POMIS: ಪೋಸ್ಟ್ ಆಫೀಸ್‌ನಲ್ಲಿ ₹36 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ ₹22,200 ಖಚಿತ ಆದಾಯ ಪಡೆಯಿರಿ!

ನೀವು ಹೊಂದಿರುವ ಹಣಕ್ಕೆ ಭದ್ರತೆಯ ಅಗತ್ಯವಿದೆಯೇ? ಹಾಗಿದ್ದರೆ ಆ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತವಾಗಿರುತ್ತದೆ ಎಂದು ಯೋಜನೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿ! ಭಾರತ ಸರ್ಕಾರವು ನಿಮಗಾಗಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ನೀವು ರೂ. 9 ಲಕ್ಷದಿಂದ ರೂ. 36 ಲಕ್ಷದ ವರೆಗೆ ಹೂಡಿಕೆ ಮಾಡಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.

POMIS Scheme 2026


ಯಾವುದೇ ರಿಸ್ಕ್ ಇಲ್ಲದೆ ಸುಕ್ಷಿತ ಹೂಡಿಕೆ ಮಾಡುವವರಿಗೆ, ನಿವೃತ್ತರಿಗೆ, ಹಿರಿಯ ನಾಗರಿಕರಿಗೆ, ಗೃಹಿಣಿಯರಿಗೆ ಹಾಗೂ ಮಾಸಿಕ ಆದಾಯವನ್ನು ಬಯಸುವವರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ರೂ. 22,200/- ಆದಾಯವನ್ನು ಗಳಿಸಬಹುದಾಗಿದೆ.

ಸರ್ಕಾರದ ಬೆಂಬಲ ಹೊಂದಿರುವುದರಿಂದ ಪೋಸ್ಟ್ ಆಫೀಸ್ ಆದಾಯ ಯೋಜನೆಯು ಹೆಚ್ಚು ಸುರಕ್ಷಿತವಾಗಿದ್ದು, ನೀವು ದೀರ್ಘ ಕಾಲದ ವರೆಗೆ ಸ್ಥಿರ ಆದಾಯವನ್ನು ಪಡೆಯಲು ಸಹಕಾರಿಯಾಗಿರುವ ಕಡಿಮೆ ಅಪಾಯದ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಬಯಸುವ ಫಲಾನುಭವಿಗಳು ಪ್ರಸ್ತುತ ಲೇಖನದಲ್ಲಿ ನೀಡಲಾದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

POMIS

ಯೋಜನೆಯ ಅವಲೋಕನ:

ಯೋಜನೆಯನ್ನು ನಡೆಸುವ ಸರ್ಕಾರ ಭಾರತ ಸರ್ಕಾರ
ಅನುಷ್ಠಾನ ಸಂಸ್ಥೆ ಭಾರತೀಯ ಅಂಚೆ ಇಲಾಖೆ
ಯೋಜನೆಯ ಹೆಸರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಒಟ್ಟು ಹೂಡಿಕೆ ಮೊತ್ತ ರೂ. 36,00,000/-
ಪ್ರಸ್ತುತ ಬಡ್ಡಿ ದರ ಪ್ರತಿ ವರ್ಷಕ್ಕೆ 7.4% ಸ್ಥಿರ ಬಡ್ಡಿ
ಯೋಜನೆಯ ಅವಧಿ 5 ವರ್ಷ

ಏನಿದು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಎನ್ನುವುದು ಭಾರತ ಸರ್ಕಾರವು ನಡೆಸುವ ಅತ್ಯಂತ ಸುರಕ್ಷಿತ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಒಟ್ಟು ಐದು ವರ್ಷಗಳ ಅವಧಿಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ, ಹೂಡಿಕೆ ಮಾಡಿದ ಹಣದಲ್ಲಿ ಬರುವ ಬಡ್ಡಿಯಿಂದ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.

ಪೋಸ್ಟ್ ಆಫೀಸ್ ನಿಯಮಾವಳಿಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಒಬ್ಬ ವ್ಯಕ್ತಿಯು ತಮ್ಮ ವೈಯಕ್ತಿಕ ಖಾತೆಯಲ್ಲಿ ಗರಿಷ್ಟ ರೂ. 9 ಲಕ್ಷ ಹಣವನ್ನು ಹೂಡಿಕೆ ಮಾಡಬಹುದು ಹಾಗೂ ಜಂಟಿ ಖಾತೆಯಲ್ಲಿ ರೂ. 15 ಲಕ್ಷ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಒಂದು ಯೋಜನೆಯು ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ತಂದಿರುವುದರಿಂದ 100% ಸುರಕ್ಷಿತವಾಗಿದ್ದು, ಒಬ್ಬ ವ್ಯಕ್ತಿಯು ತಮ್ಮ ಕುಟುಂಬದವರ ಹೆಸರಿನಲ್ಲಿ 4 ವೈಯಕ್ತಿಕ ಖಾತೆಯನ್ನು ತೆರೆಯಬಹುದಾಗಿದೆ.

