Home: ಜುಲೈ ತಿಂಗಳಿಂದ PM ಆವಾಸ್ ಯೋಜನೆಗೆ ಅರ್ಜಿ ಆರಂಭ! ಸ್ವಂತ ಮನೆಯ ಕನಸು ನನಸಿಗೆ ಸರ್ಕಾರದಿಂದ 2.7 ಲಕ್ಷ ಸಹಾಯಧನ

Home: ನಮಸ್ಕಾರ ಸ್ನೇಹಿತರೆ, ನೀವೇನಾದರೂ ಸ್ವಂತ ಮನೆಯ ಕನಸು ಕಾಣುತ್ತಿದ್ದೀರಾ? ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಹಣಕಾಸಿನ ಸಮಸ್ಯೆ ಅಡ್ಡಿಯಾಗುತ್ತಿದ್ದಿರಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸ್ವಂತ ಮನೆಯ ಕನಸಿಗೆ ನೀರೆರೆಚಲು ಕೇಂದ್ರ ಸರ್ಕಾರವು ಅತ್ಯುತ್ತಮ ಯೋಜನೆಯನ್ನು ಜಾರಿಗೊಳಿಸಿದೆ.


ಆ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ! ಈ ಯೋಜನೆಯಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ವಸತಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಈ ಯೋಜನೆಯು ನಗರ ಹಾಗೂ ಗ್ರಾಮೀಣ ಫಲಾನುಭವಿಗಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ.

ಹಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಯೋಜನೆಯ ಪ್ರಯೋಜನಗಳೇನು? ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಯಾವಾಗ ಜಾರಿಗೆ ತರಲಾಯಿತು? ಉದ್ದೇಶವೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸುತ ಲೇಖನದಲ್ಲಿ ತಿಳಿದುಕೊಳ್ಳೋಣ.

Home

ಯೋಜನೆಯ ಕಿರು ವಿಮರ್ಶೆ:

ಯೋಜನೆಯ ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ
ಅರ್ಹ ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದ ಹಾಗೂ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳು
ಮುಖ್ಯ ವಿಭಾಗಗಳು PMAY -ಗ್ರಾಮೀಣ
PMAY -ನಗರ
ಸಿಗುವ ಸಹಾಯಧನದ ವಿವರ ರೂ. 1.2 ಲಕ್ಷದಿಂದ ರೂ. 2.7 ಲಕ್ಷ
ಉದ್ದೇಶ ಪ್ರತಿಯೊಂದು ಕುಟುಂಬಗಳಿಗೂ ಸ್ವಂತ ಸೂರನ್ನು ಕಲ್ಪಿಸುವುದು
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮತ್ತು ಆಫ್ಲೈನ್

ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು?

ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸುಸಜ್ಜಿತ ಹಾಗೂ ಸುರಕ್ಷಿತ ವಸತಿಯನ್ನು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು ಜೂನ್ 25, 2015 ರಂದು ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಎಲ್ಲರಿಗೂ ಸ್ವಂತ ಮನೆಯನ್ನು ಕಲ್ಪಿಸಿಕೊಂಡು ಮೂಲಕ ಅವರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಅನುವು ಮಾಡಿಕೊಡುವುದಾಗಿದೆ.

ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ರೂ. 1.2 ಲಕ್ಷದಿಂದ ರೂ. 2.7 ಲಕ್ಷ ಸಹಾಯಧನವನ್ನು ಒದಗಿಸಲಾಗುತ್ತದೆ.

ಯೋಜನೆಯ ಉದ್ದೇಶ:

  • ಎಲ್ಲರಿಗೂ ಸ್ವಂತ ಮನೆಯನ್ನು ಕಲ್ಪಿಸಿಕೊಡುವುದು:

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕಚ್ಚಾ ಮನೆ, ಬಾಡಿಗೆ ಮನೆ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ನಾಗರೀಕನಿಗೂ ಸ್ವಂತ ಮನೆಯನ್ನು ಕಲ್ಪಿಸಿಕೊಡುವ ಮೂಲಕ ಅವರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು:

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣ ಆಗುವ ಮನೆಗೆ ಕುಟುಂಬದ ಮಹಿಳಾ ಸದಸ್ಯರನ್ನು ಮಾಲೀಕರನ್ನಾಗಿ ಮಾಡುವುದು ಅಥವಾ ಕುಟುಂಬದ ಮಹಿಳಾ ಮತ್ತು ಪುರುಷ ಸದಸ್ಯರ ಜಂಟಿ ಹೆಸರಿನಲ್ಲಿ ನೋಂದಾಯಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವುದು.

  • ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು:

ದೇಶದ ಎಲ್ಲಾ ಭಾಗಗಳಲ್ಲಿಯೂ ಗುಣಮಟ್ಟದ ವಸತಿ ಸೌಲಭ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಯನ್ನು ಗ್ರಾಮೀಣ ಮತ್ತು ನಗರ ಎಂಬ ಎರಡು ವಿಭಾಗಗಳಲ್ಲಿ ಜಾರಿಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮನೆಗಳನ್ನು ಪಕ್ಕಾ ಮನೆಗಳಾಗಿ ಪರಿವರ್ತಿಸಲು ನೆರವು ನೀಡಿದರೆ, ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ವಸತಿ ನಿರ್ಮಾಣ ಮತ್ತು ಖರೀದಿಗೆ ಪ್ರೋತ್ಸಾಹ ನೀಡಲಾಗುತ್ತದೆ.

  • ಸುರಕ್ಷಿತ ಮತ್ತು ಆರೋಗ್ಯಕರ ವಾಸಸ್ಥಳ ನಿರ್ಮಾಣಕ್ಕೆ ಅವಕಾಶ:

ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಹವಾಮಾನ ವೈಪರೀತ್ಯಗಳಿಂದ ರಕ್ಷಣೆ ನೀಡುವ, ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣ ಹೊಂದಿರುವ ಮನೆಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಯೋಜನೆ ಪ್ರಯೋಜನ:

  • ಸ್ವಂತ ಮನೆ ಹೊಂದುವ ಅವಕಾಶ:

ಸ್ವಂತ ಮನೆ ಇಲ್ಲದ ಅರ್ಹ ಕುಟುಂಬಗಳಿಗೆ ಪಕ್ಕಾ ಮನೆಯನ್ನು ನಿರ್ಮಿಸಿಕೊಳ್ಳಲು ಅಥವಾ ಖರೀದಿಸಲು ಸರ್ಕಾರದಿಂದ ನೆರವು ದೊರೆಯುತ್ತದೆ. ಇದರಿಂದ ಬಾಡಿಗೆ ಮನೆ ಅಥವಾ ತಾತ್ಕಾಲಿಕ ವಾಸಸ್ಥಳದ ಅವಲಂಬನೆ ಕಡಿಮೆಯಾಗುತ್ತದೆ.

  • ಗೃಹ ಸಾಲ ಪಡೆಯಲು ಅನುಕೂಲ:

ನಗರ ಪ್ರದೇಶದ ಅರ್ಹ ಫಲಾನುಭವಿಗಳು ಗೃಹ ಸಾಲ ಪಡೆದರೆ, ಬಡ್ಡಿದರದಲ್ಲಿ ಸಬ್ಸಿಡಿಯ ಪ್ರಯೋಜನ ದೊರೆಯುತ್ತದೆ. ಇದರಿಂದ ಕಡಿಮೆ ಮಾಸಿಕ ಕಂತಿನಲ್ಲಿ (EMI) ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.

  • ಮನೆ ನಿರ್ಮಾಣದ ವೆಚ್ಚ ಕಡಿಮೆಯಾಗುತ್ತದೆ:

ಮನೆ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಸಂಪೂರ್ಣವಾಗಿ ಸ್ವಂತವಾಗಿ ಭರಿಸುವ ಅವಶ್ಯಕತೆ ಇರುವುದಿಲ್ಲ. ಸರ್ಕಾರದ ಸಹಾಯಧನದಿಂದ ನಿರ್ಮಾಣದ ಒಟ್ಟು ವೆಚ್ಚದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ.

