ಉದ್ಯೋಗ ಪ್ರಿಯರಿಗೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯೊಂದು ಇದೀಗ ಪ್ರಕಟವಾಗಿದೆ. ಮುಖ್ಯವಾಗಿ ಈ ನೇಮಕಾತಿ ಪ್ರಕ್ರಿಯೆ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅದೆಷ್ಟು ಯುವಕರು ತಮ್ಮ ವೃತ್ತಿ ಜೀವನವನ್ನು 2026 ನೇ ಸಾಲಿನಲ್ಲಿ ಆರಂಭಿಸಲು ಒಳ್ಳೆಯ ಆಪರ್ಚುನಿಟಿ ಅಂದರೆ ತಪ್ಪಾಗುವುದಿಲ್ಲ.
Revenue Department Recruitment in Kannada
ಮುಖ್ಯವಾಗಿ ನೀವಿಲ್ಲಿ ಗಮನಿಸುವುದಾದರೆ ಈ ನೇಮಕಾತಿಯು ಪ್ರಮುಖವಾಗಿ ನ್ಯಾಯಾಲಯಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳನ್ನ ಸಮರ್ಪಕವಾಗಿ ನಿರ್ವಹಿಸಲು ಅನುಭವಿ ತಜ್ಞರನ್ನು ಹುಡುಕುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು 70,000 ವರೆಗೆ ಆಕರ್ಷಕ ವೇತನವನ್ನು ನೀಡುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆಳಗೆ ಕೊಡಲಾದ ಸಂಪೂರ್ಣ ಮಾಹಿತಿಯನ್ನು ತಿಳಿದು ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಮುಖ್ಯ ಹೈಲೆಟ್ಸ್:
| ಮುಖ್ಯ ಅಂಶ | ವಿವರ |
|---|---|
| ಹುದ್ದೆ | ಕಾನೂನು ಸಲಹೆಗಾರ (Legal Advisor) |
| ಇಲಾಖೆ | ಕಂದಾಯ ಇಲಾಖೆ |
| ಉದ್ಯೋಗ ಸ್ಥಳ | ಬೆಂಗಳೂರು |
| ವೇತನ | ರೂ.70,000 ಪ್ರತಿ ತಿಂಗಳು |
| ವಿದ್ಯಾರ್ಹತೆ | LLB / LLM |
| ಅನುಭವ | 10 ವರ್ಷ ಬಾರ್ ಕೌನ್ಸಿಲ್ + 5 ವರ್ಷ ಹೈಕೋರ್ಟ್ ಅನುಭವ |
| ಕೊನೆಯ ದಿನಾಂಕ | 28 ಮಾರ್ಚ್ 2026 |
ಹುದ್ದೆಗಳ ಪಕ್ಕ ವಿವರ (Post Details):
ಆತ್ಮೀಯ ಸ್ನೇಹಿತರೆ ಪ್ರಸ್ತುತ ಅಧಿಸೂಚನೆಯ ಪ್ರಕಾರ ಕಂದಾಯ ಇಲಾಖೆಯಲ್ಲಿ ಲಭ್ಯವಿರುವ ಹುದ್ದೆಯ ಮಾಹಿತಿಯ ವಿವರಗಳು ಈ ಕೆಳಗೆ ತಿಳಿಸಲಾಗಿದೆ.
- ಕಾನೂನು ಸಲಹೆಗಾರರು (Legal Advisor)
ಈ ನೇಮಕಾತಿಯಡಿ “ಕಾನೂನು ಸಲಹೆಗಾರ” ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಇದು ಅತ್ಯಂತ ಜವಾಬ್ದಾರಿಯುತ ಮತ್ತು ಪರಿಣತಿ ಅಗತ್ಯವಿರುವ ಹುದ್ದೆಯಾಗಿದ್ದು, ಮುಖ್ಯವಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದೆ.
