NIA: ₹1,42,400 ವೇತನ! ರಾಷ್ಟೀಯ ತನಿಖಾ ಇಲಾಖೆಯಲ್ಲಿ ಭರ್ಜರಿ ನೇಮಕಾತಿ 2026 । ಮೇ 18 ಕೊನೆಯ ದಿನಾಂಕ

ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರ ಪ್ರತಿಷ್ಠಿತ ಸಂಸ್ಥೆಯಾದ ರಾಷ್ಟೀಯ ತನಿಖಾ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಈ ಒಂದು ಸಂಸ್ಥೆಯು 2026 ನೇ ಸಾಲಿನಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಸೆಕ್ಷನ್ ಆಫೀಸರ್, ಸಹಾಯಕ, ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಡಿವಿಷನ್ ಕ್ಲರ್ಕ್ ಸೇರಿದಂತೆ ಒಟ್ಟು 29 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

NIA Recruitment in Kannada

2nd PUC ಅಥವಾ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 18-03-2026 ದಿಂದ ಪ್ರಾರಂಭಗೊಂಡು 18-05-2026 ರ ವರೆಗೂ ಅವಕಾಶ ಕಲ್ಪಿಸಲಾಗಿದೆ.

ಈ ಒಂದು ನೇಮಕಾತಿಯು ನಿಯೋಜನೆ ಆಧಾರದ ಮೇಲೆ ನಡೆಯಲಿದ್ದು, ಈ ಒಂದು ಹುದ್ದೆಗೆ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ.

NIA

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆ ಹೆಸರು ರಾಷ್ಟೀಯ ತನಿಖಾ ಸಂಸ್ಥೆ
ಹುದ್ದೆಯ ಹೆಸರು ಸೆಕ್ಷನ್ ಆಫೀಸರ್, ಸಹಾಯಕ, ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಡಿವಿಷನ್ ಕ್ಲರ್ಕ್, ಸ್ಟೈನೋಗ್ರಾಫರ್ ಗ್ರೇಡ್ – 1 ಹುದ್ದೆಗಳು
ಹುದ್ದೆಯ ಸಂಖ್ಯೆ 29 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ರಾಷ್ಟೀಯ ತನಿಖಾ ಸಂಸ್ಥೆಯು 2026 ರ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 29 ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಹುದ್ದೆಗಳನ್ನು ಸೆಕ್ಷನ್ ಆಫೀಸರ್, ಸಹಾಯಕ, ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಡಿವಿಷನ್ ಕ್ಲರ್ಕ್, ಸ್ಟೈನೋಗ್ರಾಫರ್ ಗ್ರೇಡ್ – 1 ಹುದ್ದೆಗಳಾಗಿ ವರ್ಗಿಕರಣ ಮಾಡಲಾಗಿದೆ. ಯಾವುದೇ ಪದವಿ ಪೂರ್ಣಗೊಳಿಸಿದ ಗರಿಷ್ಟ 56 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ವಿವರ:

