Food Kit: ವಿಶ್ವಕರ್ಮ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ತಮ್ಮ ಸಮುದಾಯದ ನಿರುದ್ಯೋಗಿ ಯುವಕರಲ್ಲಿ ಸ್ವಂತ ಉದ್ಯೋಗವನ್ನು ಉತ್ತೇಜಿಸುವ ಉದ್ದೇಶದಿಂದ ಹೊಚ್ಚ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ವಿಶ್ವಕರ್ಮ ಸಮುದಾಯದ ಪ್ರಮುಖ ಉಪಜಾತಿಗಳಾದ ಕಮ್ಮಾರ, ಬಡಗಿ, ಪತ್ತಾರ ಸೇರಿದಂತೆ ಒಟ್ಟು 4 ಸಾಂಪ್ರದಾಯಿಕ ಕಸಬುಗಳ ಜನರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಸರ್ಕಾರವು ಆಹಾರ ವಾಹಿನಿ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಆಧುನಿಕ ಆಹಾರ ಉದ್ಯಮವನ್ನು ಪ್ರಾರಂಭಿಸಲು ಸರ್ಕಾರದಿಂದ ಭಾರಿ ಮೊತ್ತದ ಸಹಾಯಧನವನ್ನು ನೀಡಲಾಗುತ್ತದೆ.
ಅರ್ಹ ಫಲಾನುಭವಿಗಳಿಗೆ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ಅಥವಾ ನಾಲ್ಕು ಚಕ್ರಗಳ ಇವಿ ಗೂಡ್ಸ್ ವಾಹನಗಳನ್ನು ಖರೀದಿಸಲು ಆರ್ಥಿಕ ನೆರವನ್ನು ನೀಡಿ ಸ್ವಂತವಾಗಿ ಆಹಾರ ಉದ್ಯೋಮವನ್ನು ಪ್ರಾರಂಭಿಸಲು ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಸೇವಾ ಸಿಂಧೂ ಅಧಿಕೃತ ಪೋರ್ಟಲ್ ಮೂಲಕ ಅಥವಾ ವಿಶ್ವಕರ್ಮ ಅಭಿವೃದ್ಧಿ ನಿಗಮಗಳ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಸ್ತುತ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಯೋಜನೆಯ ಅವಲೋಕನ:
| ಅನುಷ್ಠಾನ ಸಂಸ್ಥೆ | ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ |
| ಯೋಜನೆಯ ಹೆಸರು | ಆಹಾರ ವಾಹಿನಿ ಯೋಜನೆ |
| ಅರ್ಹ ಫಲಾನುಭವಿಗಳು | ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಯುವಕರು |
| ಸಹಾಯಧನದ ವಿವರ | ರೂ. 3,00,000/- |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
ಆಹಾರ ವಾಹಿನಿ ಯೋಜನೆ ಎಂದರೇನು?
ಆಹಾರ ವಾಹಿನಿ ಯೋಜನೆ ಎನ್ನುವುದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ವಿಶ್ವಕರ್ಮ ಸಮುದಾಯಗಳ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಈ ಯೋಜನೆಯಡಿಯಲ್ಲಿ ಕಮ್ಮಾರ, ಬಡಗಿ, ಪತ್ತಾರ ಹಾಗೂ ವಿಶ್ವಕರ್ಮ ಸಮುದಾಯದ ಜನರಿಗೆ ಆಹಾರ ಉದ್ಯಮಕ್ಕೆ ಅಗತ್ಯವಾಗುವ ನಾಲ್ಕು ಚಕ್ರಗಳ ವಾಹನಗಳನ್ನು ಖರೀದಿಸಲು ರೂ. 3,00,000/- ಸಹಾಯಧನವನ್ನು ಒದಗಿಸಲಾಗುತ್ತದೆ.
ಇಂದಿನ ಆಧುನಿಕ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಇರುವ ಫೂಫ್ ಟ್ರಕ್, ಸಂಚಾರಿ ತಿಂಡಿ ಮಳಿಗೆ ವ್ಯವಹಾರಗಳನ್ನು ಪ್ರಾರಂಭಿಸಲು ಬಡ ಮತ್ತು ಮಧ್ಯಮ ವರ್ಗಗಳ ಜನರಿಗೆ ಬಂಡವಾಳದ ನೆರವು ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಯೋಜನೆಯ ಉದ್ದೇಶ:
- ಸ್ವಂತ ಉದ್ಯೋಗವನ್ನು ಸೃಷ್ಟಿಸುವುದು:
ನಿರುದ್ಯೋಗಿ ಯುವಕರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳು ಉದ್ಯೋಗಕ್ಕಾಗಿ ಇತರರನ್ನು ಅವಲಂಬಿತರಾಗುವುದನ್ನು ತಡೆದು, ತಾವೇ ಸ್ವಂತ ಉದ್ಯೋಗವನ್ನು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಬಂಡವಾಳದ ಕೊರತೆಗಳನ್ನು ನೀಗಿಸುವುದು:
ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆನ್ನುವ ಹಂಬಲವಿದ್ದರೂ ಕೂಡ ಹಣಕಾಸಿನ ಸಮಸ್ಯೆಯಿಂದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸಾಧ್ಯವಾಗದ ವಿಶ್ವಕರ್ಮ ಸಮುದಾಯದ ಯುವಕರಿಗೆ ರೂ. 3,00,000/- ಸಹಾಯಧನವನ್ನು ನೀಡಿ ಅವರ ಬಂಡವಾಳದ ಕೊರತೆಯನ್ನು ನೀಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಆಧುನಿಕ ಆಹಾರ ಉದ್ಯಮಕ್ಕೆ ಪ್ರೋತ್ಸಾಹ ನೀಡುವುದು:
ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಯುವಕರು ತಮ್ಮ ಸಾಂಪ್ರದಾಯಿಕ ಕಸಬುಗಳ ಜೊತೆಗೆ ಆಧುನಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಾಗೂ ಹೆಚ್ಚು ಲಾಭದಾಯಕವಾಗಿರುವ ಫುಡ್ ಟ್ರಕ್ ಉದ್ಯೋಮವನ್ನು ಪ್ರಾರಂಭಿಸಲು ಆರ್ಥಿಕ ಬೆಂಬಲವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟುವುದು:
ಗ್ರಾಮೀಣ ಭಾಗದ ಯುವಕರು ಶಿಕ್ಷಣ ಮುಗಿಸಿದ ನಂತರ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಇದನ್ನು ತಪ್ಪಿಸಿ, ಈ ಯೋಜನೆಯಡಿಯಲ್ಲಿ ಸ್ವಂತ ಆಹಾರ ಉದ್ಯಮವನ್ನು ಪ್ರಾರಂಭಿಸಲು ಸಹಾಯಧನವನ್ನು ಒದಗಿಸುವ ಮೂಲಕ ತಮ್ಮದೇ ಆದ ಸ್ಥಳೀಯ ಭಾಗದಲ್ಲಿ ಉದ್ಯೋಗವನ್ನು ಮಾಡಲು ಅವಕಾಶ ಕಲ್ಪಿಸುವುದು.
ಯೋಜನೆಯ ಪ್ರಯೋಜನ:
- ಆಹಾರ ವಾಹನವನ್ನು ಖರೀದಿಸಲು ಸರ್ಕಾರದಿಂದ ರೂ. 3,00,000/- ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ. ಇದನ್ನು ಸರ್ಕಾರಕ್ಕೆ ಮರುಪಾವತಿಸುವ ಅಗತ್ಯ ಇರುವುದಿಲ್ಲ.
- ಆಹಾರ ವಾಹನ ಖರೀದಿಗೆ ಆಗುವ ಒಟ್ಟು ವೆಚ್ಚದಲ್ಲಿ ಸಹಾಯಧನದ ವೆಚ್ಚವನ್ನು ಕಳೆದು ಉಳಿದ ವೆಚ್ಚವನ್ನು ಭರಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ.
- ಆಹಾರ ಉದ್ಯಮವು ದಿನನಿತ್ಯದ ನಗದು ಆದಾಯವನ್ನು ತಂದುಕೊಡುವುದರಿಂದ ಫಲಾನುಭವಿಗಳು ಸ್ಥಿರವಾದ ಆದಾಯವನ್ನು ಗಳಿಸಬಹುದು ಹಾಗೂ ಉತ್ತಮ ಲಾಭವನ್ನು ಗಳಿಸಬಹುದು
- ಚಲಿಸುವ ವಾಹನಗಳಲ್ಲಿ ಉದ್ಯಮ ಮಾಡುವುದರಿಂದ ಗ್ರಾಹಕರು ಹೆಚ್ಚಿರುವ, ಮಾರುಕಟ್ಟೆ ಇರುವ ಜಾಗಗಳಿಗೆ ವಾಹನವನ್ನು ಸುಲಭವಾಗಿ ಕೊಂಡೊಯ್ದು ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.
ಅರ್ಹತಾ ಮಾನದಂಡಗಳು:
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ವಿಶ್ವಕರ್ಮ ಸಮುದಾಯಕ್ಕೆ ಸೇರಿರಬೇಕು
- ಅರ್ಜಿದಾರರು ಕನಿಷ್ಠ 21 ವರ್ಷದಿಂದ ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ಕನಿಷ್ಠ 6 ಲಕ್ಷ ಮೀರಿರಬಾರದು.
- ಅರ್ಜಿದಾರರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.
- ಅರ್ಜಿದಾರರು ಸ್ವಂತ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣಪ
- ಆದಾಯ ಪ್ರಮಾಣಪತ್ರ
- ವಾಸಸ್ಥಳ ಪ್ರಮಾಣಪತ್ರ
- ಚಾಲನಾ ಪರವಾನಗಿ
- ಪಾಸ್ಪೋರ್ಟ್ ಸೈಜ್ ಫೋಟೋಗಳು
- ಬ್ಯಾಂಕ್ ಪಾಸ್ಬುಕ್ ಪ್ರತಿಗಳು
- ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಮೊದಲು ಸೇವಾ ಸಿಂಧೂ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಮೂಲ ವಿವರಗಳ್ನ್ನು ನಮೂದಿಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
- ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ಮುಖಪುಟದಲ್ಲಿ ಕಾಣುವ ಅಪ್ಲೈ ಫಾರ್ ಸರ್ವಿಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಸರ್ಚ್ ಅಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಎಂದು ಟೈಪ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ವೈಯಕ್ತಿಕ ವಿವರ, ವಿಳಾಸ, ಆದಾಯ ಮತ್ತು ಜಾತಿ ಪ್ರಮಾಣಪತ್ರದ ಆರ್.ಡಿ ನಂಬರ್ ಹಾಗೂ ಡ್ರೈವಿಂಗ್ ಲೈಸನ್ಸ್ ನಂಬರ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಡ್ರೈವಿಂಗ್ ಲೈಸನ್ಸ್, ರೇಷನ್ ಕಾರ್ಡ್ ಹಾಗೂ ಮುಂತಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸಂಸ್ಥೆಯಡಿಯಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕ ಯುವತಿಯಾಗಿಗೆ ಆಹಾರ ವಾಹಿನಿ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಆರ್ಥಿಕ ನೆರವನ್ನು ನೀಡುತ್ತಿದ್ದು, ನೀವೇನಾದರೂ ವಿಶ್ವಕರ್ಮ ಸಮುದಾಯದ ಉಪಜಾತಿಗಳಾದ ಕಮ್ಮಾರ, ಬಡಗಿ, ಪತ್ತಾರ ಹಾಗೂ ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದರೆ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ಸ್ವಂತ ಆಹಾರ ಉದ್ಯಮವನ್ನು ಪ್ರಾರಂಭಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Labour Card: ಕರ್ನಾಟಕ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್! ಹೊಸ ಲೇಬರ್ ಕಾರ್ಡ್ ಅರ್ಜಿ ಆರಂಭ । ಇಂದೇ ಅರ್ಜಿ ಸಲ್ಲಿಸಿ
- Delivery Boy: ರೂ. 4 ಲಕ್ಷದವರೆಗೆ ಅಪಘಾತ ವಿಮೆ! ಡೆಲಿವರಿ ಕಾರ್ಮಿಕರಿಗೆ ಸರ್ಕಾರದಿಂದ ವಿಮಾ ಯೋಜನೆ ಜಾರಿ । ಇಂದೇ ಅಪ್ಲೈ ಮಾಡಿ
- PAN Card: ₹9000 ಸ್ಟೈಫಂಡ್! ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ 2026 । ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Vidyasiri: ಪ್ರತಿ ತಿಂಗಳು ₹1,500/- ಸ್ಕಾಲರ್ಷಿಪ್! ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆರಂಭ । ಆಗಸ್ಟ್ 31 ಕೊನೆಯ ದಿನಾಂಕ
- PMVBRY: ರೂ. 15,000/- ಪ್ರೋತ್ಸಾಹಧನ! ಹೊಸ ಉದ್ಯೋಗಿಗಳಿಗೆ ಪ್ರಧಾನ ಮಂತ್ರಿಯಿಂದ ದೊಡ್ಡ ಗಿಫ್ಟ್ ಘೋಷಣೆ । ಇಂದೇ ಅಪ್ಲೈ ಮಾಡಿ