ಕೊನೆಯ ದಿನಾಂಕ
- Post Office: ರೂ. 63,200 ವೇತನ! ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ । 18 ಜುಲೈ ಕೊನೆಯ ದಿನಾಂಕ
- KSRTC: ಸಾರಿಗೆ ಕ್ಷೇತ್ರದಲ್ಲಿ ಭರ್ಜರಿ ಅವಕಾಶ! ನೇರ ಚಾಲನಾ ಪರೀಕ್ಷೆ ಮೂಲಕ ಚಾಲಕರಾಗುವ ಸುವರ್ಣಾವಕಾಶ