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ
ಸೆಕ್ಷನ್ ಆಫೀಸರ್ / ಆಫೀಸ್ ಸೂಪರ್ ಇಂಟೆಂಡೆಂಟ್ 03 ಹುದ್ದೆಗಳು
ಸಹಾಯಕ 03 ಹುದ್ದೆಗಳು
ಅಪ್ಪರ್ ಡಿವಿಷನ್ ಕ್ಲರ್ಕ್ 03 ಹುದ್ದೆಗಳು
ಲೋವರ್ ಡಿವಿಷನ್ ಕ್ಲರ್ಕ್ 06 ಹುದ್ದೆಗಳು
ಸ್ಟೈನೋಗ್ರಾಫರ್ ಗ್ರೇಡ್ – 114 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಸೆಕ್ಷನ್ ಆಫೀಸರ್:
    • ಸೆಕ್ಷನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
    • ಇವುಗಳ ಜೊತೆಗೆ ವರ್ಡ್ ಪ್ರೊಸೆಸ್ಸಿಂಗ್, ಸ್ಪ್ರೆಡ್ ಶೀಟ್ ಮತ್ತು ಸ್ಲೈಡ್ ಜನರೇಷನ್ ಅಲ್ಲಿ ಕಂಪ್ಯೂಟರ್ ಪ್ರಾವೀಣ್ಯತೆಯನ್ನು ಹೊಂದಿರಬೇಕು.
    • ಪೆ ಮ್ಯಾಟ್ರಿಕ್ ಮಟ್ಟ – 6 ರಲ್ಲಿ 5 ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು.
  • ಸಹಾಯಕ:
    • ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
    • ಸಿಬ್ಬಂದಿ ಆಯ್ಕೆ ಆಯೋಗವು ನಡೆಸಿದ ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ಪೆ ಮ್ಯಾಟ್ರಿಕ್ ಮಟ್ಟ – 5 ರಲ್ಲಿ 6 ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು.
  • ಅಪ್ಪರ್ ಡಿವಿಷನ್ ಕ್ಲರ್ಕ್:
    • ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು.
    • ಪೆ ಮ್ಯಾಟ್ರಿಕ್ ಮಟ್ಟ – 2 ರಲ್ಲಿ 8 ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು.
  • ಲೋವರ್ ಡಿವಿಷನ್ ಕ್ಲರ್ಕ್:
    • ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 12 ನೇ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸಮಾನವಾದ ಹುದ್ದೆಯಲ್ಲಿರಬೇಕು.
  • ಸ್ಟೈನೋಗ್ರಾಫರ್ ಗ್ರೇಡ್ – 1:
    • ಸ್ಟೈನೋಗ್ರಾಫರ್ ಗ್ರೇಡ್ – 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಹೊಂದಿರಬೇಕು. ಉತ್ತಮ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
    • ಶೀಘ್ರ ಲಿಪಿ ವೇಗವು 10 ನಿಮಿಷಕ್ಕೆ 100 ಪದಗಳಿರಬೇಕು.
    • ಟ್ರಾನ್ಸ್ಕ್ರಿಪ್ಶನ್ ವೇಗವು ಹಿಂದಿಯಲ್ಲಿ 55 ನಿಮಿಷಗಳು ಹಾಗೂ ಇಂಗ್ಲಿಷ್ ನಲ್ಲಿ 40 ನಿಮಿಷಗಳಿರಬೇಕು.

ವಯೋಮಿತಿ ವಿವರ:

ರಾಷ್ಟೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಗರಿಷ್ಟ 56 ವರ್ಷ ವಯೋಮಿತಿಯನ್ನು ಮೀರಿರಬಾರದು.

ಇದನ್ನು ಗಮನಿಸಿ: “ಈ ಒಂದು ನೇಮಕಾತಿಯು ನಿಯೋಜನೆಯ ಆಧಾರದ ಮೇಲೆ ನಡೆಯುವುದರಿಂದ, ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಕೇಂದ್ರಾಡಳಿತ ಪ್ರದೇಶಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ ಸಡಿಲಿಕೆ ವಿವರ:

ರಾಷ್ಟೀಯ ತನಿಖಾ ಸಂಸ್ಥೆಗಳ ನಿಯಮಾನುಸಾರ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಈ ಒಂದು ನೇಮಕಾತಿಯು ನಿಯೋಜನೆಯ ಆಧಾರದ ಮೇಲೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ತಾವು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಅನುಮತಿಯೊಂದಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ:

ಹುದ್ದೆಯ ಹೆಸರು ಪೇ ಮ್ಯಾಟ್ರಿಕ್ಸ್ ಲೆವೆಲ್ಸ್ ವೇತನ ಶ್ರೇಣಿ
ಸೆಕ್ಷನ್ ಆಫೀಸರ್ ಪೇ ಮ್ಯಾಟ್ರಿಕ್ಸ್ ಲೆವೆಲ್ – 7₹44,900 – ₹1,42,400
ಸಹಾಯಕ ಪೇ ಮ್ಯಾಟ್ರಿಕ್ಸ್ ಲೆವೆಲ್ – 6₹35,400 – ₹1,12,400
ಅಪ್ಪರ್ ಡಿವಿಷನ್ ಕ್ಲರ್ಕ್ ಪೇ ಮ್ಯಾಟ್ರಿಕ್ಸ್ ಲೆವೆಲ್ – 4₹25,500 – ₹81,100
ಲೋವರ್ ಡಿವಿಷನ್ ಕ್ಲರ್ಕ್ ಪೇ ಮ್ಯಾಟ್ರಿಕ್ಸ್ ಲೆವೆಲ್ – 2₹19,900 – ₹62,300
ಸ್ಟೈನೋಗ್ರಾಫರ್ ಗ್ರೇಡ್ – 1ಪೇ ಮ್ಯಾಟ್ರಿಕ್ಸ್ ಲೆವೆಲ್ – 6₹35,400 – ₹1,12,400

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಶೈಕ್ಷಣಿಕ ಪ್ರಮಾಣಪತ್ರ
  • ಶೈಕ್ಷಣಿಕ ಅಂಕಪಟ್ಟಿ
  • ಅನುಭವ ಪ್ರಮಾಣಪತ್ರ
  • ವಿಜಿಲೆನ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ
  • ಇಂಟೆಗ್ರಿಟಿ ಪ್ರಮಾಣಪತ್ರ
  • ವಯಸ್ಸಿನ ಪುರಾವೆ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಅಭ್ಯರ್ಥಿಗಳ ಸಹಿ
  • ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏನ್.ಐ.ಎ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಳ್ಳಿ.
  • ಅಪ್ಲಿಕೇಶನ್ ಫಾರ್ಮ್ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಶೈಕ್ಷಣಿಕ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ ಸೇರಿದಂತೆ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಇವುಗಳ ಜೊತೆಗೆ ಕಡ್ಡಾಯವಾಗಿ 5 ವರ್ಷಗಳ ದೃಢೀಕೃತ APAR ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
  • ನಂತರ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಅನ್ನು ಅಭ್ಯರ್ಥಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಮುಖ್ಯಸ್ಥರ ಸಹಿಯೊಂದಿಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ಸಲ್ಲಿಸಿ.
ವಿಳಾಸ: “ಡಿ.ಐ.ಜಿ (ಅಡ್ಮಿನ್), ಏನ್.ಐ.ಎ ಹೆಚ್.ಕ್ಯೂ, ಸಿ.ಜಿ.ಒ ಕಾಂಪ್ಲೆಕ್ಸ್, ಲೋಧಿ ರೋಡ್, ನವದೆಹಲಿ – 110 003”

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳ ದಾಖಲೆ ಪರಿಶೀಲನೆ
  • ಅಭ್ಯರ್ಥಿಗಳ ಹಿಂದಿನ 5 ವರ್ಷಗಳ ವಾರ್ಷಿಕ ಕಾರ್ಯಕ್ಷಮತೆ ವರದಿಗಳ ಮೌಲ್ಯಮಾಪನ
  • ವಿಜಿಲೆನ್ಸ್ ಹಾಗೂ ಇಂಟಿಗ್ರಿಟಿ ಪರಿಶೀಲನೆ
  • ಅಭ್ಯರ್ಥಿಗಳ ಸೇವಾ ಅನುಭವ ಹಾಗೂ ಅರ್ಹತೆಗಳ ಆಧಾರದ ಮೇಲೆ ಅಂತಿಮ ಆಯ್ಕೆ

ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅಧಿಕೃತ ಅಧಿಸೂಚನೆ ಪ್ರಕಟಗೊಂಡ ದಿನಾಂಕ 18-03-2026
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 18-03-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-05-2026

ಪ್ರಮುಖ ಲಿಂಕುಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಕೊನೆಯ ಮಾತು:

ರಾಷ್ಟೀಯ ತನಿಖಾ ಸಂಸ್ಥೆಯು ಸೆಕ್ಷನ್ ಆಫೀಸರ್, ಸಹಾಯಕ, ಅಪ್ಪರ್ ಡಿವಿಷನ್ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಒಂದು ನೇಮಕಾತಿಯು ನಿಯೋಜಿತ ಆಧಾರದ ಮೇಲೆ ನಡೆಯುವುದರಿಂದ ಅಭ್ಯರ್ಥಿಗಳು ಕಡ್ಡಾಯವಾಗಿ ದೃಢೀಕೃತ APAR ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾಗಿ ಅರ್ಹ ಅಭ್ಯರ್ಥಿಗಳು ಈ ಎಲ್ಲಾ ದಾಖಲೆಗಳೊಂದಿಗೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಅನ್ನು ಸಂಬಂಧಿತ ಕಚೇರಿಗೆ ಸಲ್ಲಿಸಿ.


ಇತರೆ ಪ್ರಮುಖ ಲಿಂಕುಗಳು:

Leave a Comment