Pregnant Kit: ಗರ್ಭಿಣಿಯರಿಗೆ ₹10,000 ಸಹಾಯಧನ + ಮಡಿಲು ಕಿಟ್ ಉಚಿತ! ಇಂದೇ ಅಪ್ಲೈ ಮಾಡಿ

ಗರ್ಭಿಣಿ ಮಹಿಳೆಯರಿಗೆ ಬಂಪರ್ ಚಾನ್ಸ್! ಕರ್ನಾಟಕ ಸರ್ಕಾರವು ಗರ್ಭಿಣಿ ಹಾಗೂ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಗರ್ಭಿಣಿ ಮಹಿಳೆಯರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

Araike Scheme for Pregnant Women

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯರ ಜೀವನದ ಸುಂದರ ಘಟ್ಟ. ಆದರೆ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಎಷ್ಟೋ ಮಹಿಳೆಯರಿಗೆ ಸರಿಯಾದ ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ಸೇವೆಗಳ ಅಭಾವ ಹಾಗೂ ಆರ್ಥಿಕ ಸಂಕಷ್ಟಗಳ ಕಾರಣದಿಂದಾಗಿ ಈ ಅವಧಿಯನ್ನು ಆರೋಗ್ಯಕರವಾಗಿ ಹಾಗೂ ಸುರಕ್ಷತೆಯಿಂದ ಸಾಗಿಸುವುದು ಕಷ್ಟಕರವಾಗುತ್ತದೆ.

ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಸರ್ಕಾರವು ಪ್ರಸೂತಿ ಆರೈಕೆ ಯೋಜನೆ ಎನ್ನುವ ಯೋಜನೆಯನ್ನು ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೊಳಿಸಿತು. ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುವುದರ ಜೊತೆಗೆ, ಅವರ ಸುರಕ್ಷಿತ ಪ್ರಸವ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಹಾಗೂ ಆರೋಗ್ಯ ತಪಾಸಣೆಗೆ ಉತ್ತೇಜನ ನೀಡಲಾಗುತ್ತದೆ.

Araike

ಪ್ರಸ್ತುತ ಈ ಒಂದು ಲೇಖನದ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು? ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಅಗತ್ಯ ದಾಖಲೆಗಳು ಕಡ್ಡಾಯ? ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಯೋಜನೆಯ ವಿಮರ್ಶೆ:

ಅನುಷ್ಠಾನ ಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ಪ್ರಸೂತಿ ಆರೈಕೆ ಯೋಜನೆ
ಅರ್ಹ ಫಲಾನುಭವಿಗಳು ಗರ್ಭಿಣಿ ಮಹಿಳೆಯರು
ಯೋಜನೆಯ ಲಾಭ ಆರ್ಥಿಕ ನೆರವಿನ ಜೊತೆಗೆ ಮಡಿಲು ಕಿಟ್
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್

ಯೋಜನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರವು ಪ್ರಸೂತಿ ಆರೈಕೆ ಯೋಜನೆ ಎನ್ನುವ ಮಹತ್ವಾಕಾಂಶೆಯ ಯೋಜನೆಯನ್ನು 2007-08 ರಲ್ಲಿ ಅಧಿಕೃತವಾಗಿ ಜಾರಿಗೊಳಿಸಿದ್ದು, ಈ ಯೋಜನೆಯು ಮೊದಲು ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಬೀದರ್, ಕಲಬುರಗಿ, ಬಾಗಲಕೋಟೆ, ಬಿಜಾಪುರ, ಕೊಪ್ಪಳ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಿತ್ತು. ನಂತರ ಈ ಯೋಜನೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಯಿತು.

ಏನಿದು ಪ್ರಸೂತಿ ಆರೈಕೆ ಯೋಜನೆ?

ಪ್ರಸೂತಿ ಆರೈಕೆ ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ನಾಲ್ಕು ಪ್ರಮುಖ ಘಟಕಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಕಾರ್ಡ್ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವನ್ನು ಒದಗಿಸಿ ತಮ್ಮ ಗರ್ಭಧಾರಣೆಯಲ್ಲಿ ಹಾಗೂ ಹೆರಿಗೆಯ ನಂತರ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಲು ಉತ್ತೇಜನ ನೀಡುವುದಾಗಿದೆ.

ಯೋಜನೆಯನ್ನು ಜಾರಿಗೊಳಿಸಲು ಮುಖ್ಯ ಕಾರಣ:

ಕರ್ನಾಟಕ ರಾಜ್ಯದಲ್ಲಿ ಬಡತನ ಮತ್ತು ಪೌಷ್ಟಿಕಾಂಶ ಕೊರತೆಯಿಂದಾಗಿ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಹೆಚ್ಚುತ್ತಿತ್ತು. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೂ ಮೂಖ್ಯ ಕಾರಣ ಆರ್ಥಿಕ ಸಂಕಷ್ಟ ಎಂದು ಮನಗಂಡ ಸರ್ಕಾರವು ಬಾಣಂತನ ಸಮಯದಲ್ಲಿ ಅಗತ್ಯ ಆರೋಗ್ಯ ಸೇವೆ, ಪೌಷ್ಠಿಕಾಂಶಯುಕ್ತ ಆಹಾರವನ್ನು ಖರೀದಿಸಲು ಹಣವಿಲ್ಲದ ಮಹಿಳೆಯರಿಗೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ಸರ್ಕಾರಿ ಆಸ್ಪತೆಯಲ್ಲೇ ಸುರಕ್ಷಿತ ಹೆರಿಗೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆಯ ಉದ್ದೇಶ:

  • ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಸಂಭವಿಸುವ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
  • ಗರ್ಭಿಣಿಯರು ತಮ್ಮ ಗರ್ಭವಾಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಹಣ್ಣು ಹಂಪಲು, ಹಾಲು ಹಾಗೂ ಇನ್ನಿತರ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಲು ಆರ್ಥಿಕ ನೆರವನ್ನು ಒದಗಿಸುವುದು,
  • ಗರ್ಭಿಣಿ ಮಹಿಳೆಯರಿಗೆ ವಿವಿಧ ಕಂತುಗಳಲ್ಲಿ ಹಣವನ್ನು ಒದಗಿಸುವ ಮೂಲಕ ಗರ್ಭಿಣಿ ಮಹಿಳೆಯರು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಲು ಪ್ರೇರೇಪಿಸುವುದು.
  • ಮಗು ಜನಿಸುವಾಗ ಕಡಿಮೆ ತೂಕದೊಂದಿಗೆ ಜನಿಸುವುದನ್ನು ಕಡಿಮೆ ಮಾಡಿ ಮಗುವಿನ ಹುಟ್ಟಿನ ತೂಕ ಹಾಗೂ ಒಟ್ಟಾರೆ ಬೆಳವಣಿಗೆಯನ್ನು ಉತ್ತಮಪಡಿಸುವುದು.
  • ಪ್ರಸವದ ನಂತರ ಮಗುವಿಗೆ ಅಗತ್ಯವಾದ ವಸ್ತುಗಳನ್ನು ಸರ್ಕಾರವೇ ಮಡಿಲು ಕಿಟ್ ಮೂಲಕ ಉಚಿತವಾಗಿ ನೀಡುವುದು.

ಯೋಜನೆಯಡಿಯಲ್ಲಿ ಸಿಗುವ ಆರ್ಥಿಕ ನೆರವೆಷ್ಟು?

ಪ್ರಸೂತಿ ಆರೈಕೆ ಯೋಜನೆಯಡಿಯಲ್ಲಿ ಸಿಗುವ ಆರ್ಥಿಕ ನೆರವನ್ನು ಸರ್ಕಾರವು ಎರಡು ಕಂತುಗಳಲ್ಲಿ ನೀಡಲಿದ್ದು ಅವುಗಳ ವಿವರ ಈ ಕೆಳಕಂಡಂತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಗರ್ಭಿಣಿಯರಿಗೆ ಪ್ರಸೂತಿ ಆರೈಕೆ ಯೋಜನೆಯಡಿಯಲ್ಲಿ ಮೊದಲ ಕಂತಿನಲ್ಲಿ ರೂ. 2000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ದಂತೆ ಒಟ್ಟು ರೂ. 4000 ಆರ್ಥಿಕ ನೆರವು ಸಿಗುತ್ತದೆ ಹಾಗೂ ಸಾಮಾನ್ಯ ವರ್ಗಗಳ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ ಪ್ರತಿ ಕಂತುಗಳಲ್ಲಿ 1000 ದಂತೆ ಒಟ್ಟು ರೂ. 2000 ಆರ್ಥಿಕ ನೆರವು ಸಿಗುತ್ತದೆ.

ಈ ಎರಡು ಕಂತುಗಳ ಹಣ ಯಾವಾಗ ಬಿಡುಗಡೆ ಆಗುತ್ತದೆ?

  • ಮೊದಲ ಕಂತಿನ ಹಣ:

ಗರ್ಭಿಣಿ ಮಹಿಳೆಯರಿಗೆ ತಮ್ಮ ಗರ್ಭಧಾರಣೆಯ 2 ನೇ ತ್ರೈಮಾಸಿಕದಲ್ಲಿ ಕನಿಷ್ಠ 3 ಕಡ್ಡಾಯ ತಪಾಸಣೆ ಮಾಡಿಸಿದ ನಂತರ ಮೊದಲ ಕಂತಿನ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

  • ಎರಡನೇ ಕಂತಿನ ಹಣ:

ಮಗುವಿನ ಜನನವು ಸರ್ಕಾರಿ ಆಸ್ಪತ್ರೆಯಲ್ಲಿ ಆದ ತಕ್ಷಣವೇ ಎರಡನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಗರ್ಭಿಣಿ ಮಹಿಳೆಯರಿಗೆ ಸೌಲಭ್ಯ:

  • ಗರ್ಭಿಣಿ ಮಹಿಳೆಯರಿಗೆ ತಮ್ಮ ವರ್ಗಗಳಿಗೆ ಅನುಗುಣವಾಗಿ ರೂ. 2000 ದಿಂದ ರೂ. 4000 ದ ವರೆಗೆ ಆರ್ಥಿಕ ನೆರವು ಸಿಗುತ್ತದೆ.
  • ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮಗುವಿಗೆ ಅಗತ್ಯವಾದ ವಸ್ತುಗಳನ್ನು ಒಳಗೊಂಡ ಮಡಿಲು ಕಿಟ್ ನೀಡಲಾಗುತ್ತದೆ.
    • ಈ ಮಡಿಲು ಕಿಟ್ ಗಳಲ್ಲಿ ಮಗುವಿಗೆ ಬೇಕಾದ ಹೊಸ ಬಟ್ಟೆಗಳು, ಸೊಳ್ಳೆ ಪರದೆ, ಬೇಬಿ ಸೋಪ್, ಪೌಡರ್, ಆಯಿಲ್, ತಾಯಿ ಹೊದಿಕೆ, ಬೆಡ್ ಶೀಟ್, ಮಗುವಿಗೆ ಸ್ವೇಟರ್ ಮತ್ತು ಸಾಕ್ಸ್, ರಬ್ಬರ್ ಶೀಟ್ ಮತ್ತು ಟವೆಲ್ ಗಳು ಇರುತ್ತದೆ.

ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಬಿಪಿಎಲ್ ಕಾರ್ಡ್ ಹೊಂದಿರಬೇಕು ಇಲ್ಲವೇ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರಬೇಕು.
  • ಗರ್ಭಿಣಿ ಮಹಿಳೆಯರು ಸರ್ಕಾರಿ ಆಸ್ಪತ್ರೆಯಲೇ ಹೇರಿಗೆ ಮಾಡಿಸುವುದು ಕಡ್ಡಾಯ

ಗಮನಿಸಿ: ಈ ಯೋಜನೆಯು ಮೊದಲ ಎರಡು ಜೀವಂತ ಮಗುವಿನ ಹೆರಿಗೆಗೆ ಮಾತ್ರ ಸೀಮಿತವಾಗಿರುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಬಿಪಿಎಲ್ ರೇಷನ್ ಕಾರ್ಡ್
  • ವಾಸಸ್ಥಳ ದೃಢೀಕರಣ ಪತ್ರ
  • ಜಾತಿ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ತಾಯಿ ಕಾರ್ಡ್ /ANC ನೋಂದಣಿ ಸಂಖ್ಯೆ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಧಾರಣೆಯ ಸಮಯದಲ್ಲಿ ನಿಮ್ಮ ಭಾಗದ ಆಶಾ ಕಾರ್ಯಕರ್ತೆ ಅಥವಾ ಆರೋಗ್ಯ ಸಹಾಯಕರನ್ನು ಸಂಪರ್ಕಿಸಿ.
  • ನಂತರ ಅವರು ನಿಮ್ಮನ್ನು ಪ್ರಸೂತಿ ಆರೈಕೆ ಯೋಜನೆಯಡಿ ನೋಂದಾಯಿಸುತ್ತಾರೆ ಮತ್ತು ಅಗತ್ಯ ತಪಾಸಣೆಗೆ ಸಹಾಯ ಮಾಡುತ್ತಾರೆ.
  • ನೋಂದಣಿಯಾದ ನಂತರ ನಿಗದಿತ ಸಮಯಕ್ಕೆ ಎರಡು ಕಂತುಗಳಲ್ಲಿ ಅರ್ಹ ಗರ್ಭಿಣಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

ಕೊನೆಯ ಮಾತು:

ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರ ಹಾಗೂ ನವಜಾತ ಶಿಶುಗಳ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಪ್ರಸೂತಿ ಆರೈಕೆ ಯೋಜನೆಯನ್ನು ಜಾರಿಗೊಳಿಸಿದ್ದು, ನೀವೇನಾದರೂ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿದ್ದರೆ ಇಂದೇ ನಿಮ್ಮ ಭಾಗದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Comment