Labour Card: ಕರ್ನಾಟಕ ಸರ್ಕಾರದ ಕಾರ್ಮಿಕರ ಇಲಾಖೆಯು ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ರೇಷನ್ ಕಾರ್ಡ್ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮೂಲಕ ವಿವಿಧ ಸರ್ಕಾರದ ಕಲ್ಯಾಣ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳಬಹುದಾಗಿದೆ.
ಕಟ್ಟಡ, ರಸ್ತೆ, ಆಸ್ಪತ್ರೆ, ಸೇತುವೆ, ಶಾಲೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಶ್ರಮ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜದ ಪ್ರಗತಿಗಾಗಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡುವ ಇಂತಹ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದಾಗಿ ಸರ್ಕಾರವು ವಿವಿಧ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಎಲ್ಲ ಯೋಜನೆಗಳ ಅಡಿಯಲ್ಲಿ ಲಾಭವನ್ನು ಪಡೆಕೊಳ್ಳಬೇಕಾದರೆ ಲೇಬರ್ ಕಾರ್ಡ್ ಪ್ರಮುಖ ಪುರಾವೆಯಾಗಿರುತ್ತದೆ.
ಸರ್ಕಾರವು ಪ್ರಸ್ತುತ ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅರ್ಹ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಹೊಸ ಲೇಬರ್ ಕಾರ್ಡ್ ಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲೆಗಳು ಯಾವುವು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಲೇಬರ್ ಕಾರ್ಡ್ ಹೊಂದಿರುವುದರಿಂದ ಆಗುವ ಪ್ರಯೋಜನಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದು. ಅರ್ಹ ಕಾರ್ಮಿಕರ ಈ ಎಲ್ಲ ಮಾಹಿತಿಯನ್ನು ಓದಿಕೊಂಡು ನಂತರ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:
| ಇಲಾಖೆ | ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ |
| ಯೋಜನೆಯ ಹೆಸರು | ಕರ್ನಾಟಕ ಹೊಸ ಲೇಬರ್ ಕಾರ್ಡ್ ಯೋಜನೆ |
| ಅರ್ಹ ಫಲಾನುಭವಿಗಳು | ಕಟ್ಟಡ ಕಾರ್ಮಿಕರು, ಪ್ಲಮ್ಬರ್, ಪೈಂಟರ್, ಗಾರ್ಮೆಂಟ್ಸ್ ನೌಕರರು ಹಾಗೂ ಇತ್ಯಾದಿ |
| ಉದ್ದೇಶ | ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವುದು. |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
| ಪ್ರಸ್ತುತ ಸ್ಥಿತಿ | ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. |
ಲೇಬರ್ ಕಾರ್ಡ್ ಎಂದರೇನು?
ಲೇಬರ್ ಕಾರ್ಡ್ ಎನ್ನುವುದು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರ ಇಲಾಖೆಯಿಂದ ನೀಡಲಾಗುವ ಅಧಿಕೃತ ಗುರುತಿನ ಚೀಟಿಯಾಗಿದ್ದು, ಇದು ನಿರ್ಮಾಣ ಕಾರ್ಮಿಕರ ನೋಂದಣಿಯನ್ನು ದೃಢೀಕರಿಸುತ್ತದೆ. ಈ ಒಂದು ಲೇಬರ್ ಕಾರ್ಡ್ ವಿಶೇಷವಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರನ್ನು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಸಂಪರ್ಕಿಸುವ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತದೆ.
ಲೇಬರ್ ಕಾರ್ಡ್ ಕೇವಲ ಗುರುತಿನ ದಾಖಲೆಗಳಿಗೆ ಸೀಮಿತವಾಗಿಲ್ಲ ಇದು ಕಾರ್ಮಿಕರ ಹಕ್ಕನ್ನು ರಕ್ಷಿಸುವ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಸಾಧನಗಳಾಗಿವೆ. ಕೆಲವು ಸಂದರ್ಭಗಳಲ್ಲಿ ಎದುರಾಗುವ ಅನಿರೀಕ್ಷಿತ ಅಪಘಾತಗಳು, ಆರ್ಥಿಕ ಸಂಕಷ್ಟ,, ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಅನಿರೀಕ್ಷಿತ ಘಟನೆಗಳು ಹಾಗೂ ತುರ್ತು ಪರಿಸ್ಥಿತಿಗಳು ಎದುರಾದಾಗ ಸರ್ಕಾರದ ನೆರವನ್ನು ಪಡೆಯಲು ಲೇಬರ್ ಕಾರ್ಡ್ ಪ್ರಮುಖ ಆಧಾರವಾಗಿರುತ್ತದೆ. ಹಾಗಾಗಿ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಅರ್ಹ ಕಾರ್ಮಿಕರು ಲೇಬರ್ ಕಾರ್ಡ್ ಗೆ ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಲೇಬರ್ ಕಾರ್ಡ್ ನ ಅಗತ್ಯತೆ ಏನು?
ಕಟ್ಟಡ ಹಾಗೂ ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಅನೇಕ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿರುವುದರಿಂದ ಅವರಿಗೆ ಸರಿಯಾದ ಉದ್ಯೋಗ ಭದ್ರತೆ, ಆರೋಗ್ಯ ರಕ್ಷಣೆ ಇರುವುದಿಲ್ಲ ಹಾಗೂ ಆರ್ಥಿಕ ನೆರವುಗಳ ಕೊರತೆಯು ಕೂಡ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಲೇಬರ್ ಕಾರ್ಡ್ ಸರ್ಕಾರದ ಇತರೆ ಸೌಲಭ್ಯಗಳನ್ನು ತಲುಪಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಲೇಬರ್ ಕಾರ್ಡ್ ಮೂಲಕ ಸರ್ಕಾರವು ಕಾರ್ಮಿಕರ ಮಾಹಿತಿಗಳನ್ನು ಸಂಗ್ರಹಿಸಿ, ಅವರ ಅಗತ್ಯತೆಗಳಿಗೆ ಅನುಗುಣವಾಗಿ ಶೈಕ್ಷಣಿಕ ನೆರವು, ಆರೋಗ್ಯ ಭದ್ರತೆ, ವಿಮೆ, ಪಿಂಚಣಿ ನಿವೃತ್ತಿ ಜೀವನದ ಭದ್ರತೆ ಸೇರಿದಂತೆ ಇನ್ನಿತರ ಅಗತ್ಯ ಯೋಜನೆಯನ್ನು ರೂಪಿಸುತ್ತದೆ. ಇದರಿಂದ ಕಾರ್ಮಿಕರರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ದೊರೆಯುತ್ತದೆ.
ಲೇಬರ್ ಕಾರ್ಡ್ ನ ಪ್ರಯೋಜನಗಳು:
- ಶೈಕ್ಷಣಿಕ ಧನಸಹಾಯ:
ಕಾರ್ಮಿಕರ ಲೇಬರ್ ಕಾರ್ಡ್ ಹೊಂದಿದ್ದರೆ, ಕಲಿಕಾ ಭಾಗ್ಯ ಯೋಜನೆಯಡಿಯಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕೆ ರೂ. 1000/- ರೂ. 20,000/- ವೆರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.
- ವಿವಾಹಕ್ಕೆ ಸಹಾಯಧನ:
ಕಾರ್ಮಿಕರು ತಮ್ಮ ಮದುವೆಗೆ ಅಥವಾ ತಮ್ಮ ಇಬ್ಬರು ಮಕ್ಕಳ ಮದುವೆಗೆ ವಿವಾಹ ಸಹಾಯಧನ ಯೋಜನೆಯಡಿಯಲ್ಲಿ ರೂ. 60,000/- ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.
- ವೈದ್ಯಕೀಯ ಸೌಲಭ್ಯ:
ಕಾರ್ಮಿಕರು ಅಥವಾ ಅವರ ಅವಲಂಬಿತ ಸದಸ್ಯರುಗಳು ಕಿಡ್ನಿ ವೈಫಲ್ಯ, ಕ್ಯಾನ್ಸರ್ ಗಳಂತಹ ಗಂಭೀರ ಕಾಯಿಲೆಗಳಿಗೆ ತುತ್ತಾದಾಗ ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿಯಲ್ಲಿ ರೂ. 2,00,000/- ದ ವರೆಗಿನ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.
- ಹೆರಿಗೆ ಸೌಲಭ್ಯ:
ಲೇಬರ್ ಕಾರ್ಡ್ ಹೊಂದಿರುವ ಮಹಿಳಾ ಕಾರ್ಮಿಕರಿಗೆ ತಮ್ಮ ಹೆರಿಗೆ ಸಮಯದಲ್ಲಿ ಮೊದಲ ಎರಡು ಮಕ್ಕಳಿಗೆ ತಲಾ ರೂ. 30,000/- ರೂ. 50,000/- ಸಹಾಯಧನವನ್ನು ಒದಗಿಸಲಾಗುತ್ತದೆ.