ನಿಮ್ಮಲ್ಲಿ ಇರಬೇಕಾದ ಶಿಕ್ಷಣದ ಅರ್ಹತೆ (Educational Qualification):
ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಾನೂನು ಕ್ಷೇತ್ರದಲ್ಲಿ ಸೂಕ್ತವಾದ ಶೈಕ್ಷಣಿಕ ಅರ್ಹತೆ ಹಾಗೂ ಅನುಭವವನ್ನು ಹೊಂದಿರಲೇಬೇಕೆಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಹಾಗಿದ್ದರೆ ಕೆಳಗೆ ನೋಡೋಣ ಬನ್ನಿ.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ನೀವು ಕಾನೂನು ಪದವಿ (LLB) ಅಥವಾ ಕಾನೂನು ಸ್ನಾತಕೋತ್ತರ ಪದವಿ (LLM) ಪಡೆದಿರಬೇಕು
- LLM ಪದವೀಧರರಿಗೆ ನೇಮಕಾತಿಯಲ್ಲಿ ಹೆಚ್ಚುವರಿ ಆದ್ಯತೆ ನೀಡಲಾಗುತ್ತದೆ
- ಅಭ್ಯರ್ಥಿಯು ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿರಬೇಕು
- ಹೈಕೋರ್ಟ್‌ನಲ್ಲಿ ಕನಿಷ್ಠ 5 ವರ್ಷಗಳ ವಕಾಲತ್ತು ನಡೆಸಿದ ಅನುಭವ ಕಡ್ಡಾಯ
- ನಿವೃತ್ತ ಜಿಲ್ಲಾ ನ್ಯಾಯಾಧೀಶರು ಈ ಹುದ್ದೆಗೆ ಹೆಚ್ಚುವರಿ ಆದ್ಯತೆ ಪಡೆಯುತ್ತಾರೆ
- ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಭೂಸ್ವಾಧೀನ ಕಾಯ್ದೆ ಮತ್ತು ಕಂದಾಯ ನಿಯಮಗಳಲ್ಲಿ ಪರಿಣತಿ ಹೊಂದಿರುವ ನಿವೃತ್ತ ಅಧಿಕಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ
ವೇತನ ಶ್ರೇಣಿ (Monthly Salary):
ಕಂದಾಯ ಇಲಾಖೆಯ ಕಾನೂನು ಸಲಹೆಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗುತ್ತಿಗೆ ಆಧಾರದ ಮೇಲೆ ವೇತನವನ್ನು ನೀಡಲಾಗುತ್ತದೆ. ಆದರೆ ಯಾವುದೇ ಸರ್ಕಾರಿ ಭತ್ಯೆಗಳನ್ನು ನೀಡಲಾಗುವುದಿಲ್ಲ.
- ಕಾನೂನು ಸಲಹೆಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹70,000 ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ, ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹಾಗೂ ವೃತ್ತಿ ಅನುಭವಗಳ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅಂತಿಮವಾಗಿ ವೇತನವನ್ನು ನಿಗದಿಪಡಿಸಲಾಗುತ್ತದೆ.
ಅರ್ಜಿ ಶುಲ್ಕ:
ಕಂದಾಯ ಇಲಾಖೆಯ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ಅಭ್ಯರ್ಥಿಗಳು ಉಚಿತವಾಗಿ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಕಾನೂನು ಸಲಹೆಗಾರ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ಕೆಳಗೆ ನೀಡಿರುವ ರೀತಿಯಲ್ಲಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ತಮ್ಮ ಶೈಕ್ಷಣಿಕ ದಾಖಲೆಗಳು, ವೈಯಕ್ತಿಕ ದಾಖಲೆಗಳು, ವೃತ್ತಿ ಅನುಭವ ಪ್ರಮಾಣಪತ್ರ, ಬಾರ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ, ನಿವೃತ್ತಿ ಪ್ರಮಾಣಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
- ನಂತರ ಹುದ್ದೆಗೆ ಸಂಬಂಧಿಸಿದ ನಿಗದಿತ ಅರ್ಜಿ ನಮೂನೆ ಅಥವಾ ಬಿಳಿ ಹಳೆಯ ಮೇಲೆ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ
- ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 28-03-2026 ರೊಳಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ಸಲ್ಲಿಸಿ.
| ಅರ್ಜಿ ಸಲ್ಲಿಸುವ ವಿಳಾಸ: “ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ, ವಿಶ್ವೇಶ್ವರಯ್ಯ ಕೇಂದ್ರ, ದೊಡ್ಡ ಗೋಪುರ, 6 ನೇ ಮಹಡಿ, ಬೆಂಗಳೂರು – 560 001” |
ಆಯ್ಕೆ ಪ್ರಕ್ರಿಯೆ:
- ಶಾರ್ಟ್ ಲಿಸ್ಟ್:
ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಹಾಗೂ ವೃತ್ತಿ ಅನುಭವಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ತಯಾರಿಸಲಾಗುತ್ತದೆ.
ಈ ಒಂದು ಹಂತದಲ್ಲಿ ಯಾರು ಹೆಚ್ಚಿನ ವೃತ್ತಿ ಅನುಭವವನ್ನು ಹಾಗೂ ನ್ಯಾಯಾಲಯದ ಪ್ರಕರಣಗಳನ್ನು ಉತ್ತಮ ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೋ ಅವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
- ಸಂದರ್ಶನ:
ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಒಂದು ಸಂದರ್ಶನದಲ್ಲಿ ಅಭ್ಯರ್ಥಿಗಳು ಕಂದಾಯ ಇಲಾಖೆಯ ನಿಯಮಗಳ ಮೇಲಿನ ಹಿಡಿತ ಹಾಗೂ ಅಭ್ಯರ್ಥಿಗಳ ಕಾನೂನು ಜ್ಞಾನವನ್ನು ಪರೀಕ್ಷಿಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
| ಪ್ರಮುಖ ವಿವರಗಳು | ಪ್ರಮುಖ ಲಿಂಕುಗಳು |
| ಅಧಿಕೃತ ಅಧಿಸೂಚನೆ ಪ್ರಕಟಗೊಂಡ ದಿನಾಂಕ | 17-03-2026 |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 17-03-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 28-03-2026 |
ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು:
| ಪ್ರಮುಖ ವಿವರಗಳು | ಪ್ರಮುಖ ಲಿಂಕುಗಳು |
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಮಾಹಿತಿಗಾಗಿ:
| “ಕಚೇರಿಯ ದೂರವಾಣಿ ಸಂಖ್ಯೆ 080 – 22860219 ಗೆ ಕರೆ ಮಾಡಿ” |
ಅಂತಿಮ ತೀರ್ಮಾನ:
ನೀವೇನಾದರೂ ಕಾನೂನು ಪದವಿಯನ್ನು ಅಥವಾ ಕಾನೂನು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿದ್ದರೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ನಿಮಗೊಂದು ಸುವರ್ಣಾವಕಾಶವಾಗಿದೆ. ನೀವು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ದಿನಾಂಕ 28-03-2026 ರೊಳಗೆ ಸಂಬಂಧಿತ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು:
- Coin Sale: ನಿಮ್ಮ ಬಳಿ ಇರುವ ಹಳೆಕಾಲದ ನಾಣ್ಯ ಬೆಲೆ ಗೊತ್ತಾ? ಒಂದು ನಾಣ್ಯಕ್ಕೆ ₹1 ಲಕ್ಷ ಸಿಗುತ್ತೆ!
- RGRHCL : ಸ್ವಂತ ಮನೆ ಕಟ್ಟಲು ಸಿಗಲಿದೆ ₹2 ಲಕ್ಷ! ಇಲ್ಲಿದೆ ಸಂಪೂರ್ಣ ಮಾಹಿತಿ!
- Udyogini yojana : 3 ಲಕ್ಷ: ಉದ್ಯೋಗಿನಿ ಯೋಜನೆ 2026 ! ಅರ್ಜಿ ಸಲ್ಲಿಸುವುದು ಹೇಗೆ? Loan Scheme
- PMEGP ಸಾಲ: ಯೋಜನೆಯಲ್ಲಿ ₹25 ಲಕ್ಷದಿಂದ ₹50 ಲಕ್ಷ ಸಾಲ ಸೌಲಭ್ಯ ಅರ್ಹತೆ, ಸಬ್ಸಿಡಿ, ಆನ್ಲೈನ್ ಅರ್ಜಿ!
- Free Training: ಕರ್ನಾಟಕ ಸರ್ಕಾರದಿಂದ ಉಚಿತ ಡ್ರೈವಿಂಗ್ ತರಬೇತಿ + ಫ್ರೀ ಲೈಸೆನ್ಸ್! ಇಂದೇ ಅಪ್ಲೈ ಮಾಡಿ