ಕರ್ನಾಟಕ ಸರ್ಕಾರವು ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗಾಗಿ ಹಾಗೂ ಶೈಕ್ಷಣಿಕ ಸಬಲೀಕರಣಕ್ಕಾಗಿ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ರೂ. 1,00,000 ರೂ. 1,27,000/- ವೆರೆಗೆ ಮೆಚುರಿಟಿ ಮೊತ್ತವನ್ನು ನೀಡಲಾಗುತ್ತದೆ.
Bhagyalakshmi Yojana 2026
ಈ ಯೋಜನೆಯಡಿಯಲ್ಲಿ ಅರ್ಹ ಹೆಣ್ಣು ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು 50% ಹಣವನ್ನು ಮುಂಚಿತವಾಗಿ ಹಿಂಪಡೆಯಲು ಅವಕಾಶವನ್ನು ನೀಡಲಾಗಿದ್ದು, ಇದರ ಜೊತೆಗೆ 1 ನೇ ತರಗತಿಯಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷಕ್ಕೆ ರೂ. 300/- ರಿಂದ 1000/- ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಪ್ರಸ್ತುತ ಲೇಖನದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಯೋಜನೆಯ ಪ್ರಯೋಜನಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಭಾಗ್ಯಲಕ್ಷ್ಮಿ ಯೋಜನೆ |
| ಜಾರಿಗೆ ತಂದ ಸರ್ಕಾರ | ಕರ್ನಾಟಕ ಸರ್ಕಾರ |
| ಪ್ರಾರಂಭಿಕ ವರ್ಷ | 2006-07 |
| ಅರ್ಹ ಫಲಾನುಭವಿಗಳು | BPL ಕುಟುಂಬದ ಹೆಣ್ಣು ಮಕ್ಕಳು |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಯೋಜನೆಯ ಕಿರು ಪರಿಚಯ:
ಭಾಗ್ಯಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಹೆಣ್ಣು ಮಕ್ಕಳ ಅರ್ಥಿಕ ಸಬಲೀಕರಣಕ್ಕಾಗಿ 2006-07 ರಲ್ಲಿ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗಾಗಿ ಹಾಗೂ ಶೈಕ್ಷಣಿಕ ನೆರವನ್ನು ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳಿಗೆ ನಿರ್ದಿಷ್ಟ ವಯೋಮಿತಿ ಪೂರ್ಣಗೊಂಡಾಗ ಸಹಾಯಧನವನ್ನು ನೀಡಲಾಗುತ್ತದೆ.
ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಪೋಷಕರು ಮಗು ಜನಿಸಿದ ಒಂದು ವರ್ಷದ ಒಳಗೆ ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ಬಡ ಕುಟುಂಬದ ಹೆಣ್ಣು ಮಗುವಿನ ಜನನದಿಂದ ಹಿಡಿದು, ಉನ್ನತ ಶಿಕ್ಷಣ ಹಾಗೂ ವಿವಾಹದ ವಯಸ್ಸಿನ ವರೆಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶಗಳು:
- ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು:
ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ವಿಶೇಷ ಸಹಾಯಧನವನ್ನು ಒದಗಿಸುವ ಮೂಲಕ ಹೆಣ್ಣಿನ ಜನನ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು.
- ಬಡ ಪೋಷಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಹೆಣ್ಣು ಮಗುವಿನ ಜನನದಿಂದ ಹಿಡಿದು ಮಗುವಿನ ವಿದ್ಯಾಭ್ಯಾಸಕ್ಕೂ, ವಿವಾಹಕ್ಕೂ ಸಹಾಯಧನವನ್ನು ಒದಗಿಸುವ ಮೂಲಕ ಹೆಣ್ಣು ಮಗುವಿನ ವಿದ್ಯಾಭ್ಯಾಸ, ಮದುವೆ ಖರ್ಚನ ಹೊರೆಯನ್ನು ದೂರ ಮಾಡುವುದು. ಇದರಿಂದ ಬಡ ಪೋಷಕರ ಮೇಲಿನ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ.
- ಕಡ್ಡಾಯ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು:
ಭಾಗ್ಯ ಲಕ್ಷ್ಮಿ ಯೋಜನೆಯಡಿಯಲ್ಲಿ ಫಲಾನುಭವಿ ಹೆಣ್ಣು ಮಗಳು ಕಡ್ಡಾಯವಾಗಿ ಕನಿಷ್ಠ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಎನ್ನುವ ನಿಯಮಗಳು ಇರುವುದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟುವುದು.
- ಬಾಲ್ಯ ವಿವಾಹವನ್ನು ತಡೆಗಟ್ಟುವುದು:
ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ಹೆಣ್ಣು ಮಕ್ಕಳಿಗೆ 18 ವರ್ಷಗಳು ತುಂಬುವ ವರೆಗೂ ವಿವಾಹ ಮಾಡಬಾರದು ಎನ್ನುವ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ, ಒಂದು ವೇಳೆ ನಿಗದಿತ ವರ್ಷ ಪೂರ್ಣಗೊಳ್ಳುವ ಮುಂಚೆಯೇ ವಿವಾಹ ಮಾಡಿದರೆ ಯಾವುದೇ ಹಣ ಸಿಗುವುದಿಲ್ಲ ಎನ್ನುವ ನಿಯಮಗಳಿವೆ. ಈ ಕಠಿಣ ನಿಯಮಗಳಿಂದಾಗಿ ಬಾಲ್ಯವ ವಿವಾಹವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ
ಯೋಜನೆಯಡಿಯಲ್ಲಿ ಹೆಣ್ಣು ಮಗುವಿಗೆ ಸಿಗುವ ಪ್ರಮುಖ ಸೌಲಭ್ಯಗಳು:
- ಯೋಜನೆಯಡಿಯಲ್ಲಿ ಸಿಗುವ ಮೆಚ್ಯುರಿಟಿ ಮೊತ್ತ:
ಈ ಯೋಜನೆಯಡಿಯಲ್ಲಿ ನಿಗದಿತ ಅವಧಿಗೆ ನೋಂದಾಯಿಸಿಕೊಂಡ ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಮೊದಲ ಹೆಣ್ಣು ಮಗುವಿಗೆ ರೂ. 1.00,097 ಹಾಗೂ ಎರಡನೇ ಹೆಣ್ಣು ಮಗುವಿಗೆ ರೂ. 1,00,052 ಪ್ರಸ್ತುತ ಅಂಚೆ ಇಲಾಖೆಯ ಬಡ್ಡಿ ದರದಲ್ಲಿ ರೂ. 1,27,000/- ವೆರೆಗೆ ಮೆಚ್ಯುರಿಟಿ ಮೊತ್ತ ಸಿಗುತ್ತದೆ.
- ವಿದ್ಯಾಭ್ಯಾಸಕ್ಕೆ 50% ಮೆಚ್ಯುರಿಟಿ ಹಣವನ್ನು ಮುಂಗಡವಾಗಿ ಪಡೆದುಕೊಳ್ಳಬಹುದು:
ಹೆಣ್ಣು ಮಗುವು 10 ನೇ ತರಗತಿ ಪೂರ್ಣಗೊಂಡ ನಂತರ ಉನ್ನತ ಶಿಕ್ಷಣವನ್ನು ಮುಂದುವರೆಸಿ ಉದ್ದೇಶದಿಂದಾಗಿ ಮೆಚ್ಯುರಿಟಿ ಹಣದ 50% ಹಣವನ್ನು ಖಾತೆಯಿಂದ ಪಡೆದುಕೊಳ್ಳಬಹುದಾಗಿದೆ.
- ವಾರ್ಷಿಕ ಶಿಕ್ಷಣ ಸಹಾಯಧನ:
ಭಾಗ್ಯಲಕ್ಷ್ಮಿ ಯೋಜನೆಯಡಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಶಿಕ್ಷಣ ಪಡೆಯುತ್ತಿರುವ ಅರ್ಹ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ರೂ. 300 ರಿಂದ ರೂ. 1,000ರವರೆಗೆ ಶೈಕ್ಷಣಿಕ ನೆರವು ನೀಡಲಾಗುತ್ತದೆ. ಈ ಮೊತ್ತವು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ನೀಡಲಾಗುತ್ತದೆ.
- ಆರೋಗ್ಯ ವಿಮೆ ನೆರವು:
ಈ ಯೋಜನೆಯಡಿ ನೋಂದಾಯಿಸಲ್ಪಟ್ಟ ಹೆಣ್ಣು ಮಕ್ಕಳಿಗೆ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಆರ್ಥಿಕ ಸಹಾಯ ಒದಗಿಸುವ ಸಲುವಾಗಿ ವಾರ್ಷಿಕ ಗರಿಷ್ಠ ರೂ. 25,000ವರೆಗೆ ಆರೋಗ್ಯ ವಿಮಾ ಸೌಲಭ್ಯ ಲಭ್ಯವಿರುತ್ತದೆ. ಈ ಸೌಲಭ್ಯವು ಸರ್ಕಾರದ ನಿಯಮಗಳು ಮತ್ತು ನಿಗದಿತ ಷರತ್ತುಗಳ ಪ್ರಕಾರ ಅನ್ವಯವಾಗುತ್ತದೆ.
ಅರ್ಹತಾ ಮಾನದಂಡಗಳು:
- ಫಲಾನುಭವಿ ಹೆಣ್ಣು ಮಗು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
- ಅರ್ಜಿದಾರರ ಕುಟುಂಬವು ಬಡತನ ರೇಖೆಗಿಂತ ಕೆಳಗಿನ ವರ್ಗಕ್ಕೆ ಸೇರಿರಬೇಕು.
