Labour: ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್! ತಾಯಿ ಲಕ್ಷ್ಮಿ ಬಾಂಡ್ ಯೋಜನೆಯಡಿ ಸಿಗಲಿದೆ ₹50,000 ಸಹಾಯಧನ

ಲೇಬರ್ ಕಾರ್ಡ್ ಹೊಂದಿರುವ ನೋಂದಾಯಿತ ಮಹಿಳಾ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್! ಕರ್ನಾಟಕ ಸರ್ಕಾರವು ಮಹಿಳಾ ಕಾರ್ಮಿಕರಿಗಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಅಡಿಯಲ್ಲಿ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಆ ಯೋಜನೆಯೇ ತಾಯಿ ಲಕ್ಷ್ಮಿ ಬಾಂಡ್ ಯೋಜನೆ.

Maternity Benefit for Construction Workers


ಕರ್ನಾಟಕ ಸರ್ಕಾರವು ರಾಜ್ಯದ ಅಸಂಘಟಿತ ವಲಯದಲ್ಲಿ, ವಿಶೇಷವಾಗಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಗರ್ಭವಸ್ಥೆ ಹಾಗೂ ಹೆರಿಗೆ ಸಮಯದಲ್ಲಿ ಅಗತ್ಯವಾದ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ರೂ. 50,000/- ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.

ಆಸ್ಪತ್ರೆಯಲ್ಲಿ ಸುರಕ್ಷತೆ ಹೆರಿಗೆಯನ್ನು ಉತ್ತೇಜಿಸಿ, ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿಡುವ ಮೂಲಕ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವಿನ ಜನನಕ್ಕೆ ಹೆಚ್ಚಿನ ಸಹಾಯಧನವನ್ನು ಒದಗುವ ಮೂಲಕ ಸಮಾಜದಲ್ಲಿರುವ ಲಿಂಗ ತಾರತಮ್ಯತೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಬಹುದೊಡ್ಡ ಗುರಿಯಾಗಿದೆ.

ಹಾಗಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಅರ್ಹತಾ ಮಾನದಂಡಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

Women

ಯೋಜನೆಯ ಕಿರು ವಿಮರ್ಶೆ:

ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (ಕಾರ್ಮಿಕ ಇಲಾಖೆ)
ಯೋಜನೆಯ ಹೆಸರು ತಾಯಿ ಲಕ್ಷ್ಮಿ ಬಾಂಡ್ ಯೋಜನೆ
ಫಲಾನುಭವಿಗಳು ಲೇಬರ್ ಕಾರ್ಡ್ ಹೊಂದಿರುವ ನೋಂದಾಯಿತ ಮಹಿಳಾ ಕಾರ್ಮಿಕರು
ಸಹಾಯಧನದ ಮೊತ್ತ ಗರಿಷ್ಟ ರೂ. 50,000/-
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮತ್ತು ಆಫ್ಲೈನ್
ಯೋಜನೆಯ ಉದ್ದೇಶ ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆಯನ್ನು ಉತ್ತೇಜಿಸಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.

ಏನಿದು ತಾಯಿ ಲಕ್ಷ್ಮಿ ಬಾಂಡ್ ಯೋಜನೆ?

ತಾಯಿ ಲಕ್ಷ್ಮಿ ಬಾಂಡ್ ಯೋಜನೆ ಎನ್ನುವುದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಜಾರಿಗೆ ತರಲಾದ ಹೆರಿಗೆ ಸಹಾಯಧನ ಯೋಜನೆಯಾಗಿದೆ.

ಈ ಯೋಜನೆಯಡಿಯಲ್ಲಿ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವನ ಹೆರಿಗೆಗೆ ರೂ. 50,000/- ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದ್ದು, ಮಗುವು ಗಂಡು ಮಗುವಾಗಿದ್ದರೆ ರೂ. 20,000/- ಹಾಗೆಯೆ ಹೆಣ್ಣು ಮಗುವಾಗಿದ್ದರೆ ರೂ. 30,000/- ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಉದ್ದೇಶ:

  • ತಾಯಿ ಮತ್ತು ಮಗುವಿನ ಅರೋಗ್ಯ ಮಟ್ಟವನ್ನು ಸುಧಾರಿಸುವುದು:

ತಾಯಿ ಲಕ್ಷ್ಮಿ ಬಾಂಡ್ ಯೋಜನೆಯಡಿಯಲ್ಲಿ ಮಹಿಳಾ ಕಾರ್ಮಿಕರಿಗೆ ರೂ. 50,000/- ಸಹಾಯಧನವನ್ನು ಒದಗಿಸುವ ಮೂಲಕ ಗರ್ಭವಸ್ಥೆ ಹಾಗೂ ಹೆರಿಗೆ ನಂತರ ತಾಯಿ ಮತ್ತು ಮಗುವಿನ ಅರೋಗ್ಯ ಮಟ್ಟವನ್ನು ಸುಧಾರಿಸುವುದು, ಪೌಷ್ಟಿಕ ಆಹಾರವನ್ನು ಸೇವಿಸುವಂತೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

  • ಮಹಿಳಾ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು:

ಹೆರಿಗೆ ಸಮಯದಲ್ಲಿ ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಅಗತ್ಯ ಇರುವುದರಿಂದ, ಅವರ ಆದಾಯವು ಕಡಿಮೆಯಾಗುತ್ತದೆ. ಇದಕ್ಕಾಗಿ ಸರ್ಕಾರವು ತಾಯಿ ಲಕ್ಷ್ಮಿ ಬಾಂಡ್ ಯೋಜನೆಯಲ್ಲಿ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಆರ್ಥಿಕ ನೆರವನ್ನು ನೀಡಿ ಕುಟುಂಬದ ವೆಚ್ಚವನ್ನು ನಿರ್ವಹಿಸಲು ಸಹಾಯ ಮಾಡುವುದು.

  • ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವುದು:

ನೋಂದಾಯಿತ ಮಹಿಳಾ ಕಾರ್ಮಿಕರು ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದರೆ ತಾಯಿ ಲಕ್ಷ್ಮಿ ಬಾಂಡ್ ಯೋಜನೆಯಡಿಯಲ್ಲಿ ಹೆಚ್ಚಿನ ಆರ್ಥಿಕ ನೆರವನ್ನು ಒದಗಿಸುವ ಮೂಲಕ ಲಿಂಗ ಸಮಾನತೆಯನ್ನು ಹೆಚ್ಚಿಸುವುದು.

  • ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವುದು:

ಯೋಜನೆಯಡಿಯಲ್ಲಿ ಮಹಿಳಾ ಕಾರ್ಮಿಕರಿಗೆ ಸಹಾಯಧನವನ್ನು ಒದಗಿಸುವ ಮೂಲಕ ತಾಯಿ ಮತ್ತು ಮಗುವಿಗೆ ಅಗತ್ಯವಾಗುವ ಪೌಷ್ಟಿಕ ಆಹಾರ, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುವ ಮೂಲಕ ಮಹಿಳೆಯರ ಹಾಗೂ ಕುಟುಂಬದ ಜೀವನ ಮಟ್ಟವನ್ನು ಸುಧಾರಿಸುವುದು.

ಯೋಜನೆಯಡಿಯಲ್ಲಿ ಸಿಗುವ ಸಹಾಯಧನದ ವಿವರ:

ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಯಮಾವಳಿಗಳ ಪ್ರಕಾರ, ಅರ್ಹ ಫಲಾನುಭವಿಗಳಿಗೆ ಮಗುವಿನ ಲಿಂಗದ ಆಧಾರದ ಮೇಲೆ ಸಹಾಯಧನವನ್ನು ನೀಡಲಾಗುತ್ತದೆ. ಈ ಹಿಂದೆ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಬಾಂಡ್ ರೂಪದಲ್ಲಿ ನೀಡಲಾಗುತ್ತಿತ್ತು, ಆದರೆ ಈಗ ರೂಲ್ 43 ಹೊಸ ನಿಯಮಗಳ ಅನ್ವಯ ಸಹಾಯಧನವನ್ನು ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಮಗುವಿನ ವಿವರಸಹಾಯಧನದ ವಿವರ
ಹೆಣ್ಣು ಮಗು ಜನಿಸಿದರೆ ರೂ. 30,000/-
ಗಂಡು ಮಗು ಜನಿಸಿದರೆ ರೂ. 20,000/-
ಗರಿಷ್ಟ ಸಿಗುವ ಸಹಾಯಧನ ರೂ. 50,000/-

ಅರ್ಹತಾ ಮಾನದಂಡಗಳು:

  • ಅರ್ಹ ಫಲಾನುಭವಿ ಮಹಿಳೆಯರು ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ ಅನ್ನು ಹೊಂದಿರಬೇಕು.
  • ಮಗು ಜನಿಸುವ ದಿನಾಂಕಕ್ಕೆ ಕನಿಷ್ಠ ಒಂದು ವರ್ಷ ಮುಂಚಿತವಾಗಿ ಮಂಡಳಿಯಲ್ಲಿ ಕಾರ್ಮಿಕರಾಗಿ ನೋಂದಣಿಯಾಗಿರಬೇಕು.
  • ಒಂದು ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ ದೃಢೀಕರಣ ಪ್ರತ್ರವನ್ನು ಹೊಂದಿರಬೇಕು.
  • ಅರ್ಜಿದಾರರ ಮಹಿಳಾ ಕಾರ್ಮಿಕರು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಹೆರಿಗೆಗೆ ಮಾತ್ರ ಈ ಯೋಜನೆ ಅನ್ವಹಿಸುತ್ತದೆ.
  • ಮಹಿಳಾ ಕಾರ್ಮಿಕರು ಮಗು ಜನಿಸಿದ ದಿನಾಂಕದಿಂದ 6 ತಿಂಗಳ ಒಳಗಾಗಿ ಅರ್ಜಿಸಲ್ಲಿಸಿದರೆ ಮಾತ್ರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಲೇಬರ್ ಕಾರ್ಡ್
  • ಆಧಾರ್ ಕಾರ್ಡ್
  • ಮಗುವಿನ ಜನನ ಪ್ರಮಾಣಪತ್ರ
  • ಉದ್ಯೋಗ ದೃಢೀಕರಣ ಪತ್ರ
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಆಸ್ಪತ್ರೆ ಡಿಸ್ಚಾರ್ಜ್ ಸಮ್ಮರಿ
  • ತಾಯಿ ಕಾರ್ಡ್
  • ಹಾಗೂ ಇತರೆ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಮೊದಲು ಸೇವಾ ಸಿಂಧೂ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಮೂಲ ವಿವರಗಳನ್ನು ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
  • ಮುಖಪುಟದಲ್ಲಿ ಕಾಣುವ ಅಪ್ಲೈ ಫಾರ್ ಸರ್ವಿಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಸರ್ಚ್ ಅಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಎಂದು ಟೈಪ್ ಮಾಡಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ವೈಯಕ್ತಿಕ ವಿವರ, ವಿಳಾಸ, ಆದಾಯ ಮತ್ತು ಜಾತಿ ಪ್ರಮಾಣಪತ್ರದ ಆರ್.ಡಿ ನಂಬರ್ ಹಾಗೂ ಲೇಬರ್ ಕಾರ್ಡ್ ನಂಬರ್, ಮಗುವಿನ ಜನನ ವಿವರವನ್ನು ಸರಿಯಾಗಿ ಭರ್ತಿ ಮಾಡಿ.
  • ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಲೇಬರ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ರೇಷನ್ ಕಾರ್ಡ್ ಹಾಗೂ ಮುಂತಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಜಿಲ್ಲಾ ಕಾರ್ಮಿಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ನೋಂದಾಯಿತ ಕಟ್ಟಡ ಕಾರ್ಮಿಕ ಮಹಿಳೆಯರಿಗೆ ತಮ್ಮ ಗರ್ಭವಸ್ಥೆಯ ಸಮಯದಲ್ಲಿ ಹಾಗೂ ಹೆರಿಗೆಯ ನಂತರ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ವಿಶ್ರಾಂತಿ ಪಡೆಯಬೇಕು ಎನ್ನುವ ಉದ್ದೇಶದಿಂದಾಗಿ ರೂ. 50,000/- ದ ವರೆಗೆ ಆರ್ಥಿಕ ನೆರವನ್ನು ಒದಗಿಸುತ್ತಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹ ಫಲಾನುಭವಿಗಳು ನಿಗದಿತ ದಿನದೊಳಗೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment