ನಮಸ್ಕಾರ ಸ್ನೇಹಿತರೆ, ನೀವೇನಾದರೂ ಪದವಿಯನ್ನು ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ? ಅಥವಾ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಭಾರತ ಸರ್ಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಮೆಕಾನ್ ಲಿಮಿಟೆಡ್ ಸಂಸ್ಥೆಯು 2026 ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
MECON Recruitment in Kannada
ಮೆಕಾನ್ ಲಿಮಿಟೆಡ್ ಸಂಸ್ಥೆಯು ಅಸಿಸ್ಟೆಂಟ್ (ಮಾನವ ಸಂಪನ್ಮೂಲ, ಆಡಳಿತ, ಸಚಿವಾಲಯ ಸೇವೆ), ಅಕೌಂಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ನಿಗದಿತ ಅಂಕಗಳೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ ಹಾಗೂ BBA ಸೇರಿದಂತೆ ಇನ್ನಿತರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಸಿಸ್ಟೆಂಟ್ ಹಾಗೂ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 07-04-2026 ರಿಂದ ಪ್ರಾರಂಭಗೊಂಡು ದಿನಾಂಕ 06-05-2026 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಹುದ್ದೆಯ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ವೇತನ ಶ್ರೇಣಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆ | ಮೆಟಲರ್ಜಿಕಲ್ ಅಂಡ್ ಎಂಜಿನಿಯರಿಂಗ್ ಕಾನ್ಸಲ್ಟೆಂಟ್ (MECON) ಲಿಮಿಟೆಡ್ |
| ಹುದ್ದೆಯ ಹೆಸರು | ಅಸಿಸ್ಟೆಂಟ್ ಹಾಗೂ ಅಕೌಂಟೆಂಟ್ ಹುದ್ದೆಗಳು |
| ಹುದ್ದೆಯ ಸಂಖ್ಯೆ | ಒಟ್ಟು 24 ಹುದ್ದೆಗಳು |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಹುದ್ದೆಯ ಬಗ್ಗೆ:
ಭಾರತ ಸರ್ಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಕಾನ್ ಸಂಸ್ಥೆಯು ಅಕೌಂಟೆಂಟ್ ಹಾಗೂ ಅಸಿಸ್ಟೆಂಟ್ (ಮಾನವ ಸಂಪನ್ಮೂಲ) ಸೇರಿದಂತೆ ಇನ್ನಿತರ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಉತ್ತಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಗರಿಷ್ಟ 28 ವರ್ಷದೊಳಗಿನ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದು ಸರ್ಕಾರಿ ಉದ್ಯೋಗವಾಗಿದ್ದು, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.
ಹುದ್ದೆಯ ಸಂಕ್ಷಿಪ್ತ ವಿವರ:
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
| ಅಸಿಸ್ಟೆಂಟ್ (ಮಾನವ ಸಂಪನ್ಮೂಲ) | 02 ಹುದ್ದೆಗಳು |
| ಅಸಿಸ್ಟೆಂಟ್ (ಆಡಳಿತ) | 02 ಹುದ್ದೆಗಳು |
| ಅಸಿಸ್ಟೆಂಟ್ (ಸಚಿವಾಲಯ ಸೇವೆ) | 06 ಹುದ್ದೆಗಳು |
| ಅಕೌಂಟೆಂಟ್ | 14 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
- ಅಸಿಸ್ಟೆಂಟ್:
- ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎ ಪದವಿಯನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
- ಅಕೌಂಟೆಂಟ್:
- ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾದಲ್ಲಿ ಇಂಟರ್ಮಿಡಿಯೇಟ್ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
ಮೆಕಾನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹಾಗೂ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 03-03-2026 ಕ್ಕೆ ಅನ್ವಯವಾಗುವಂತೆ ಗರಿಷ್ಟ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ
- ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ
- ಅಂಗವಿಕಲ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ
- ಅಂಗವಿಕಲ (SC/ ST) ಅಭ್ಯರ್ಥಿಗಳಿಗೆ 15 ವರ್ಷ
ಅರ್ಜಿ ಶುಲ್ಕ:
ಮೆಕಾನ್ ಲಿಮಿಟೆಡ್ ಸಂಸ್ಥೆಯು ಅಸಿಸ್ಟೆಂಟ್ ಹಾಗೂ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 625/-
- ಸಾಮಾನ್ಯ, ಒಬಿಸಿ, ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 875/-
ವೇತನ ಶ್ರೇಣಿ:
ಅಸಿಸ್ಟೆಂಟ್ ಹಾಗೂ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 27,710/- ರಿಂದ ರೂ. 53,590/- ವರೆಗೆ ವೇತನವನ್ನು ನಿಗದಿಪಡಿಸಲಾಗುತ್ತದೆ. ಇವುಗಳ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ವಯಸ್ಸಿನ ಪುರಾವೆ
- ಶೈಕ್ಷಣಿಕ ಪ್ರಮಾಣಪತ್ರ
- ಶೈಕ್ಷಣಿಕ ಅಂಕಪಟ್ಟಿ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಅಭ್ಯರ್ಥಿಗಳ ಸಹಿ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೊದಲು ಮೆಕಾನ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಕೆರಿಯರ್ ವಿಭಾಗದಲ್ಲಿರುವ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕೇಳಲಾದ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಸಂದರ್ಶನ
ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಅಧಿಕೃತ ಅಧಿಸೂಚನೆ ಪ್ರಕಟಗೊಂಡ ದಿನಾಂಕ | 03-03-2026 |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 07-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 06-05-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 06-05-2026 |
ಪ್ರಮುಖ ಲಿಂಕುಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು:
ಮೆಕಾನ್ ಲಿಮಿಟೆಡ್ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗವನ್ನು ಕಲ್ಪಿಸಿದ್ದು, ಕೇಂದ್ರ ಸರ್ಕಾರಿ ಉದ್ಯೋಗದ ಕನಸ್ಸನ್ನು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅರ್ಜಿ ಸಲ್ಲಿಸಲು ಮೇ 6 ಕೊನೆಯ ದಿನಾಂಕವಾಗಿದ್ದು, ಈ ಒಂದು ಹುದ್ದೆಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ನೀವೇನಾದರೂ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ ಸರಿಯಾದ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು:
- BBMP: ಹಾವೇರಿ & ರಾಣೆಬೆನ್ನೂರು ನಗರಸಭೆಯಲ್ಲಿ ಭರ್ಜರಿ ನೇಮಕಾತಿ 2026! ಏಪ್ರಿಲ್ 30 ಕೊನೆಯ ದಿನಾಂಕ
- NHM: ₹88,000/- ವೇತನ! ರಾಷ್ಟೀಯ ಆರೋಗ್ಯ ಮಿಷನ್ ಭರ್ಜರಿ ನೇಮಕಾತಿ । ಪರೀಕ್ಷೆ ಇಲ್ಲದೇ ಸರ್ಕಾರಿ ಉದ್ಯೋಗಾವಕಾಶ!
- NIMHANS: ಬೆಂಗಳೂರಿನ ನಿಮ್ಹಾನ್ಸ್ ನೇಮಕಾತಿ 2026! ನೇರ ಸಂದರ್ಶನ + ಅರ್ಜಿ ಶುಲ್ಕ ಇಲ್ಲ
- DCC Bank: ರೂ. 83,700/- ವೇತನ! ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ಭರ್ಜರಿ ನೇಮಕಾತಿ 2026 । ಮೇ 6 ಕೊನೆಯ ದಿನಾಂಕ
- DHFWS: ₹1.30 ಲಕ್ಷ ವೇತನ! ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ನೇಮಕಾತಿ