Students Kit: ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ₹8625 ಮೌಲ್ಯದ ಸ್ಟಡಿ ಕಿಟ್ ಉಚಿತ ವಿತರಣೆ । ಇಂದೇ ಅಪ್ಲೈ ಮಾಡಿ

Kit: ರಾಜ್ಯ ಸರ್ಕಾರದಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ಪ್ರತಿಯೊಬ್ಬ ಕಟ್ಟಡ ಕಾರ್ಮಿಕರ ಮಕ್ಕಳಿಗೂ ಕೂಡ ಶೈಕ್ಷಣಿಕ ಕಿಟ್ ಅನ್ನು ಕೊಡಲು ಸರ್ಕಾರವು ಮುಂದಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರವು ಈ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಕಾರ್ಮಿಕ ಇಲಾಖೆಯು ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಶೈಕ್ಷಣಿಕ ಕಿಟ್ ಯೋಜನೆಯನ್ನು ಜಾರಿಗೊಳಿಸಲಿದ್ದು, ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಕಿಟ್ ನಲ್ಲಿ ಏನೆಲ್ಲಾ ಇದೆ? ಈ ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು? ಏನೆಲ್ಲಾ ಅಗತ್ಯ ದಾಖಲೆಗಳಿರಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

Kit

ಯೋಜನೆಯ ಅವಲೋಕನ:

ಯೋಜನೆಯನ್ನು ಅನುಷ್ಠಾನ ಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ಶೈಕ್ಷಣಿಕ ಕಿಟ್ ಯೋಜನೆ
ಅರ್ಹ ಫಲಾನುಭವಿಗಳು ನೋಂದಾಯಿತ ಕಾರ್ಮಿಕರ ಮಕ್ಕಳು
ಯೋಜನೆಯ ಲಾಭ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳು ಹಾಗೂ ಲೇಖನಗಳನ್ನು ಒಳಗೊಂಡ ಕಿಟ್
ಕಿಟ್ ನ ಒಟ್ಟು ಮೌಲ್ಯ ರೂ. 8625/-
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಯೋಜನೆಯ ಬಗ್ಗೆ:

ಕರ್ನಾಟಕ ಸರ್ಕಾರವು 2026-27 ನೇ ಶೈಕ್ಷಣಿಕ ಸಾಲಿನಲ್ಲಿ SSLC ಹಾಗೂ PUC ಯಲ್ಲಿ ವ್ಯಾಸಂಗ ಮಾಡುವ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಫ್ರೀ ಶೈಕ್ಷಣಿಕ ಕಿಟ್ ಗಳನ್ನು ನೀಡಲು ಮುಂದಾಗಿದ್ದು, ಈ ಕಿಟ್ ಒಟ್ಟು ರೂ. 8625/- ಮೌಲ್ಯವನ್ನು ಹೊಂದಿದೆ.

ತಮ್ಮ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸಲು ಕಷ್ಟಕರವಾಗುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಕಿಟ್ ನೋಟ್ ಪುಸ್ತಕಗಳು, ಬ್ಯಾಗ್, ಪೆನ್, ಪೆನ್ಸಿಲ್ ಸೇರಿದಂತೆ ಇನ್ನಿತರ ಶೈಕ್ಷಣಿಕ ಸಾಮಗ್ರಿಗಳನ್ನು ಒಳಗೊಂಡಿದೆ.

ಯೋಜನೆಯ ಉದ್ದೇಶ:

  • ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:

ತಮ್ಮ ಮಕ್ಕಳ ಬ್ಯಾಗ್, ಪುಸ್ತಕಗಳು ಹಾಗೂ ಇನ್ನಿತರ ಶೈಕ್ಷಣಿಕ ವೆಚ್ಚವನ್ನು ಭರಿಸಲು ಕಾರ್ಮಿಕರಿಗೆ ಹೊರೆಯಾಗದಂತೆ ಸರ್ಕಾರವೇ ಭರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ಶಿಕ್ಷಣವನ್ನು ಉತ್ತೇಜಿಸುವುದು:

ಹಣಕಾಸಿನ ಸಮಸ್ಯೆಯಿಂದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಗಟ್ಟುವುದು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದು:

ರಾತ್ರಿ ಹಗಲೆನ್ನದೆ ಕಷ್ಟ ಪಟ್ಟು ದುಡಿಯುವ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಶೈಕ್ಷಣಿಕ ನೆರವು ನೀಡುವುದು ಈ ಯೋಜನೆಯ ಆಶಯವಾಗಿದೆ.

ಶೈಕ್ಷಣಿಕ ಕಿಟ್ ಯೋಜನೆಯಡಿಯಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ?

ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಅಡಿಯಲ್ಲಿ ಜಾರಿಗೊಳಿಸಲಾದ ಶೈಕ್ಷಣಿಕ ಕಿಟ್ ಯೋಜನೆಯು ₹115.84 ಕೋಟಿ ವೆಚ್ಚವನ್ನು ಒಳಗೊಂಡಿದ್ದು, ಸುಮಾರು 1.30 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿಯಲ್ಲಿ ಲಾಭ ದೊರಕಲಿದೆ. ಈ ಯೋಜನೆಯ ಲಾಭವನ್ನು ಪಡೆಯಲು 1 ನೇ ತರಗತಿಯಿಂದ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನೋಂದಾಯಿತ ಕಾರ್ಮಿಕರ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು?

  • ಪೋಷಕರು ಕಡ್ಡಾಯವಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿತರಾಗಿರಬೇಕು.
  • ಪೋಷಕರು ಹೊಂದಿರುವ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು.
  • ವಿದ್ಯಾರ್ಥಿಯು ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಾಖಲೆಗಳನ್ನು ನೀಡಬೇಕು.
  • ವಿದ್ಯಾರ್ಥಿಗಳು 1 ನೇ ತರಗತಿಯಿಂದ 12 ನೇ ತರಗತಿಯೊಳಗೆ ವ್ಯಾಸಂಗ ಮಾಡುತ್ತಿರಬೇಕು.
  • ಒಬ್ಬ ನಂದಾಯಿತ ಕಾರ್ಮಿಕರ ಕುಟುಂಬದ ಇಬ್ಬರು ಮಕ್ಕಳು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಶೈಕ್ಷಣಿಕ ಕಿಟ್ ಯಾವುದನ್ನೆಲ್ಲ ಒಳಗೊಂಡಿದೆ?

ಕರ್ನಾಟಕ ಸರ್ಕಾರವು ಕಾರ್ಮಿಕರ ಮಕ್ಕಳಿಗೆ ವಿತರಿಸುತ್ತಿರುವ ಕಿಟ್ ಕೇವಲ ಒಂದು ಬ್ಯಾಗನ್ನು ಮಾತ್ರ ಹೊಂದಿರದೆ ವಿದ್ಯಾರ್ಥಿಗಳ ಒಂದು ವರ್ಷಗಳ ಶೈಕ್ಷಣಿಕ ಅಗತ್ಯವನ್ನು ಪೂರೈಸುವ ಫುಲ್ ಪ್ಯಾಕೇಜ್ ಅನ್ನು ಒಳಗೊಂಡಿದೆ. ಕಿಟ್ ಒಳಗೆ ಏನೇನಿದೆ ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳೋಣ.

  • ನೋಟ್ ಪುಸ್ತಕ:

ವಿದ್ಯಾರ್ಥಿಗಳಿಗೆ ಅಗತ್ಯವಾಗುವ 100 ಹಾಗೂ 200 ಪೇಜ್ ನ 6 ಪುಸ್ತಕಗಳನ್ನು ಕಿಟ್ ನಲ್ಲಿ ನೀಡಲಾಗುತ್ತದೆ.

  • ಲೇಖನ ಸಾಮಗ್ರಿಗಳು:

ಪೆನ್ಸಿಲ್ ಬಾಕ್ಸ್, ಶಾರ್ಪ್ನರ್, ಎರೇಸರ್, ಜಾಮಿಟ್ರಿ ಬಾಕ್ಸ್, ತಾಂತ್ರಿಕ ಉಪಕರಣಗಳನ್ನು ಒಳಗೊಂಡಿದೆ.

  • ಶಾಲಾ ಬ್ಯಾಗ್ ಮತ್ತು ಪುಸ್ತಕಗಳು, ಸ್ಟೀಲ್ ವಾಟರ್ ಬಾಟಲ್, ಟಿಫರ್ ಬಾಕ್ಸ್
  • ಹಾಗೂ ಇತರೆ ಶೈಕ್ಷಣಿಕ ಪೂರಕ ವಸ್ತುಗಳು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು?

  • ಲೇಬರ್ ಕಾರ್ಡ್
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ವ್ಯಾಸಂಗ ಪ್ರಮಾಣಪತ್ರ
  • ರೇಷನ್ ಕಾರ್ಡ್
  • ವಿದ್ಯಾರ್ಥಿಗಳ ಪಾಸ್ ಪೋರ್ಟ್ ಅಳತೆಯ ಫೋಟೋ

ಶೈಕ್ಷಣಿಕ ಕಿಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೋಂದಾಯಿತ ಕಾರ್ಮಿಕರು ಶೈಕ್ಷಣಿಕ ಕಿಟ್ ಯೋಜನೆಯೆಗೆ ಅರ್ಜಿಯನ್ನು ಎರಡು ವಿಧಾನಗಳ ಮೂಲಕ ಸಲ್ಲಿಸಬಹುದಾಗಿದ್ದು, ಕಾರ್ಮಿಕರು ಈ ಕೆಳಗೆ ನೀಡಿರುವ ಹಂತವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

  • ಆನ್ಲೈನ್ ಮೂಲಕ:
    • ಅರ್ಹ ಫಲಾನುಭವಿಗಳು ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
    • ನಂತರ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಲಭ್ಯವಿರುವ ಶೈಕ್ಷಣಿಕ ಕಿಟ್ ಯೋಜನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
    • ಅಲ್ಲಿ ಕೇಳಲಾಗುವ ಲೇಬರ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ , ವಿದ್ಯಾರ್ಥಿಗಳ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ತರಗತಿ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
    • ಶೈಕ್ಷಣಿಕ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ಸೇವಾ ಕೇಂದ್ರಗಳ ಮೂಲಕ:
    • ನೋಂದಾಯಿತ ಕಾರ್ಮಿಕರು ತಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಗಳಿಗೆ ಭೇಟಿ ನೀಡಿ.
    • ಅಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಜಾರಿಗೊಳಿಸಿದ ಶೈಕ್ಷಣಿಕ ಕಿಟ್ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದುಕೊಂಡು.
    • ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
    • ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ ಕಚೇರಿಗೆ ಸಲ್ಲಿಸಿ.

ಅಂತಿಮ ಮಾತು:

ಕರ್ನಾಟಕ ಸರ್ಕಾರವು ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಅವರಿಗೂ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಶೈಕ್ಷಣಿಕ ಕಿಟ್ ಯೋಜನೆಯನ್ನು ಜಾರಿಗೊಳಿಸಿದ್ದು, ನೀವೇನಾದರೂ ಕಾರ್ಮಿಕರ ಮಕ್ಕಳಾಗಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಇಂದೇ ಆನ್ಲೈನ್ ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.


ಇತರೆ ಪ್ರಮುಖ ಲಿಂಕುಗಳು:

Leave a Comment