- ಮಗುವಿನ ಜನನವಾದ ದಿನಾಂಕದಿಂದ ಒಂದು ವರ್ಷದೊಳಗೆ ಯೋಜನೆಗೆ ನೋಂದಣಿ ಮಾಡಿಸಬೇಕು.
- ಒಂದು ಕುಟುಂಬದ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಯೋಜನೆಯ ಸೌಲಭ್ಯ ದೊರೆಯುತ್ತದೆ.
- ಫಲಾನುಭವಿ 18 ವರ್ಷ ಪೂರೈಸುವ ಮೊದಲು ಮದುವೆಯಾಗಿರಬಾರದು.
- ಮಗು ಶಾಲೆಯಲ್ಲಿ ನಿಯಮಿತವಾಗಿ ಶಿಕ್ಷಣ ಪಡೆಯುತ್ತಿರಬೇಕು ಹಾಗೂ ಯಾವುದೇ ರೀತಿಯ ಬಾಲಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿರಬಾರದು.
ಅಗತ್ಯ ದಾಖಲೆಗಳು:
- ಮಗುವಿನ ಜನನ ಪ್ರಮಾಣಪತ್ರ
- ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್
- BPL ರೇಷನ್ ಕಾರ್ಡ್
- ಆದಾಯ ಪ್ರಮಾಣಪತ್ರ
- ನಿವಾಸ ದೃಢೀಕರಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
- ಶಾಲಾ ದಾಖಲಾತಿ ಅಥವಾ ಪ್ರವೇಶ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
- ಪೋಷಕರು ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ತಮ್ಮ ಹೆಣ್ಣು ಮಕ್ಕಳ ಹೆಸರನ್ನು ನೋಂದಾಯಿಸಲು ಸಮೀಪದ ಅಂಗನವಾಡಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಕಚೇರಿಗೆ ಭೇಟಿ ನೀಡಿ.
- ಭಾಗ್ಯಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
- ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
- ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿತ ಅಧಿಕಾರಿಗೆ ಸಲ್ಲಿಸಿ.
- ಅಧಿಕಾರಿಗಳು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
- ಅರ್ಹತೆ ದೃಢಪಟ್ಟ ನಂತರ ಫಲಾನುಭವಿಯನ್ನು ಯೋಜನೆಯಡಿ ನೋಂದಣಿ ಮಾಡಲಾಗುತ್ತದೆ.
ಅಂತಿಮ ತೀರ್ಮಾನ:
ಭಾಗ್ಯಲಕ್ಷ್ಮಿ ಯೋಜನೆಯು ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಸಹಾಯದಿಂದ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹ, ಆರ್ಥಿಕ ನೆರವು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯ ದೊರೆಯುತ್ತದೆ.
ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು, ಅವರ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳು ಯೋಜನೆಯ ನಿಯಮಗಳನ್ನು ತಿಳಿದುಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- PMVY: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಪಿಎಂ ವಿಶ್ವಕರ್ಮ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತು ತರಬೇತಿ! ಇಂದೇ ಅಪ್ಲೈ ಮಾಡಿ
- 50K ಪ್ರತಿಯೊಬ್ಬ ರೈತರಿಗೆ 50,000 ಸಹಾಯಧನ | ಆನ್ಲೈನ್ ಅರ್ಜಿ ಸಂಪೂರ್ಣ ಮಾಹಿತಿ ಇಲ್ಲಿದೆ! | farmers subsidy 2026 50000
- Hostel: 2026-27ನೇ ಸಾಲಿನಲ್ಲಿ ಹಾಸ್ಟೇಲ್ ಪ್ರವೇಶ ಆರಂಭ! ಉಚಿತ ಹಾಸ್ಟೇಲ್ + ಊಟ + ₹20,000 ಪ್ರೋತ್ಸಾಹಧನ! ಈಗಲೇ ಆನ್ಲೈನ್ ಅರ್ಜಿ ಸಲ್ಲಿಸಿ
- Labour: ₹20,000 ಶೈಕ್ಷಣಿಕ ಪ್ರೋತ್ಸಾಹಧನ! ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ಡಿಸೆಂಬರ್ 31 ಕೊನೆಯ ದಿನಾಂಕ
- Home: ಜುಲೈ ತಿಂಗಳಿಂದ PM ಆವಾಸ್ ಯೋಜನೆಗೆ ಅರ್ಜಿ ಆರಂಭ! ಸ್ವಂತ ಮನೆಯ ಕನಸು ನನಸಿಗೆ ಸರ್ಕಾರದಿಂದ 2.7 ಲಕ್ಷ ಸಹಾಯಧನ