  • ಮಹಿಳೆಯರ ಆಸ್ತಿ ಹಕ್ಕಿಗೆ ಪ್ರೋತ್ಸಾಹ:

ಯೋಜನೆಯಡಿ ಮಹಿಳೆಯ ಹೆಸರಿನಲ್ಲಿ ಅಥವಾ ಗಂಡ-ಹೆಂಡತಿಯ ಜಂಟಿ ಹೆಸರಿನಲ್ಲಿ ಮನೆ ನೋಂದಾಯಿಸಲು ಆದ್ಯತೆ ನೀಡಲಾಗುತ್ತದೆ. ಇದರಿಂದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಕುಟುಂಬದಲ್ಲಿ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಭಾರತ ನಾಗರೀಕರಾಗಿರಬೇಕು.
  • ಅರ್ಜಿದಾರರು ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯದ ವರ್ಗ ಅಥವಾ ಸರ್ಕಾರ ನಿಗದಿಪಡಿಸಿರುವ ಮಧ್ಯಮ ಆದಾಯದ ವರ್ಗಕ್ಕೆ ಒಳಪಟ್ಟಿರಬೇಕು.
  • ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ದೇಶದ ಯಾವುದೇ ಭಾಗದಲ್ಲಿ ಪಕ್ಕಾ ಮನೆ ಇರಬಾರದು.
  • ಕುಟುಂಬದ ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿರುವ ಮಿತಿಯೊಳಗಿರಬೇಕು.
  • ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಮನೆ ಅಥವಾ ಸಹಾಯಧನ ಪಡೆದಿರಬಾರದು.
  • ಗ್ರಾಮೀಣ ಯೋಜನೆ (PMAY-G)ಗೆ ಅರ್ಜಿ ಸಲ್ಲಿಸುವವರು ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಅರ್ಹತಾ ನಿಯಮಗಳನ್ನು ಪೂರೈಸಿರಬೇಕು.
  • ನಗರ ಯೋಜನೆ (PMAY-U)ಗೆ ಅರ್ಜಿ ಸಲ್ಲಿಸುವವರು ನಗರ ಪ್ರದೇಶದ ಅರ್ಹತಾ ಮಾನದಂಡಗಳನ್ನು ಅನುಸರಿಸಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಆದಾಯ ಪ್ರಮಾಣ ಪತ್ರ
  • ವಿಳಾಸದ ಪುರಾವೆ
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಮೊಬೈಲ್ ಸಂಖ್ಯೆ
  • ಜಾತಿ ಪ್ರಮಾಣ ಪತ್ರ
  • ಇತರೆ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಅರ್ಜಿದಾರರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಹೊಸದಾಗಿ ಅರ್ಜಿ ಸಲ್ಲಿಸುವವರು ಮೊದಲು ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ಹೊಸ ಖಾತೆಯನ್ನು ಸೃಷ್ಟಿಸಿಕೊಳ್ಳಬೇಕು. ನೋಂದಣಿ ಪೂರ್ಣಗೊಂಡ ನಂತರ ಮೊಬೈಲ್ ಸಂಖ್ಯೆ ಹಾಗೂ ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಪ್ರವೇಶಿಸಬೇಕು.
  • ನಂತರ ಮುಖಪುಟದಲ್ಲಿರುವ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ಅಪ್ಲಿಕೇಶನ್ ಫಾರ್ಮ್ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಪಂಚಾಯತಿ ಅಥವಾ ನಗರ ಸಭೆಗೆ ಭೇಟಿ ನೀಡಿ PMAY ಯೋಜನೆಗೆ ಸಂಬಂದಿಸಿದ ಅರ್ಜಿ ಫಾರಂ ಕೇಳಿ ಪಡೆದು ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಕೇಳಿ ಪಡೆಯಿರಿ.

ಅಂತಿಮ ತೀರ್ಮಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆ ದೇಶದ ಲಕ್ಷಾಂತರ ಕುಟುಂಬಗಳ ಸ್ವಂತ ಮನೆ ಕನಸನ್ನು ನನಸು ಮಾಡಿಕೊಳ್ಳಬಹುದಾದ ಮಹತ್ವದ ಸರ್ಕಾರಿ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ಆದಾಯದ ಕುಟುಂಬಗಳಿಗೆ ಶಾಶ್ವತ ವಸತಿ ಪಡೆಯುವ ಅವಕಾಶ ದೊರೆಯುತ್ತಿದೆ. ಅರ್ಹ ಫಲಾನುಭವಿಗಳು ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ತಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment