PAN Card: ದೇಶದ ನಿರುದ್ಯೋಗ ಯುವಕ ಯುವತಿಯರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಅನುಭವವನ್ನು ಒದಗಿಸಲು ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. ಅದುವೇ ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ. ಯುವಕರಿಗೆ ಕೇವಲ ಸಿದ್ದಂತ ಶಿಕ್ಷಣ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಪ್ರತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಬರೋಬ್ಬರಿ ರೂ. 9000/- ಸ್ಟೈಫಂಡ್ ನೀಡಲಾಗುತ್ತದೆ ಹಾಗೂ ಇದರೊಂದಿಗೆ ಇಂಟರ್ನ್ ಶಿಪ್ ಗೆ ಸೇರಿದ ನಂತರ ವಿದ್ಯಾರ್ಥಿಗಳ ವೈಯಕ್ತಿಕ ಖರ್ಚಿಗಾಗಿ ಒಂದು ಬಾರಿಗೆ ರೂ. 6000/- ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತದೆ.
18 ವರ್ಷದಿಂದ 25 ವರ್ಷದೊಳಗಿನ 10 ನೇ ತರಗತಿ, 12 ನೇ ತರಗತಿ, ಪದವಿ, ಡಿಪ್ಲೊಮಾ, ಐಟಿಐ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸರ್ಕಾರ ಮತ್ತು ಕಂಪನಿಗಳು ಜಂಟಿಯಾಗಿ ಈ ಯೋಜನೆಯಡಿಯಲ್ಲಿ ಸಿಗುವ ಸ್ಟೈಫಂಡ್ ಗಳನ್ನು ನೇರವಾಗಿ ವಿದ್ಯಾರ್ಥಿಗಳು ಬ್ಯಾಂಕ್ ಜಮಾ ಮಾಡುತ್ತದೆ.
ಹಾಗಿದ್ದರೆ ಏನಿದು ಪಿಎಂ ಇಂಟರ್ನ್ಶಿಪ್ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲೆಗಳು ಯಾವುದು? ಯೋಜನೆಯ ಉದ್ದೇಶವೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಇಲಾಖೆ | ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ |
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ |
| ಫಲಾನುಭವಿಗಳು | 18 ವರ್ಷದಿಂದ 25 ವರ್ಷದೊಳಗಿನ ನಿರುದ್ಯೋಗ ಯುವಕ ಯುವತಿಯರು |
| ಮಾಸಿಕ ಸ್ಟೈಫಂಡ್ | ರೂ. 9000/- |
| ಇಂಟರ್ನ್ಶಿಪ್ ಅವಧಿ | 6 ರಿಂದ 9 ತಿಂಗಳು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಏನಿದು ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ?
ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ ಎನ್ನುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕೌಶಲ್ಯವನ್ನು ಕಲಿಸುವುದು ಹಾಗೂ ಪ್ರಾಯೋಗಿಕ ಅನುಭವವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಯುವಕ ಯುವತಿಯರಿಗೆ ದೇಶದ ವಿವಿಧ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಧಿ ಮುಗಿಯುವ ವರೆಗೂ ಕೂಡ ಮಾಸಿಕ ರೂ. 9000/- ಸ್ಟೈಫಂಡ್ ಗಳನ್ನು ನೀಡಲಾಗುತ್ತದೆ.
ಯೋಜನೆಯ ಉದ್ದೇಶ:
- ಯುವಕರಿಗೆ ಪ್ರಾಯೋಗಿಕ ಅನುಭವವನ್ನು ನೀಡುವುದು:
ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೆ ಕಂಪನಿಗಳಲ್ಲಿ ನೇರವಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಉದ್ಯೋಗಾವಕಾಶ ಹೆಚ್ಚಿಸುವುದು:
ಯುವಕ ಯುವತಿಯರಿಗೆ ಅಗತ್ಯದ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿ. ಕಾರ್ಪೊರೇಟ್ ಜಗತ್ತಿನಲ್ಲಿ ಇಂದಿನ ಅಗತ್ಯಕ್ಕೆ ತಕ್ಕಂತೆ ಅವರುಗಳನ್ನು ಸಿದ್ದಪಡಿಸುವುದು ಹಾಗೂ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಆರ್ಥಿಕ ಭದ್ರತೆ ನೀಡುವುದು:
ಪಿಎಂ ಇಂಟೆನ್ಶಿಪ್ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವಾಗ ಅವರಿಗೆ ಆರ್ಥಿಕ ಹೊರೆ ಆಗದಂತೆ ತಿಂಗಳಿಗೆ ರೂ. 9000/- ಸ್ಟೈಫಂಡ್ ನೀಡಿ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಕೌಶಲ್ಯದ ಕೊರೆತೆಯನ್ನು ನೀಗಿಸುವುದು:
ಶಿಕ್ಷಣ ಮತ್ತು ಉದ್ಯೋಗದ ನಡುವೆ ಇರುವ ಕೌಶಲ್ಯದ ಕೊರತೆಯನ್ನು ಕಡಿಮೆ ಮಾಡಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಇಂಟರ್ನ್ಶಿಪ್ ಸ್ಟೈಫಂಡ್ ವಿವರ:
ಯುವಕ ಯುವತಿಯರು ಪಿಎಂ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ. 9000/- ದಂತೆ ತರಬೇತಿ ಮುಗಿಯುವ ವರೆಗೂ ಕೂಡ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.
ರೂ. 9000/- ಸ್ಟೈಫಂಡ್ ಗಳಲ್ಲಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ರೂ. 8,000/- ವರ್ಗಾವಣೆ ಮಾಡಿದರೆ ಕಂಪನಿಯು ತನ್ನ ಸಿಎಸ್ಆರ್ ನಿಧಿಯ ಮೂಲಕ ರೂ. 1,000/- ಸ್ಟೈಫಂಡ್ ನೀಡಲಾಗುತ್ತದೆ.
ಹೆಚ್ಚುವರಿ ಆರ್ಥಿಕ ಸೌಲಭ್ಯ:
- ಯುವಕ ಅಥವಾ ಯುವತಿಯರು ಇಂಟರ್ನ್ಶಿಪ್ ಗೆ ಜಾಯಿನ್ ಆದ ತಕ್ಷಣ ಅವರ ಪ್ರಯಾಣದ ಖರ್ಚು, ಬಟ್ಟೆ ಖರ್ಚು ಸೇರಿದಂತೆ ಇನ್ನಿತರ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ಸರ್ಕಾರವು ಒಂದು ಬಾರಿಗೆ ರೂ. 6000/- ಆರ್ಥಿಕ ನೆರವನ್ನು ಒದಗಿಸುತ್ತದೆ.
- ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ಹಾಗೂ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ ಉಚಿತ ವಿಮೆ ನೀಡಲಾಗುತ್ತದೆ.
ಇಂಟರ್ನ್ಶಿಪ್ ನೀಡುವ ವಲಯಗಳು:
ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ದೇಶದ ಪ್ರಮುಖ 25 ಕ್ಕೂ ಹೆಚ್ಚು ಕೈಗಾರಿಕಾ ವಲಯಗಳಲ್ಲಿ ಇಂಟರ್ನ್ಶಿಪ್ ನೀಡಲಾಗುತ್ತದೆ.
- ಇಂಜಿನಿಯರಿಂಗ್ ಮತ್ತು ಉತ್ಪಾದನೆ
- ತಂತ್ರಜ್ಞಾನ ಮತ್ತು ಸೇವಾ ವಲಯ
- ಬ್ಯಾಂಕಿಂಗ್ ಮತ್ತು ಹಣಕಾಸು
- ಚಿಲ್ಲರೆ ವ್ಯಾಪಾರ ಮತ್ತು ಮಾರಾಟ
- ಕೃಷಿ
- ಆರೋಗ್ಯ ರಕ್ಷಣೆ
- ಆಟೋಮೊಬೈಲ್ ಉದ್ಯಮ
- ಮಾಧ್ಯಮ ಮತ್ತು ಸಂವಹನ
- ಆತಿಥ್ಯ
- ಸಲಹಾ ಮತ್ತು ಸೇವೆಗಳು
- ಹಾಗೂ ಇತರೆ ಪ್ರಮುಖ ವಲಯಗಳು
ಅರ್ಹತಾ ಮಾನದಂಡಗಳು:
- ಅಭ್ಯರ್ಥಿ ಭಾರತದ ನಾಗರಿಕರಾಗಿರಬೇಕು.
- ಅಭ್ಯರ್ಥಿಯ ವಯಸ್ಸು ಸಾಮಾನ್ಯವಾಗಿ 18 ರಿಂದ 25 ವರ್ಷದೊಳಗೆ ಇರಬೇಕು.
- 10ನೇ, 12ನೇ, ITI, ಡಿಪ್ಲೊಮಾ ಅಥವಾ ಪದವಿ (Degree) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
- ಇತ್ತೀಚೆಗೆ ಶಿಕ್ಷಣ ಪೂರ್ಣಗೊಳಿಸಿದವರು ಅಥವಾ ಉದ್ಯೋಗದ ಅನುಭವವಿಲ್ಲದ ಯುವಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಕುಟುಂಬದ ವಾರ್ಷಿಕ ಆದಾಯವು ರೂ. 12 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಅರ್ಹರಲ್ಲದ ವಿದ್ಯಾರ್ಥಿಗಳು:
- ಈಗಾಗಲೇ ಪೂರ್ಣಕಾಲಿಕ ಉದ್ಯೋಗದಲ್ಲಿರುವವರು.
- ನಿಯಮಿತ ಸಂಬಳದ ಸರ್ಕಾರಿ ಉದ್ಯೋಗಿಗಳು
- PhD ಅಥವಾ ಉನ್ನತ ಸಂಶೋಧನಾ ಹಂತದಲ್ಲಿರುವವರು
- 25 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು
- ಸರ್ಕಾರಿ ನೌಕರರ ಮಕ್ಕಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಲ್ಲ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಶೈಕ್ಷಣಿಕ ಪ್ರಮಾಣಪತ್ರಗಳು
- ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ಸಂಖ್ಯೆ
- PAN ಕಾರ್ಡ್
- ವಿಳಾಸ ಪುರಾವೆ
- ಈ-ಮೇಲ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಸರ್ಕಾರ ನೀಡಿರುವ ಅಧಿಕೃತ ಇಂಟರ್ನ್ಶಿಪ್ ಪೋರ್ಟಲ್ಗೆ ಹೋಗಿ.
- ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನಮೂದಿಸಿ OTP ಮೂಲಕ ಖಾತೆ ಸೃಷ್ಟಿಸಿ.
- ವೈಯಕ್ತಿಕ ವಿವರಗಳು, ಶಿಕ್ಷಣ ಮಾಹಿತಿ ಮತ್ತು ವಿಳಾಸವನ್ನು ಭರ್ತಿ ಮಾಡಿ.
- ಆಧಾರ್, ಶೈಕ್ಷಣಿಕ ಪ್ರಮಾಣಪತ್ರಗಳು, ಫೋಟೋ ಮತ್ತು ಬ್ಯಾಂಕ್ ವಿವರಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ಅರ್ಹತೆಗೆ ತಕ್ಕ ಕಂಪನಿಗಳು ಮತ್ತು ವಲಯಗಳನ್ನು ಆಯ್ಕೆ ಮಾಡಿ.
- ಆಯ್ಕೆ ಮಾಡಿದ ಇಂಟರ್ನ್ಶಿಪ್ಗೆ ಅಪ್ಲೈ ಮಾಡಿ.
- ಕಂಪನಿ ಅಥವಾ ಸರ್ಕಾರದ ವತಿಯಿಂದ ಶಾರ್ಟ್ಲಿಸ್ಟ್ ಮತ್ತು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
- ಆಯ್ಕೆಯಾದ ನಂತರ ಇಮೇಲ್/SMS ಮೂಲಕ ಮಾಹಿತಿ ನೀಡಲಾಗುತ್ತದೆ.
ಅಂತಿಮ ತೀರ್ಮಾನ:
ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ ಯುವಕರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಉತ್ತಮ ಅವಕಾಶ ನೀಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ಕೇವಲ ಸೈದ್ಧಾಂತಿಕ ಶಿಕ್ಷಣಕ್ಕೆ ಸೀಮಿತವಾಗದೆ, ನೈಜ ಕಂಪನಿ ಪರಿಸರದಲ್ಲಿ ಕೆಲಸ ಮಾಡುವ ಅನುಭವವನ್ನು ಪಡೆಯುತ್ತಾರೆ. ಅರ್ಹ ಅಭ್ಯರ್ಥಿಗಳು ಇಂದೇ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Vidyasiri: ಪ್ರತಿ ತಿಂಗಳು ₹1,500/- ಸ್ಕಾಲರ್ಷಿಪ್! ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆರಂಭ । ಆಗಸ್ಟ್ 31 ಕೊನೆಯ ದಿನಾಂಕ
- PMVBRY: ರೂ. 15,000/- ಪ್ರೋತ್ಸಾಹಧನ! ಹೊಸ ಉದ್ಯೋಗಿಗಳಿಗೆ ಪ್ರಧಾನ ಮಂತ್ರಿಯಿಂದ ದೊಡ್ಡ ಗಿಫ್ಟ್ ಘೋಷಣೆ । ಇಂದೇ ಅಪ್ಲೈ ಮಾಡಿ
- KBY: ₹50,000 ವಿದ್ಯಾರ್ಥಿವೇತನ! ಕಲಿಕಾ ಭಾಗ್ಯ ಯೋಜನೆಗೆ ಅರ್ಜಿ ಆರಂಭ 2026 | ಕಾರ್ಮಿಕರ ಮಕ್ಕಳಿಗೆ ಸುವರ್ಣಾವಕಾಶ
- Gruha Jyothi: ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಗೃಹ ಜ್ಯೋತಿ ಮರು ಅರ್ಜಿ ಕಡ್ಡಾಯ । ಇಂದೇ ಅರ್ಜಿ ಹಾಕಿ