- ಪಿಂಚಣಿ ಸೌಲಭ್ಯ:
ಕಾರ್ಮಿಕರು ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ತಮ್ಮ 60 ನೇ ವಯಸ್ಸಿನ ನಂತರ ಪ್ರತಿ ತಿಂಗಳು ರೂ. 3000 ಪಿಂಚಣಿಯನ್ನು ಒದಗಿಸಲಾಗುತ್ತದೆ.
- ಅಪಘಾತಕ್ಕೆ ಪರಿಹಾರ ಮತ್ತು ಅಂತಿಮ ಸಂಸ್ಕಾರಕ್ಕೆ ಧನಸಹಾಯ:
ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯತೆ ಆಗಿದ್ದರೆ ಅವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ ಹಾಗೂ ಮರಣ ಹೊಂದಿದರೆ, ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಮತ್ತು ಅಂತ್ಯಸಂಸ್ಕಾರಕ್ಕಾಗಿ ರೂ. 20,000/- ಧನಸಹಾಯವನ್ನು ನೀಡಲಾಗುತ್ತದೆ.
- ಉಚಿತ ಟೂಲ್ ಕಿಟ್:
ಕಾರ್ಮಿಕರು ಮಾಡುವ ಕೆಲಸಕ್ಕೆ ಅನುಗುಣವಾಗಿ ವಿವಿಧ ಪರಿಕರಗಳನ್ನು ಒಳಗೊಂಡ ಟೂಲ್ ಕಿಟ್ ಗಳನ್ನೂ ಸಹ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತಾ ಮಾನದಂಡಗಳು:
- ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಕನಿಷ್ಠ 18 ವರ್ಷದಿಂದ ಗರಿಷ್ಟ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರು ಕಳೆದ ಒಂದು ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ನಿರ್ಮಾಣ ಅಥವಾ ಇತರೆ ಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.
- ನೋಂದಾಯಿತ ಗೊತ್ತಿಗೆದಾರರಿಂದ, ಗ್ರಾಮ ಪಂಚಾಯತಿ ಅಥವಾ ಸ್ಥಳೀಯ ಸಂಸ್ಥೆಗಳಿಂದ 90 ದಿನಗಳ ಉದ್ಯೋಗ ಪ್ರಮಾಣ ಪತ್ರ ಪಡೆದಿರಬೇಕು.
- ಅರ್ಜಿದಾರರು ಯಾವುದೇ ಸರ್ಕಾರಿ ಉದ್ಯೋಗದಲ್ಲಿ ಇರಬಾರದು
- ಅರ್ಜಿದಾರರು ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.
ಲೇಬರ್ ಕಾರ್ಡ್ ಪಡೆಯಲು ಅರ್ಹವಾದ ವೃತ್ತಿಗಳು:
ಈ ಕೆಳಗೆ ತಿಳಿಸಲಾಗುವ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾತ್ರ ಹೊಸದಾಗಿ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
- ರಸ್ತೆ, ಸೇತುವೆ, ಡ್ಯಾಮ್ ನಿರ್ಮಾಣ ಕಾರ್ಮಿಕರು
- ಕಟ್ಟಡ ನಿರ್ಮಾಣ ಕಾರ್ಮಿಕರು
- ಪೆಂಟರ್ಸ್, ಪ್ಲಮ್ಬರ್ಸ್ ಮತ್ತು ಎಲೆಕ್ಟ್ರೀಷಿಯನ್ಸ್
- ಬಡಗಿಗಳು ಮತ್ತು ಕಲ್ಲು ಕಡಿಯುವವರು
- ಟೈಲ್ಸ್ ಮತ್ತು ಮಾರ್ಬಲ್ಸ್ ಅಳವಡಿಸುವವರು
- ಗಾರ್ಮೆಂಟ್ಸ್ ನೌಕರರು ಮತ್ತು ಕ್ಲೀನರ್ ಕಾರ್ಮಿಕರು
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- 90 ದಿನಗಳ ಕೆಲಸದ ಪ್ರಮಾಣಪತ್ರ
- ಆದಾಯ ಮತ್ತು ಜಾತಿ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ವಿವರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಮೊಬೈಲ್ ಸಂಖ್ಯೆ
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ಹಾಗೂ ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಕಾರ್ಮಿಕರು ಮೊದಲು ಕರ್ನಾಟಕ ಸರ್ಕಾರದ ಸೇವಾ ಸಿಂಧೂ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಬಳಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
- ನಂತರ ಮೊಬೈಲ್ ನಂಬರ್ ಹಾಗೂ ಒಟಿಪಿ ಬಳಸಿ ಲಾಗಿನ್ ಆಗಿ
- ಲಾಗಿನ್ ಆದ ನಂತರ ಅಪ್ಲೈ ಫಾರ್ ಸರ್ವಿಸ್ ವಿಭಾಗಕ್ಕೆ ಹೋಗಿ ಸರ್ಚ್ ಅಲ್ಲಿ ಲೇಬರ್ ಕಾರ್ಡ್ ಅಥವಾ ಬಿಲ್ಡಿಂಗ್ ಅಂಡ್ ಅದರ್ ಕನ್ಸ್ಟ್ರಕ್ಷನ್ ವರ್ಕರ್ಸ್ ರಿಜಿಸ್ಟ್ರೇಷನ್ ಎಂದು ಟೈಪ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ವೈಯಕ್ತಿಕ ವಿವರ, ವಿಳಾಸ ಬ್ಯಾಂಕ್ ಖಾತೆಯ ವಿವರ, ವೃತ್ತಿಯ ವಿವರ ಸೇರಿದಂತೆ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ನಂತರ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ.
- ನಂತರ ನಿಗದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಆನ್ಲೈನ್ ನಲ್ಲಿ ಪಾವತಿಸಿ ಸ್ವೀಕೃತಿ ಪತ್ರವನ್ನು ಪ್ರಿಂಟ್ ತೆಗೆದುಕೊಳ್ಳಿ.
ಅಂತಿಮ ತೀರ್ಮಾನ:
ಸರ್ಕಾರವು ಕಾರ್ಮಿಕ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಯಾವುದೇ ಯೋಜನೆಯಡಿಯಲ್ಲಿ ಕಾರ್ಮಿಕರು ಲಾಭವನ್ನು ಪಡೆದುಕೊಳ್ಳಬೇಕಾದರೆ ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ. ನೀವೇನಾದರೂ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು ಇನ್ನು ಕೂಡ ಲೇಬರ್ ಕಾರ್ಡ್ ಹೊಂದಿಲ್ಲವಾದರೆ ಇಂದೇ ಹೊಸದಾಗಿ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಭವಿಷ್ಯದಲ್ಲಿ ಎದುರಾಗುವ ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಸರ್ಕಾರದ ಬೆಂಬಲವನ್ನು ಪಡೆದುಕೊಳ್ಳಿ
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Delivery Boy: ರೂ. 4 ಲಕ್ಷದವರೆಗೆ ಅಪಘಾತ ವಿಮೆ! ಡೆಲಿವರಿ ಕಾರ್ಮಿಕರಿಗೆ ಸರ್ಕಾರದಿಂದ ವಿಮಾ ಯೋಜನೆ ಜಾರಿ । ಇಂದೇ ಅಪ್ಲೈ ಮಾಡಿ
- POMIS: ಪೋಸ್ಟ್ ಆಫೀಸ್ನಲ್ಲಿ ₹36 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ ₹22,200 ಖಚಿತ ಆದಾಯ ಪಡೆಯಿರಿ!
- PAN Card: ₹9000 ಸ್ಟೈಫಂಡ್! ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ 2026 । ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Vidyasiri: ಪ್ರತಿ ತಿಂಗಳು ₹1,500/- ಸ್ಕಾಲರ್ಷಿಪ್! ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆರಂಭ । ಆಗಸ್ಟ್ 31 ಕೊನೆಯ ದಿನಾಂಕ
- PMVBRY: ರೂ. 15,000/- ಪ್ರೋತ್ಸಾಹಧನ! ಹೊಸ ಉದ್ಯೋಗಿಗಳಿಗೆ ಪ್ರಧಾನ ಮಂತ್ರಿಯಿಂದ ದೊಡ್ಡ ಗಿಫ್ಟ್ ಘೋಷಣೆ । ಇಂದೇ ಅಪ್ಲೈ ಮಾಡಿ