ಯೋಜನೆಯ ಉದ್ದೇಶ:

  • ನಿಯಮಿತ ಸ್ಥಿರ ಆದಾಯವನ್ನು ಒದಗಿಸುವುದು:

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿಯಲ್ಲಿ, ಹೂಡಿಕೆದಾರರು ಒಂದು ಬಾರಿಗೆ ಹೂಡಿಕೆ ಮಾಡಿದ ದೊಡ್ಡ ಮೊತ್ತದ ಹಣಕ್ಕೆ ಪ್ರತಿ ತಿಂಗಳು ಸಂಬಳದಂತೆ ಸ್ಥಿರ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಮಧ್ಯಮ ವರ್ಗಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದು:

ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಹಿರಿಯ ನಗರೀಕರಿಗೆ, ಗೃಹಿಣಿಯರಿಗೆ ಹಾಗೂ ನಿವೃತ್ತಿ ನೌಕರರಿಗೆ ಅವರು ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಸಿಗುವ ಬಡ್ಡಿ ಹಣವನ್ನು ಮಾಸಿಕ ಆದಾಯದ ರೂಪದಲ್ಲಿ ಒದಗಿಸುವ ಮೂಲಕ ಕುಟುಂಬದ ಇತರ ಸದಸ್ಯರ ಮೇಲೆ ಅವಲಂಬಿತರಾಗುವುದನ್ನು ತಡೆದು, ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ನಡೆಸಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ.

  • ಸ್ಥಿರ ಆದಾಯದ ಭರವಸೆ:

ದೇಶದ ಆರ್ಥಿಕ ಮಾರುಕಟ್ಟೆಯಲ್ಲಿ ಏನೇ ಏರಿಳಿತ ಕಂಡರೂ ಸಹ, ಯಾವುದೇ ವ್ಯಕ್ತಿಯು ಈ ಯೋಜನೆಯಡಿಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಿದ ಹಣಕ್ಕೆ ನಿಗದಿಪಡಿಸಿದ ಬಡ್ಡಿ ದರವನ್ನು ಮುಂದಿನ ಐದು ವರ್ಷಗಳಲ್ಲಿಯೂ ಯಾವುದೇ ಕಡಿತವಿಲ್ಲದೆ ಸ್ಥಿರವಾಗಿ ಒದಗಿಸುವುದು.

  • 100% ಸುರಕ್ಷಿತ ಹೂಡಿಕೆ ಮತ್ತು ಉಳಿತಾಯ:

ಯಾವುದೇ ಖಾಸಗಿ ಸಂಸ್ಥೆ ಹಾಗೂ ಷೇರು ಮಾರುಕಟ್ಟೆಯ ರಿಸ್ಕ್ ಇಲ್ಲದೆ, ಕೇಂದ್ರ ಸರ್ಕಾರದ ಮೂಲಕ ಹೂಡಿಕೆದಾರರ ಹಣಕ್ಕೆ 100% ಸುರಕ್ಷತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಪ್ರಯೋಜನ:

  • ಜಂಟಿ ಖಾತೆಗೆ ಅವಕಾಶ:

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಾಡಿಯಲ್ಲಿ ಇಬ್ಬರು ಮತ್ತು ಮೂವರು ಸೇರಿ ಜಂಟಿ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿಯು ಈ ಯೋಜನೆಯಡಿಯಲ್ಲಿ ಗರಿಷ್ಟ ರೂ. 9 ಲಕ್ಷ ಹಣವನ್ನು ಹೂಡಿಕೆ ಮಾಡಬಹುದು ಹಾಗೂ ಜಂಟಿ ಖಾತೆಯಲ್ಲಿ ರೂ. 15 ಲಕ್ಷ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

  • ಸುಲಭ ವರ್ಗಾವಣೆ ಸೌಲಭ್ಯ:

ಯಾವುದೇ ಹೂಡಿಕೆದಾರರು ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗಾವಣೆಯಾದರೆ, ಹೂಡಿಕೆದಾರರ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿಯಲ್ಲಿ ತೆರೆದ ಖಾತೆಯನ್ನು ದೇಶದ ಯಾವುದೇ ಪೋಸ್ಟ್ ಆಫೀಸ್ ಗಳಿಗೆ ಸುಲಭವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

  • 100% ಸುರಕ್ಷತೆ:

ಈ ಯೋಜನೆ ಭಾರತ ಸರ್ಕಾರದ ಯೋಜನೆಯಾಗಿರುವುದರಿಂದ ಹೂಡಿಕೆದಾರರ ಹಣಕ್ಕೆ 100% ಗ್ಯಾರಂಟಿ ಇರುತ್ತದೆ ಇರುತ್ತದೆ. ಖಾಸಗಿ ಸಂಸ್ಥೆ ಹಾಗೂ ಷೇರು ಮರುಕಟ್ಟೆಯಂತೆ ಹಣ ಮುಳುಗುವ ಯಾವುದೇ ಭಯ ಇರುವುದಿಲ್ಲ.

ಹೂಡಿಕೆ ಮತ್ತು ಬಡ್ಡಿ ದರದ ವಿವರ:

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿಯಲ್ಲಿ, ಪ್ರತಿ ಹೂಡಿಕೆದಾರರು ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಹಾಗೂ ಐದು ವರ್ಷಕ್ಕೆ ಸಿಗುವ ಬಡ್ಡಿ ದರದ ವಿವರ ಈ ಕೆಳಕಂಡಂತೆ ನೀಡಲಾಗಿದೆ.

ಹೂಡಿಕೆ ಮೊತ್ತ ಪ್ರತಿ ತಿಂಗಳು ಸಿಗುವ ಬಡ್ಡಿ ಹಣ 5 ವರ್ಷಗಳಿಗೆ ಸಿಗುವ ಬಡ್ಡಿ ಹಣ
₹1,00,000/-₹617₹37,000/-
₹2,00,000/-₹1,233₹74,000/-
₹5,00,000/-₹3,083₹1,85,000/-
₹9,00,000/-₹5,550₹3,33,000/-
₹15,00,000/-₹9,250₹5,55,000/-
₹36,00,000/- ₹22,200₹13,32,000/-

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಭಾರತದ ನಾಗರೀಕರಾಗಿರಬೇಕು.
  • ಅರ್ಜಿದಾರರು 18 ಮೇಲ್ಪಟ್ಟು ವಯೋಮಿತಿಯನ್ನು ಹೊಂದಿರಬೇಕು.
  • ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ.
  • ಒಬ್ಬರೇ ಸಿಂಗಲ್ ಅಕೌಂಟ್ ತೆರಯಬಹುದು ಅಥವಾ ಇಬ್ಬರು ಅಥವಾ ಮೂವರು ಸೇರಿ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸನ್ಸ್
  • ವಿಳಾಸ ಪುರಾವೆ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಉಳಿತಾಯ ಖಾತೆ ಪಾಸ್ ಬುಕ್
  • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ.
  • ಅಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆಯಿರಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ನಿಮ್ಮ ಹೆಸರು, ವಿಳಾಸ, ವಯಸ್ಸು ಸೇರಿದಂತೆ ಇನ್ನಿತರ ಎಲ್ಲ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ಫಾರ್ಮ್ ನ ನಿಗದಿತ ಸ್ಥಳದಲ್ಲಿ ನಿಮ್ಮ ಪಾಸ್ ಪೋರ್ಟ್ ಅಳತೆಯ ಫೋಟೋವನ್ನು ಅಂಟಿಸಿ ಹಾಗೂ ಸಹಿ ಮಾಡಿ.
  • ನಂತರ ಮೇಲೆ ನೀಡಲಾದ ಎಲ್ಲ ದಾಖಲೆಗಳ ಪ್ರತಿಯನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ. ಎಲ್ಲ ದಾಖಲೆ ಪ್ರತಿಗಳ ಮೇಲೆ ಸಹಿ ಹಾಕಿ.
  • ನಂತರ ಈ ಯೋಜನೆಯಡಿಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಾ ಅಷ್ಟು ಹಣವನ್ನು ಪಾವತಿ ಮಾಡಿ.
  • ಅಲ್ಲಿನ ಪೋಸ್ಟ್ ಆಫೀಸ್ ಸಿಬ್ಬಂದಿಗಳು ನಿಮ್ಮ ದಾಖಲೆಗಳು ಹಾಗೂ ಹೂಡಿಕೆ ಮಾಡಲು ನೀಡಿದ ಹಣವನ್ನು ಪರಿಶೀಲಿಸಿ ನಿಮ್ಮ ಖಾತೆಯನ್ನು ತೆರೆದು ಪಾಸ್ ಬುಕ್ ನೀಡುತ್ತಾರೆ.

ಸಮಾಪ್ತಿ:

ಕೇಂದ್ರ ಸರ್ಕಾರವು ಭಾರತೀಯ ನಾಗರೀಕರು ಹೊಂದಿರುವ ಹಣಕ್ಕೆ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವ ಉದ್ದೇಶದಿಂದ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ರೂ. 9 ಲಕ್ಷದ ದಿಂದ ರೂ. 36 ಲಕ್ಷದ ವರೆಗೆ ಹೂಡಿಕೆ ಮಾಡಿ ಮಾಸಿಕ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ. ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸುತ್ತೀರಾ? ಹಾಗಿದ್ದರೆ ಇಂದೇ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment