PAN Card: ₹9000 ಸ್ಟೈಫಂಡ್! ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026 । ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

PAN Card: ದೇಶದ ನಿರುದ್ಯೋಗ ಯುವಕ ಯುವತಿಯರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಅನುಭವವನ್ನು ಒದಗಿಸಲು ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. ಅದುವೇ ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ. ಯುವಕರಿಗೆ ಕೇವಲ ಸಿದ್ದಂತ ಶಿಕ್ಷಣ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.


ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಪ್ರತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಬರೋಬ್ಬರಿ ರೂ. 9000/- ಸ್ಟೈಫಂಡ್ ನೀಡಲಾಗುತ್ತದೆ ಹಾಗೂ ಇದರೊಂದಿಗೆ ಇಂಟರ್ನ್ ಶಿಪ್ ಗೆ ಸೇರಿದ ನಂತರ ವಿದ್ಯಾರ್ಥಿಗಳ ವೈಯಕ್ತಿಕ ಖರ್ಚಿಗಾಗಿ ಒಂದು ಬಾರಿಗೆ ರೂ. 6000/- ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತದೆ.

18 ವರ್ಷದಿಂದ 25 ವರ್ಷದೊಳಗಿನ 10 ನೇ ತರಗತಿ, 12 ನೇ ತರಗತಿ, ಪದವಿ, ಡಿಪ್ಲೊಮಾ, ಐಟಿಐ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸರ್ಕಾರ ಮತ್ತು ಕಂಪನಿಗಳು ಜಂಟಿಯಾಗಿ ಈ ಯೋಜನೆಯಡಿಯಲ್ಲಿ ಸಿಗುವ ಸ್ಟೈಫಂಡ್ ಗಳನ್ನು ನೇರವಾಗಿ ವಿದ್ಯಾರ್ಥಿಗಳು ಬ್ಯಾಂಕ್ ಜಮಾ ಮಾಡುತ್ತದೆ.

ಹಾಗಿದ್ದರೆ ಏನಿದು ಪಿಎಂ ಇಂಟರ್ನ್ಶಿಪ್ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲೆಗಳು ಯಾವುದು? ಯೋಜನೆಯ ಉದ್ದೇಶವೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

PAN Card

ಯೋಜನೆಯ ಅವಲೋಕನ:

ಇಲಾಖೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
ಯೋಜನೆಯ ಹೆಸರು ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ
ಫಲಾನುಭವಿಗಳು 18 ವರ್ಷದಿಂದ 25 ವರ್ಷದೊಳಗಿನ ನಿರುದ್ಯೋಗ ಯುವಕ ಯುವತಿಯರು
ಮಾಸಿಕ ಸ್ಟೈಫಂಡ್ ರೂ. 9000/-
ಇಂಟರ್ನ್ಶಿಪ್ ಅವಧಿ 6 ರಿಂದ 9 ತಿಂಗಳು
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಏನಿದು ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ?

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ ಎನ್ನುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕೌಶಲ್ಯವನ್ನು ಕಲಿಸುವುದು ಹಾಗೂ ಪ್ರಾಯೋಗಿಕ ಅನುಭವವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಯುವಕ ಯುವತಿಯರಿಗೆ ದೇಶದ ವಿವಿಧ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಧಿ ಮುಗಿಯುವ ವರೆಗೂ ಕೂಡ ಮಾಸಿಕ ರೂ. 9000/- ಸ್ಟೈಫಂಡ್ ಗಳನ್ನು ನೀಡಲಾಗುತ್ತದೆ.

ಯೋಜನೆಯ ಉದ್ದೇಶ:

  • ಯುವಕರಿಗೆ ಪ್ರಾಯೋಗಿಕ ಅನುಭವವನ್ನು ನೀಡುವುದು:

ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೆ ಕಂಪನಿಗಳಲ್ಲಿ ನೇರವಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಉದ್ಯೋಗಾವಕಾಶ ಹೆಚ್ಚಿಸುವುದು:

ಯುವಕ ಯುವತಿಯರಿಗೆ ಅಗತ್ಯದ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿ. ಕಾರ್ಪೊರೇಟ್ ಜಗತ್ತಿನಲ್ಲಿ ಇಂದಿನ ಅಗತ್ಯಕ್ಕೆ ತಕ್ಕಂತೆ ಅವರುಗಳನ್ನು ಸಿದ್ದಪಡಿಸುವುದು ಹಾಗೂ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

  • ಆರ್ಥಿಕ ಭದ್ರತೆ ನೀಡುವುದು:

ಪಿಎಂ ಇಂಟೆನ್ಶಿಪ್ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವಾಗ ಅವರಿಗೆ ಆರ್ಥಿಕ ಹೊರೆ ಆಗದಂತೆ ತಿಂಗಳಿಗೆ ರೂ. 9000/- ಸ್ಟೈಫಂಡ್ ನೀಡಿ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಕೌಶಲ್ಯದ ಕೊರೆತೆಯನ್ನು ನೀಗಿಸುವುದು:

ಶಿಕ್ಷಣ ಮತ್ತು ಉದ್ಯೋಗದ ನಡುವೆ ಇರುವ ಕೌಶಲ್ಯದ ಕೊರತೆಯನ್ನು ಕಡಿಮೆ ಮಾಡಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಇಂಟರ್ನ್ಶಿಪ್ ಸ್ಟೈಫಂಡ್ ವಿವರ:

ಯುವಕ ಯುವತಿಯರು ಪಿಎಂ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ. 9000/- ದಂತೆ ತರಬೇತಿ ಮುಗಿಯುವ ವರೆಗೂ ಕೂಡ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

ರೂ. 9000/- ಸ್ಟೈಫಂಡ್ ಗಳಲ್ಲಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ರೂ. 8,000/- ವರ್ಗಾವಣೆ ಮಾಡಿದರೆ ಕಂಪನಿಯು ತನ್ನ ಸಿಎಸ್ಆರ್ ನಿಧಿಯ ಮೂಲಕ ರೂ. 1,000/- ಸ್ಟೈಫಂಡ್ ನೀಡಲಾಗುತ್ತದೆ.

ಹೆಚ್ಚುವರಿ ಆರ್ಥಿಕ ಸೌಲಭ್ಯ:

  • ಯುವಕ ಅಥವಾ ಯುವತಿಯರು ಇಂಟರ್ನ್ಶಿಪ್ ಗೆ ಜಾಯಿನ್ ಆದ ತಕ್ಷಣ ಅವರ ಪ್ರಯಾಣದ ಖರ್ಚು, ಬಟ್ಟೆ ಖರ್ಚು ಸೇರಿದಂತೆ ಇನ್ನಿತರ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ಸರ್ಕಾರವು ಒಂದು ಬಾರಿಗೆ ರೂ. 6000/- ಆರ್ಥಿಕ ನೆರವನ್ನು ಒದಗಿಸುತ್ತದೆ.
  • ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ಹಾಗೂ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ ಉಚಿತ ವಿಮೆ ನೀಡಲಾಗುತ್ತದೆ.

ಇಂಟರ್ನ್ಶಿಪ್ ನೀಡುವ ವಲಯಗಳು:

ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ದೇಶದ ಪ್ರಮುಖ 25 ಕ್ಕೂ ಹೆಚ್ಚು ಕೈಗಾರಿಕಾ ವಲಯಗಳಲ್ಲಿ ಇಂಟರ್ನ್ಶಿಪ್ ನೀಡಲಾಗುತ್ತದೆ.

  • ಇಂಜಿನಿಯರಿಂಗ್ ಮತ್ತು ಉತ್ಪಾದನೆ
  • ತಂತ್ರಜ್ಞಾನ ಮತ್ತು ಸೇವಾ ವಲಯ
  • ಬ್ಯಾಂಕಿಂಗ್ ಮತ್ತು ಹಣಕಾಸು
  • ಚಿಲ್ಲರೆ ವ್ಯಾಪಾರ ಮತ್ತು ಮಾರಾಟ
  • ಕೃಷಿ
  • ಆರೋಗ್ಯ ರಕ್ಷಣೆ
  • ಆಟೋಮೊಬೈಲ್ ಉದ್ಯಮ
  • ಮಾಧ್ಯಮ ಮತ್ತು ಸಂವಹನ
  • ಆತಿಥ್ಯ
  • ಸಲಹಾ ಮತ್ತು ಸೇವೆಗಳು
  • ಹಾಗೂ ಇತರೆ ಪ್ರಮುಖ ವಲಯಗಳು

ಅರ್ಹತಾ ಮಾನದಂಡಗಳು:

  • ಅಭ್ಯರ್ಥಿ ಭಾರತದ ನಾಗರಿಕರಾಗಿರಬೇಕು.
  • ಅಭ್ಯರ್ಥಿಯ ವಯಸ್ಸು ಸಾಮಾನ್ಯವಾಗಿ 18 ರಿಂದ 25 ವರ್ಷದೊಳಗೆ ಇರಬೇಕು.
  • 10ನೇ, 12ನೇ, ITI, ಡಿಪ್ಲೊಮಾ ಅಥವಾ ಪದವಿ (Degree) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
  • ಇತ್ತೀಚೆಗೆ ಶಿಕ್ಷಣ ಪೂರ್ಣಗೊಳಿಸಿದವರು ಅಥವಾ ಉದ್ಯೋಗದ ಅನುಭವವಿಲ್ಲದ ಯುವಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಕುಟುಂಬದ ವಾರ್ಷಿಕ ಆದಾಯವು ರೂ. 12 ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಅರ್ಹರಲ್ಲದ ವಿದ್ಯಾರ್ಥಿಗಳು:

  • ಈಗಾಗಲೇ ಪೂರ್ಣಕಾಲಿಕ ಉದ್ಯೋಗದಲ್ಲಿರುವವರು.
  • ನಿಯಮಿತ ಸಂಬಳದ ಸರ್ಕಾರಿ ಉದ್ಯೋಗಿಗಳು
  • PhD ಅಥವಾ ಉನ್ನತ ಸಂಶೋಧನಾ ಹಂತದಲ್ಲಿರುವವರು
  • 25 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು
  • ಸರ್ಕಾರಿ ನೌಕರರ ಮಕ್ಕಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಲ್ಲ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಶೈಕ್ಷಣಿಕ ಪ್ರಮಾಣಪತ್ರಗಳು
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಮೊಬೈಲ್ ಸಂಖ್ಯೆ
  • PAN ಕಾರ್ಡ್
  • ವಿಳಾಸ ಪುರಾವೆ
  • ಈ-ಮೇಲ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಸರ್ಕಾರ ನೀಡಿರುವ ಅಧಿಕೃತ ಇಂಟರ್ನ್ಶಿಪ್ ಪೋರ್ಟಲ್‌ಗೆ ಹೋಗಿ.
  • ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನಮೂದಿಸಿ OTP ಮೂಲಕ ಖಾತೆ ಸೃಷ್ಟಿಸಿ.
  • ವೈಯಕ್ತಿಕ ವಿವರಗಳು, ಶಿಕ್ಷಣ ಮಾಹಿತಿ ಮತ್ತು ವಿಳಾಸವನ್ನು ಭರ್ತಿ ಮಾಡಿ.
  • ಆಧಾರ್, ಶೈಕ್ಷಣಿಕ ಪ್ರಮಾಣಪತ್ರಗಳು, ಫೋಟೋ ಮತ್ತು ಬ್ಯಾಂಕ್ ವಿವರಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ಅರ್ಹತೆಗೆ ತಕ್ಕ ಕಂಪನಿಗಳು ಮತ್ತು ವಲಯಗಳನ್ನು ಆಯ್ಕೆ ಮಾಡಿ.
  • ಆಯ್ಕೆ ಮಾಡಿದ ಇಂಟರ್ನ್‌ಶಿಪ್‌ಗೆ ಅಪ್ಲೈ ಮಾಡಿ.
  • ಕಂಪನಿ ಅಥವಾ ಸರ್ಕಾರದ ವತಿಯಿಂದ ಶಾರ್ಟ್‌ಲಿಸ್ಟ್ ಮತ್ತು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
  • ಆಯ್ಕೆಯಾದ ನಂತರ ಇಮೇಲ್/SMS ಮೂಲಕ ಮಾಹಿತಿ ನೀಡಲಾಗುತ್ತದೆ.

ಅಂತಿಮ ತೀರ್ಮಾನ:

ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ ಯುವಕರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಉತ್ತಮ ಅವಕಾಶ ನೀಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ಕೇವಲ ಸೈದ್ಧಾಂತಿಕ ಶಿಕ್ಷಣಕ್ಕೆ ಸೀಮಿತವಾಗದೆ, ನೈಜ ಕಂಪನಿ ಪರಿಸರದಲ್ಲಿ ಕೆಲಸ ಮಾಡುವ ಅನುಭವವನ್ನು ಪಡೆಯುತ್ತಾರೆ. ಅರ್ಹ ಅಭ್ಯರ್ಥಿಗಳು ಇಂದೇ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment