Married : ₹3 ಲಕ್ಷ ಸಹಾಯಧನ! ವಧು – ವರರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಇತ್ತೀಚಿಗಷ್ಟೇ ಮದುವೆಯಾಗುತ್ತಿದ್ದೀರಾ? ಕಡಿಮೆ ಖರ್ಚಿನಲ್ಲಿ ಅದ್ದೂರಿಯಾಗಿ ಮದುವೆಯಾಗುವ ಕನಸ್ಸು ಕಾಣುತ್ತಿದ್ದೀರಾ? ನಿಮ್ಮ ಈ ಕನಸ್ಸನ್ನು ನನಸು ಮಾಡಲು ಸರ್ಕಾರವು ಮುಂದೆಬಂದಿದೆ.

Marriage Scheme in Kannada

ಮದುವೆ ಎನ್ನುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ. ಅದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೈಲಿಗಲ್ಲಾಗಿದೆ. ಆದರೆ ಇಂದಿನ ಕಾಲಮಾನಗಳಲ್ಲಿ ಮದುವೆ ವೆಚ್ಚಗಳು ದುಬಾರಿಯಾಗಿದ್ದು, ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ತಮ್ಮ ಮಕ್ಕಳ ಮದುವೆ ಮಾಡುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಇವುಗಳನ್ನೆಲ್ಲಾ ಗಮನಿಸಿದ ಸರ್ಕಾರವು ಸಾಮಾಜಿಕ ಸಮಾನತೆಯನ್ನು ತರಲು ಬಡ ಮತ್ತು ಮಧ್ಯಮ ವರ್ಗಗಳ ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆಗಳನ್ನು ಒದಗಿಸಲು ವಿವಿಧ ವಿವಾಹ ಪ್ರೋತ್ಸಾಹಧನವನ್ನು ಯೋಜನೆಯನ್ನು ಜಾರಿಗೊಳಿಸಿದ್ದು, ಅಂತರ್ಜಾತಿ ವಿವಾಹವಾಗುವ ಅಭ್ಯರ್ಥಿಗಳಿಗೆ ಹಾಗೂ ಕಾರ್ಮಿಕರ ಮಕ್ಕಳ ವಿವಾಹಕ್ಕೆ ವಿಭಿನ್ನವಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಯಾರಿಗೆ ಎಷ್ಟು ಪ್ರೋತ್ಸಾಹಧನ ಸಿಗುತ್ತದೆ? ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

Marriage

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಅಂತರ್ಜಾತಿ ವಿವಾಹ ಆಗುವ ಅಭ್ಯರ್ಥಿಗಳಿಗೆ ರೂ. 3,00,000 ಪ್ರೋತ್ಸಾಹಧನ.
* ಕಾರ್ಮಿಕರ ಮಕ್ಕಳ ವಿವಾಹಕ್ಕೆ ರೂ. 60,000 ಪ್ರೋತ್ಸಾಹಧನ.
* ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೆ ಸಹಾಯಧನವನ್ನು ಪಡೆಯಲು ಅವಕಾಶ
* ಅಂತರ್ಜಾತಿ ವಿವಾಹವಾದವರು ಮದುವೆಯಾಗಿ ಒಂದು ವರ್ಷಗಳ ಒಳಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ.

ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ ಎಂದರೇನು?

ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಹಾಗೂ ಜಾತಿ ಪದ್ದತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯನ್ನು ಜಾರಿಗೊಳಿಸಿದ್ದು, ವಧು ಅಥವಾ ವರರಲ್ಲಿ ಯಾರಾದರೊಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರಬೇಕು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹುಡುಗಿಯು ಬೇರೆ ಜಾತಿಯ ಹುಡುಗನನ್ನು ವಿವಾಹವಾದರೆ ಈ ಒಂದು ಯೋಜನೆಯಡಿಯಲ್ಲಿ ರೂ. 3,00,000 ಪ್ರೋತ್ಸಾಹಧನವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಪರಿಶಿಷ್ಟ ಜಾತಿ ಅಥವಾ ಪಂಗಡಗಳ ಹುಡುಗನು ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದರೆ ರೂ. 2,50,000 ಪ್ರೋತ್ಸಾಹಧನವನ್ನು ಪಡೆದುಕೊಳ್ಳಬಹುದಾಗಿದೆ.

ಏನಿದು ವಿವಾಹ ಸಹಾಯಧನ ಯೋಜನೆ?

ದಿನವಿಡಿ ಜೀವದ ಹಂಗನ್ನು ತೊರೆದು ಕಷ್ಟಪಟ್ಟು ದುಡಿಯುವ ಅಸಂಘಟಿತ ವಲಯದಲ್ಲಿನ ನಿರ್ಮಾಣ ಕಾರ್ಮಿಕರು ತಮ್ಮ ಮಕ್ಕಳ ಮದುವೆಗೆ ಸಹಾಯಧನವನ್ನು ಪಡೆದುಕೊಳ್ಳುವ ಯೋಜನೆಯಾಗಿದೆ. ಈ ಒಂದು ವಿವಾಹ ಪ್ರೋತ್ಸಹ ಧನ ಯೋಜನೆಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಜಾರಿಗೆ ತರಲಾಗಿದೆ.

ಬಡ ಮತ್ತು ಮಧ್ಯಮ ವರ್ಗಗಳ ಕಾರ್ಮಿಕ ಕುಟುಂಬಗಳು ತಮ್ಮ ಮಕ್ಕಳ ವಿವಾಹವನ್ನು ಮಾಡಬೇಕಾದರೆ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ. ಇದನ್ನು ಗಮನಿಸಿದ ಸರ್ಕಾರವು ನೋಂದಾಯಿತ ಕಾರ್ಮಿಕರ ಮೊದಲ 2 ಮಕ್ಕಳ ಮದುವೆಗೆ ತಲಾ ರೂ. 60,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ದಂಪತಿಗಳಲ್ಲಿ ಕನಿಷ್ಠ ಒಬ್ಬರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ವರ ಅಥವಾ ವಧು ಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.
  • ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಹುಡುಗ ಅಥವಾ ಹುಡುಗಿ ಬೇರೆ ವರ್ಗಕ್ಕೆ ಸೇರಿದವರನ್ನು ವಿವಾಹವಾಗಿರಬೇಕು.
  • ವಿವಾಹಿತ ಜೋಡಿಯ ಕುಟುಂಬದ ವಾರ್ಷಿಕ ಆದಾಯವು ರೂ. 5 ಲಕ್ಷ ಮೀರಿರಬಾರದು.
  • ವಿವಾಹಿತ ದಂಪತಿಗಳು ತಮ್ಮ ವಿವಾಹದ 18 ತಿಂಗಳ ಒಳಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿರಬೇಕು.
  • ದಂಪತಿಗಳು ವಿವಾಹ ಪ್ರಮಾಣಪತ್ರ ಹೊಂದಿರಬೇಕು.
  • ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ವಧುವಿಗೆ ಕನಿಷ್ಠ 18 ವರ್ಷ ಹಾಗೂ ವರನಿಗೆ ಕನಿಷ್ಠ 21 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಿವಾಹ ಸಹಾಯಧನ ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿ ಸಲ್ಲಿಸುವ ತಂದೆ ಅಥವಾ ತಾಯಿ ಕಾರ್ಮಿಕರಾಗಿರಬೇಕು.
  • ಕಾರ್ಮಿಕ ತಂದೆ ಅಥವಾ ತಾಯಿ ಕಡ್ಡಾಯವಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ನೋಂದಾಯಿತರಾಗಿರಬೇಕು.
  • ಅರ್ಜಿದಾರರು ಕಾರ್ಮಿಕರ ಕಾರ್ಡ್ ಅನ್ನು ಪಡೆದು ಕನಿಷ್ಠ 1 ವರ್ಷ ಆಗಿರಬೇಕು.
  • ಅರ್ಜಿದಾರರು ಹೊಂದಿರುವ ಕಾರ್ಮಿಕ ಕಾರ್ಡ್ ಪ್ರಸ್ತುತ ಚಾಲ್ತಿಯಲ್ಲಿರಬೇಕು.
  • ಮದುವೆಯಾಗುವ ವಧುವಿಗೆ ಕನಿಷ್ಠ 18 ವರ್ಷ ಹಾಗೂ ವರನಿಗೆ ಕನಿಷ್ಠ 21 ವರ್ಷ ತುಂಬಿರಬೇಕು.
  • ಕಾರ್ಮಿಕರು ಈ ಯೋಜನೆಯಡಿಯಲ್ಲಿ ತಮ್ಮ ಇಬ್ಬರು ಮಕ್ಕಳ ಮದುವೆಗೆ ಮಾತ್ರ ಸಹಾಯಧನವನ್ನು ಪಡೆದುಕೊಳ್ಳಲು ಅವಕಾಶ.
  • ತಮ್ಮ ಮಕ್ಕಳ ವಿವಾಹವಾದ 6 ತಿಂಗಳ ಒಳಗೆ ವಿವಾಹ ಪ್ರೋತ್ಸಾಹಧನ ಯೋಜನೆಗೆ ಅರ್ಜಿ ಸಲ್ಲಿಸಿರಬೇಕು.
  • ಕುಟುಂಬದಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಕಾರ್ಮಿಕ ಕಾರ್ಡ್ ಹೊಂದಿದ್ದರೂ ಕೂಡ ಒಬ್ಬರು ಮಾತ್ರ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಅಗತ್ಯವಾದ ದಾಖಲೆಗಳು:

  • ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಗೆ ಸಂಬಂಧಿಸಿದ ದಾಖಲೆಗಳು:
    • ವಧು ಮತ್ತು ವರನ ಜಾತಿ ಪ್ರಮಾಣಪತ್ರ
    • ಆದಾಯ ಪ್ರಮಾಣಪತ್ರ
  • ವಿವಾಹ ಸಹಾಯಧನ ಯೋಜನೆಗೆ ಸಂಬಂಧಿಸಿದ ದಾಖಲೆಗಳು:
    • ನೋಂದಣಿ ಕಾರ್ಮಿಕರ ಗುರುತಿನ ಚೀಟಿ
    • ಕಾರ್ಮಿಕರ ಮಕ್ಕಳ ಮದುವೆ ಆಮಂತ್ರಣ ಪತ್ರಿಕೆ
    • ರೇಷನ್ ಕಾರ್ಡ್
  • ಎರಡು ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಸಾಮಾನ್ಯ ದಾಖಲೆಗಳು:
    • ವಧು ಮತ್ತು ವರನ ಆಧಾರ್ ಕಾರ್ಡ್
    • ವಿವಾಹ ನೋಂದಣಿ ಪ್ರಮಾಣಪತ್ರ
    • ಮದುವೆ ಭಾವಚಿತ್ರ
    • ಬ್ಯಾಂಕ್ ಖಾತೆ ವಿವರ
    • ವಧು ಮತ್ತು ವರನ ವಯಸ್ಸಿನ ಪುರಾವೆ
    • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ https://swd.karnataka.gov.in/ ಗೆ ಭೇಟಿ.
  • ವಿವಾಹ ಪ್ರೋತ್ಸಹಧನ ಆಯ್ಕೆಯನ್ನು ಕ್ಲಿಕ್ ಮಾಡಿ ಅಲ್ಲಿ ಇರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ಮುಖಪುಟದಲ್ಲಿರುವ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ, ಹೆಸರು ಹಾಗೂ ಲಿಂಗವನ್ನು ಭರ್ತಿ ಮಾಡಿ ಕ್ಯಾಪ್ಚ ಕೋಡ್ ಎಂಟರ್ ಮಾಡಿ ಲಾಗಿನ್ ಆಗಿ
  • ನಂತರ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆಯನ್ನು ಭರ್ತಿಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿಮಾಡಿರುವ ಕುರಿತು ಖಚಿತಪಡಿಸಿಕೊಂಡು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ವಿವಾಹ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದರೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ಲಾಗಿನ್ ಆದ ನಂತರ ಕಾರ್ಮಿಕ ಇಲಾಖೆ ವಿಭಾಗವನ್ನು ಆಯ್ಕೆ ಮಾಡಿ, ವಿವಾಹ ಸಹಾಯಧನ ಅರ್ಜಿಯ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕೇಳಲಾದ ವೈಯಕ್ತಿಕ ವಿವರ ಹಾಗೂ ಕಾರ್ಮಿಕರ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮೇಲೆ ನೀಡಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ನವ ವಿವಾಹಿತರಿಗೆ ಆರ್ಥಿಕ ನೆರವನ್ನು ನೀಡಲು ಬಹಳಷ್ಟು ವಿವಾಹ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದ್ದು, ಅವುಗಳಲ್ಲಿ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ, ವಿವಾಹ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದ್ದು, ಸಾಮಾಜಿಕ ಸಮಾನತೆಯನ್ನು ತರಲು ಹಾಗೂ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಲು ಈ ಯೋಜನೆಗಳನ್ನು ಜಾರಿಗೊಳಿಸಿದ್ದು, ನೀವೇನಾದರೂ ಅಂತರ್ಜಾತಿ ಯುವತಿ ಅಥವಾ ಯುವಕನನ್ನು ವಿವಾಹವಾಗಿದ್ದೀರಾ? ಅಥವಾ ಕಾರ್ಮಿಕರು ನಿಮ್ಮ ಮಕ್ಕಳ ಮದುವೆಗೆ ಆರ್ಥಿಕ ನೆರವು ಅಗತ್ಯವಿದೆಯೇ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಿ.


Leave a Comment